ಮುಂಬೈ: ರಿಲಾಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿ ಹಲವು ದಿನಗಳ ನಿರೀಕ್ಷಿತ ರಿಲಯನ್ಸ್ ಜಿಯೋ 4ಜಿ ಸೇವೆಯನ್ನು ಅನಾವರಣಗೊಳಿಸಿದ್ದಾರೆ. ಕಂಪೆನಿಯ 4ಜಿ ಎಲ್ಟಿಇ ನೆಟ್ವರ್ಕ್ ಜಗತ್ತಿನಲ್ಲಿ ಅತೀ ದೊಡ್ಡ ವಿವಿಧ ಸೌಲಭ್ಯಗಳನ್ನು ನೀಡಿರುವ ಜಿಯೋ ಸಂಸ್ಥೆ ಈಗ ಮತ್ತೊಂದು ಹೊಸ ಯೋಜನೆ ಕೈಗೊಂಡಿದೆ.
ಜಿಯೋ ಕೈಗೊಂಡಿರುವ ಈ ಯೋಜನೆಯಲ್ಲಿ ಕೇವಲ ಒಂದು ಸಾವಿರ ರೂ’ಗೆ 4ಜಿ ವಾಯ್ಸ್ ಓವರ್’ ಎಲ್’ಟಿಇ, ಜಿಯೋ ಚಾಟ್, ಲೈವ್ ಟಿವಿ, ವಿಡಿಯೋ ಸೇರಿದಂತೆ ಹಲವು ಫೀಚರ್’ಗಳ ಜೊತೆ ಉತ್ತಮ ಗುಣಮಟ್ಟದ ಫ್ರಂಟ್’ ಹಾಗೂ ಬ್ಯಾಕ್ ಸೈಡ್ ಕ್ಯಾಮೆರಾ ಮುಂತಾದ ಸೌಲಭ್ಯಗಳಿವೆ. ಇವುಗಳ ಜೊತೆ ಉಚಿತ ಕರೆ, ಎಸ್’ಎಂಎಸ್ ಸೇವೆಯನ್ನು ಒದಗಿಸಲಾಗುತ್ತದೆ.
ಇನ್ನು ಕೆಲವು ದಿನಗಳಲ್ಲಿ ಸಾವಿರ ರೂ.ಗೆ ಈ ರೀತಿಯ ಫೋನ್’ಗಳು ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಇದಕ್ಕಾಗಿ ರಿಲಯನ್ಸ್ ಸಂಸ್ಥೆ ಚೀನಾದ ಅಗ್ಗದ ದರದಲ್ಲಿ ಫೋನ್’ಗಳನ್ನು ತಯಾರಿಸುವ ಚೀನಾದ ಸ್ಪ್ರೆಡ್ತ್ರುಮ್ ಕಂಪನಿಯ ಜೊತೆ ಮಾತುಕತೆ ನಡೆಸಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
