fbpx
god

ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯ ಶ್ಲೋಕದ ಮಹತ್ವ

ಈ ಮಹಾ ಸ್ತೋತ್ರಮಂಜರಿಯ ದೇವಿಯ ವರ್ಣನೆ ಮಾಡಿ, ಆಕೆಯ ಪಾದದರ್ಶನದಿಂದ ನಮ್ಮ ಪಾಪಶೇಷಗಳು ಕಳೆದು ಪುಣ್ಯ ಸಂಪಾದಿಸುವ ಮಹಾಮಾರ್ಗ. ಈ ಸ್ತೋತ್ರದ ಮೂಲಕ ಆದಿಶಂಕರರು ದೇವಿಯ ಆರಾಧನೆಯನ್ನುಮಾಡಿ ಸಾಕ್ಷಾತ್ ದೇವಿಯ ರೂಪವನ್ನೇ ದರ್ಶಿಸಿ ಸಂತೋಷಗೊಂಡಿರುವರು.

ಸೌಂದರ್ಯ ಲಹರಿ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಮಂತ್ರಗಳ ಪೈಕಿ ಇದು ಪ್ರಮುಖವಾದುದು. ಈ ಸ್ತೋತ್ರದಲ್ಲಿ ೧೦೦ ಪದ್ಯ/ಪಂಕ್ತಿಗಳಿವೆ (100 verses) ೧ – ೪೧ ಪದ್ಯಗಳನ್ನು ಆನಂದ ಲಹರಿ ಎಂದು ಕರೆಯುತ್ತಾರೆ. ೪೨ – ೧೦೦ ಪದ್ಯಗಳನ್ನು ಸೌಂದರ್ಯ ಲಹರಿ ಎನ್ನುತ್ತಾರೆ. ಲಹರಿ ಎಂದರೆ ಅಲೆ/ತೆರೆ ಎಂದರ್ಥ. ಆನಂದ ಲಹರಿ ಎಂದರೆ ಆನಂದದ ಅಲೆಗಳು, ಆನಂದ ನೀಡುವಂತದ್ದು. ಹೆಸರೇ ಸೂಚಿಸುವಂತೆ ಈ ಸ್ತೋತ್ರದಲ್ಲಿ ದೇವಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಈ ಸ್ತೋತ್ರವನ್ನು ಪಠಿಸಿದರೆ ಆದಿಶಕ್ತಿಯು ನಿಮ್ಮ ಎಲ್ಲ ಅಭಿಲಾಷೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ.

ಸೌಂದರ್ಯ ಲಹರಿ ಈ ಮಹಾ ಮಂಜರಿಯು ಸಕಲ ವಿಧವಾದ ಆಪತ್ತುಗಳಿಂದಲೂ ನಮ್ಮನ್ನು ರಕ್ಷಿಸಿ, ನಾವು ಕೋರುವ ಇಷ್ಟಾರ್ಥಗಳನ್ನು  ಸಲ್ಲಿಸಿ ನಮ್ಮನ್ನು ಸನ್ಮಾರ್ಗಕ್ಕೆ ಕರೆದೊಯ್ದು ಭಕ್ತಿ ಮುಕ್ತಿಗಳನ್ನು ನೀಡುವ ಮಹಾಮಂತ್ರವಾಗಿದೆ.

ಸೌಂದರ್ಯ ಲಹರಿ ಈ ಮಂತ್ರವನ್ನು ಅನುಷ್ಠಾನಮಾಡಿ ಯಾವ ಹೆಚ್ಚಿನ ವರಮಾನವು ಇಲ್ಲದೆ ಕೇವಲ ಅತ್ಯಲ್ಪ ಸಂಪಾದನೆಯಿಂದ ದೊಡ್ಡ ಕುಟುಂಬವನ್ನು ಪೋಷಿಸಿ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ವನ್ನು ಹೊಂದಿದ್ದಾರೆ. ಹೀಗೆ ಇನ್ನೂ ಅನೇಕರು ಇದರ ಅನುಷ್ಠಾನ ಮಾಡಿಕೊಂಡು, ಆ ತಾಯಿಯ ವರವನ್ನು ಪಡೆದುದಿಗ್ದಂತಿಗಳಾಗಿ ಬಾಳಿದವರು ಇದ್ದಾರೆ.

ಆದ್ದರಿಂದ ಕೇವಲ ಒಂದೇ ಶ್ಲೋಕದಿಂದಲೇ ಇಷ್ಟು ಸಾಧನೆ ಇರುವಾಗ, ಇನ್ನು ನೂರು ಶ್ಲೋಕಗಳನ್ನು ಕರಗತಮಾಡಿಕೊಂಡರೆ ಫಲವನ್ನು ವರ್ಣಿಸಲು ಕಾಲವೇ ಸಾಕಾಗಲಾರದು.

ಇದು ಮಹಾ ಮಂತ್ರಕ್ಕೆ ಸಮಾನ. ಆದ್ದರಿಂದ ಎಲ್ಲ ತಾಯಂದಿರು ಹಾಗೂ ಮಹಾಪುರುಷರೂ, ಇದನ್ನು ಅನುಷ್ಠಾನ ಮಾಡಿ ದೈವ ಸಾಕ್ಷಾತ್ಕಾರ ಮಾಡಿಕೊಂಡರೆ ಅದಕ್ಕಿಂತಲೂ ಸಂತೋಷ ಬೇರೆ ಏನಿದೆ?

ಧರ್ಮ ದೇವತೆಯ ಸಾಕ್ಷಾತ್ಕಾರವೇ ಇದಾಗಿದೆ. ಇದನ್ನು ಬಡವರಾಗಲಿ, ಶ್ರೀಮಂತರಾಗಲಿ ಮಾಡಬಹುದು. ಎಲ್ಲದಕ್ಕು ಶ್ರೀಚಕ್ರ ಆರಾಧನೆ ಮಾಡಿ ಫಲ ಪಡೆಯಬಹುದು. ಇದು ಸುಲಭಸಾಧ್ಯವಾದ ಮಾರ್ಗ. ಇದು ಇಹಪರಗಳೆರಡರಲ್ಲೂ ಸಾದನೆ ನೀಡುವುದು.

ಆದ್ದರಿಂದ ಭಕ್ತಿ ಮಹಾಶಯರು ತಾಯಿಯ ಗುಣವಾದವನ್ನು ಸೌಂದರ್ಯ ಲಹರಿಯ ಈ ಶ್ಲೋಕವನ್ನು ಭಕ್ತಿಯಿಂದ ಪಠಿಸಿದರೆ ಜಾತಕದಲ್ಲಿರುವ ದರಿತ್ರತೆಯು ಹೋಗಿ ಸುಖಿಸುತ್ತೀರಿ. ಇದು ಪ್ರತ್ಯಕ್ಷ ನಿದರ್ಶನವಾಗಿ ಕಂಡಿದೆ. ಇದನ್ನು ಸ್ವತಃ ನೀವೇ ಪಠಿಸಬೇಕು. ಆಗ ಇದರ ಪೂರ್ಣಫಲ ಪಡೆಯುತ್ತೀರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top