ದೇಶದ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಅಗ್ರ 5ನೇ ಸ್ಥಾನದಲ್ಲಿರುವ ಎಸ್ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ:
ಬ್ರಾಂಚ್ ಸವೀರ್ಸ್ ಪಾಟ್ನರ್-ಬಿಎಸ್ಪಿ -5 ಹುದ್ದೆಗಳಿವೆ. ಬ್ಯಾಂಕ್ ಆಳೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವುದು, ದೂರು ಮತ್ತು ಅಗತ್ಯಗಳನ್ನು ತಿಳಿದುಕೊಳ್ಳುವುದು ಸೇರಿದಂತೆ ಹಲವು ಕಾರ್ಯಗಳನ್ನು ಈ ಹುದ್ದೆಯಲ್ಲಿರುವವರು ಮಾಡಬೇಕಿದೆ. ಸಂಬಂಧಪಟ್ಟ ವಿಭಾಗದಲ್ಲಿ 1-5 ವರ್ಷ ಅನುಭವ ಇರುವವರು ಅರ್ಜಿ ಸಲ್ಲಿಸಬಹುದು.
ಉಳಿದಂತೆ ಸ್ಟೋರೇಜ್ ವಿಭಾಗದಲ್ಲಿ 1 ಹುದ್ದೆಯಿದೆ. 10-12 ವರ್ಷ ಕೆಲಸದ ಅನುಭವ ಇರುವವರು ಅರ್ಜಿ ಸಲ್ಲಿಸಿ.
ಇನ್ಫ್ರಾ ಸೊಲ್ಯುಷನ್ ಆರ್ಕಿಟೆಕ್ಟ್ 1 ಹುದ್ದೆಯಿದ್ದು, 5-8 ವರ್ಷ ಕೆಲಸದ ಅನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಎಸ್ ಫಸ್ಟ್ ಬಿಸ್ನೆಸ್ ರಿಲೇಷನ್ಷಿಪ್ ಮ್ಯಾನೇಜರ್ 1 ಹುದ್ದೆಯಿದ್ದು, ಸಂಬಂಧಪಟ್ಟ ಕ್ಷೇತ್ರದಲ್ಲಿ 3-10 ವರ್ಷ ಅನುಭವ ಇರುವವರು ಅರ್ಜಿ ಸಲ್ಲಿಸಬೇಕು.
ಎಸ್ ಬ್ಯಾಂಕ್ನ ಈ ಹುದ್ದೆಗಳು ಮತ್ತು ಇನ್ನಿತರ ಹುದ್ದೆಗಳ ಮಾಹಿತಿಗಾಗಿ ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ: https://talentacquisition.yesbank.in/careers/
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
