fbpx
News

ವೈರಲ್ ಆಯ್ತು ಮತ್ತೊಬ್ಬ ಯೋಧನ ಅಳಲು

ಸೇನೆ ಮತ್ತು  ಅರೆ ಮಿಲಿಟರಿ ಪಡೆಗಳ ಮಧ್ಯೆ ತಾರತಮ್ಯವೇಕೆ? ಯೋಧನ ಅಳಲು

ನವದೆಹಲಿ :ಯೋಧ ಜೀತ್ ಸಿಂಗ್ ಅರೆ ಸೇನಾಪಡೆಯಲ್ಲಿ ನೀಡುತ್ತಿರುವ ಸೌಕರ್ಯಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ, ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಕೆಲಸ ಮಾಡಲು ಸಿದ್ದರರಿರರುತ್ತೇವೆ. ರಾಜ್ಯಸಭಾ ಚುನಾವಣೆ ಆಗಲಿ ಲೋಕಸಭಾ ಚುನಾವಣೆ ಆಗಲಿ ದೇವಸ್ಥಾನಗಳಾಗಲಿ ಮಂದಿರಗಳಾಗಲಿ ನಾವು ಅತ್ಯುತ್ತಮ ರಕ್ಷಣೆ ನೀಡಲು ಸಿದ್ದರಿರುತ್ತೇವೆ ಆದರೆ ನಮಗೆ ನೀಡುವ ಸೌಲಭ್ಯಗಳು ತೃಪ್ಪಿದಾಯಕವಾಗಿಲ್ಲ ಎಂದು ಆರೋಪಿಸಿದ್ದಾನೆ.

ಮೋದಿಗೆ ಮನವಿ ಮಾಡಿದ ಯೋಧ ಸೇನಾ ಪಡೆಗೆ ಪೆನ್ಶನ್ ಸೌಲಭ್ಯವಿದೆ. ಆದರೆ ಆದರೆ ಪ್ಯಾರಾ ಮಿಲಿಟರಿ ಪಡೆಗೆ ಮಾತ್ರ ಈ ಸೌಲಭ್ಯವಿಲ್ಲ. ಶಿಕ್ಷಕರು 50 ರಿಂದ 60 ಸಾವಿರದವರೆಗೆ ಉತ್ತಮ ಸಂಬಳ ಪಡೆಯುತ್ತಾರೆ. ಜೊತೆಗೆ ಹಬ್ಬ ಹರಿದಿನಗಳಿಗಾಗಿ ಅವರಿಗೆ ರಜೆಗಳು ಇರುತ್ತವೆ. ಆದರೆ ದಟ್ಟ ಅರಣ್ಯದಲ್ಲಿ ಕೆಲಸ ನಿರ್ವಹಿಸುವ ಸಿಆರ್‌ಪಿಎಫ್‌ ಸಿಬ್ಬಂದಿ ಈ ಸೌಲಭ್ಯಗಳನ್ನು ಪಡೆಯಲು ಅರ್ಹತೆ ಪಡೆದಿಲ್ಲ’ ಎಂದು ತಿಳಿಸಿದ್ದಾರೆ.

‘ನಾವು ಗ್ರಾಮಪಂಚಾಯಿತಿ ಹಾಗೂ   ಎಲ್ಲ ಹಂತದ ಚುನಾವಣೆಗಳಲ್ಲಿ ಕೆಲಸ ಮಾಡುತ್ತವೆ, ಸಂಸತ್, ವಿಮಾನ ನಿಲ್ದಾಣ, ಮಸೀದಿ ಸೇರಿದಂತೆ ವಿಐಪಿಗಳಿಗೆ ಭದ್ರತೆ ನೀಡಿದರೂ ನಮಗೆ ಸೇನಾ ಯೋಧರಿಗೆ ಸಿಗುವಂತಹ  ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ಜೀತ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ, ಶಿಕ್ಷಕರಿಗೆ 50 ರಿಂದ 60 ಸಾವಿರ ರೂಪಾಯಿ ಸಂಬಳ ಹಾಗೂ ಸಾಕಷ್ಟು ರಜೆಗಳನ್ನು ಕೊಡುತ್ತದೆ. ಆದರೆ ಕಾಡು ಮೇಡು, ಬೆಟ್ಟ ಗುಡ್ಡ, ನಕ್ಸಲ್ ಪೀಡಿತ ಸ್ಥಳಗಳಲ್ಲಿ ಕೆಲಸ ಮಾಡುವ ನಮಗೆ ಕಡಿಮೆ ವೇತನ ನೀಡಲಾಗುತ್ತಿದೆ.  ನಾವು ನಿವೃತ್ತರಾದರೆ ಮಾಜಿ ಸೈನಿಕರಿಗೆ ಸಿಗುವ ಪಿಂಚಣಿ, ವೈದ್ಯಕೀಯ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ  ಎಂದು ಜೀತ್ಸಿಂಗ್ ವಿಡಿಯೊದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top