fbpx
Health

ಊಟ ಮಾಡಿದ ನಂತರ ಯಾವ ಯಾವ ಕೆಲಸಗಳನ್ನು ಮಾಡಬಾರದು

ಆಯುರ್ವೇದ ೨೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧ ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಸರ್ವ ರೋಗಗಳಿಗೂ ಔಷಧಿಗಳಿವೆ. ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಆಯುರ್ವೇದಶಾಸ್ತ್ರ ಪದ್ಧತಿ ಪ್ರಾಚೀನ ಭಾರತದಿಂದ ಬೆಳೆದು ಬಂದದ್ದು. ಅಂತಹ ಆಯುರ್ವೇದಶಾಸ್ತ್ರವು ಊಟ ಮಾಡಿದ ನಂತರ ಕೆಲವು ಕೆಲಸಗಳನ್ನು ಮಾಡಬಾರದೆಂದು ಹೇಳುತ್ತದೆ. ಹಾಗೆ ಮಾಡುವುದರಿಂದ ದೇಹಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಫಲರಾಗುತ್ತೇವೆ.

ಬನ್ನಿ ಹಾಗಾದರೆ ಊಟ ಮಾಡಿದ ನಂತರ ಯಾವ ಯಾವ ಕೆಲಸಗಳನ್ನು ಮಾಡಬಾರದೆಂದು ತಿಳಿಯೋಣ.

ಹಣ್ಣುಗಳನ್ನು ತಿನ್ನಬಾರದು.

ಊಟ ಮಾಡಿದ ನಂತರ ತಕ್ಷಣವೇ ಹಣ್ಣನ್ನು ತಿನ್ನುವುದರಿಂದ ಆಹಾರ ಬೇಗ ಜೀರ್ಣವಾಗಿವುದಿಲ್ಲ. ಹೊಟ್ಟೆ ಗಾಳಿಯಿಂದ ತುಂಬಿಕೊಳ್ಳುತ್ತದೆ. ಇದರಿಂದ ಅಜೀರ್ಣವಾಗುವ ಸಾಧ್ಯತೆಗಳಿರುತ್ತವೆ.  ಕೆಲವು ಸಂಧರ್ಭಗಳಲ್ಲಿ ಫುಡ್ ಪಾಯಿಜನ್ ಆಗುವ ಸಂಭವವಿರುತ್ತದೆ. ಹಣ್ಣುಗಳನ್ನು ತಿನ್ನುವ ಹವ್ಯಾಸವಿದ್ದರೆ, ಒಂದು ಗಂಟೆಯ ಮುಂಚಿತವಾಗಿ ಅಥವಾ ಗಂಟೆಯ ನಂತರ ತಿನ್ನುವುದು ಒಳ್ಳೆಯದು.

ಟೀ ಅಥವಾ ಕಾಫಿ ಕುಡಿಯಬಾರದು.

ಭಾರತ ದೇಶದಲ್ಲಿ ಹೆಚ್ಚಿನ ಜನರು ಊಟ ಮಾಡಿದ ನಂತರ ಟೀ ಅಥವಾ ಕಾಫಿ ಕುಡಿಯುವ ತಪ್ಪನ್ನು ಮಾಡುತ್ತಿರುತ್ತಾರೆ. ಅನ್ನವನ್ನು ತಿಂದ ತಕ್ಷಣ ಟೀ ಕುಡಿಯುವುದರಿಂದ ಅಧಿಕ ಪ್ರಮಾಣದಲ್ಲಿ ಯಾಸಿಡ್ ಬಿಡುಗಡೆ ಯಾಗುತ್ತದೆ. ಜೀರ್ಣಕ್ರಿಯೆಯು ನಿಧಾನವಾಗಿ ಜೀರ್ಣ ವಾಗುತ್ತದೆ.

ಊಟದ ನಂತರ ತಕ್ಷಣವೇ ನಡೆಯಬಾರದು.

ಊಟದ ನಂತರ ತಕ್ಷಣವೇ ನಡೆದರೆ ಜೀರ್ಣ ವ್ಯವಸ್ಥೆಯಲ್ಲಿ ಅಧಿಕ ಪ್ರಮಾಣದಲ್ಲಿ ಯಾಸಿಡ್ಸ್ (ಆಮ್ಲಗಳು) ಬಿಡುಗಡೆಯಾಗುತ್ತವೆ. ಇದರಿಂದ ಹೊಟ್ಟೆಯಲ್ಲಿ ಉರಿಯಾಗುವ ಅವಕಾಶವಿರುತ್ತದೆ. ಊಟ ಮಾಡಿದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು, 30 ನಿಮಿಷಗಳ ನಂತರ ನಡೆಯುವುದನ್ನು ಆರಂಭಿಸಬೇಕು.

ತಿಂದ ತಕ್ಷಣವೇ ಬೆಲ್ಟ್ ಲೂಸ್ ಮಾಡಿಕೊಳ್ಳಬಾರದು.

ಸಾಮಾನ್ಯವಾಗಿ ಜನರು ಹೆಚ್ಚಾಗಿ ತಿಂದಿದ್ದು ತುಂಬಾ ಜಾಸ್ತಿಯಾಯಿತೆಂಬ ಉದ್ದೇಶದಿಂದ ಬೆಲ್ಟನ್ನು ಲೂಸ್ ಮಾಡಿಕೊಳ್ಳುತ್ತಾರೆ. ಇದರಿಂದ ಎಲ್ಲಾದರು ಸ್ಥಗಿತಗೊಂಡಿರುವ ಆಹಾರವು ಕೆಳಗೆ ಬರುವುದಿಲ್ಲ. ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.

ತಿಂದ ಮೇಲೆ ಸ್ನಾನ ಮಾಡಬಾರದು.

ಹಾಗೆ ಮಾಡಿದರೆ, ರಕ್ತವೆಲ್ಲವೂ ಕಾಲುಗಳಿಗೆ, ಕೈಗಳಿಗೆ ಒಟ್ಟು ದೇಹಕ್ಕೆಲ್ಲ ಹರಿದು, ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ, ಜೀರ್ಣ ಪ್ರಕ್ರಿಯೆಯು ನಿಧಾನವಾಗುತ್ತದೆ. ಇದರಿಂದ ಜೀರ್ಣ ವ್ಯವಸ್ಥೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಬೆಳಿಗ್ಗೆಯಾದರೂ, ಸಂಜೆಯಾದರೂ ಊಟ ಮಾಡಿದ ತಕ್ಷಣ ಯಾವುದೇ ಕಾರಣಕ್ಕೂ ಸ್ನಾನ ಮಾಡ ಬಾರದು.

ಊಟ ಮಾಡಿದ ನಂತರ ನಿದ್ದೆ ಮಾಡಬಾರದು.

ಊಟ ಮಾಡಿದ ತಕ್ಷಣ ನಿದ್ದೆ ಮಾಡಿದರೆ ಆಹಾರವು ಸರಿಯಾಗಿ ಜೀರ್ಣ ವಾಗದೆ ಗ್ಯಾಸ್ಟ್ರಿಕ್, ಇನ್ ಫೆಕ್ಷನ್ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ.

ಊಟ ಮಾಡಿದ ನಂತರ ಈಜಾಡಬಾರದು.

ತಿಂದತಕ್ಷಣ ಈಜಾಡುವುದರಿಂದ ರಕ್ತ ಪ್ರಸರಣದ ವೇಗ ಅಧಿಕವಾಗಿ ಶರೀರದ ಮಾಂಸ ಕಂಡಗಳು ಸ್ಥಗಿತಗೊಳ್ಳುತ್ತವೆಂದು ಹೇಳುತ್ತದೆ. ವ್ಯಾಯಾಮ, ಜಿಮ್, ಆಟಗಳೂ ಸಹ ಆಡಬಾರದು. ಈ ವಿಷಯ ಅಪಾಯವೆಂದು ಆಯುರ್ವೇದ ಕೂಡ ಹೇಳುತ್ತದೆ.

ಊಟ ಮಾಡಿದ ಮೇಲೆ ಧೂಮಪಾನ ಮಾಡಬಾರದು.

ಊಟ ಮಾಡಿದ ಮೇಲೆ ಧೂಮಪಾನ ಮಾಡಿದರೆ ಒಂದೇಸಾರಿ 10 ಸಿಗೆರೆಟ್’ಗಳನ್ನು ಕುಡಿದ ಪರಿಣಾಮ ಪಿತ್ತಕೋಶದ ಮೇಲೆ ಬೀರುತ್ತದೆ. ಇದರಿಂದ ಶ್ವಾಸಕೋಶಗಳ ಮೇಲಿನ ಭಾರ ಅಧಿಕ ವಾಗುತ್ತದೆಂದು ಆಯುರ್ವೇದ ಹೇಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top