fbpx
ಆರೋಗ್ಯ

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ದೇಹಕ್ಕೆ ಯೋಗ ಅಗತ್ಯ

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಆಧ್ಯಾತ್ಮ ಚಿಕಿತ್ಸೆ ಯೋಗ ಬೇಕು

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ.

ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗವಿದ್ಯೆಯು’ ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.

ಯೋಗವೆಂದರೆ ‘ಸಮಾದಿ’ ‘ಉಪಾಯ’ ‘ಸಾಧನ’ ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ದಿ , ಬಾವನೆ,ಆತ್ಮ ಹಾಗು ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. “ಯೋಗೋ ಉಪಾಯ ಉದ್ದಿಷ್ಟ:” ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. “ಯೋಗಶ್ಚಿತ್ತವೃತ್ತಿನಿರೋಧಃ” ಎಂದ ಮಹಾ ಯೋಗಾಚಾರ್ಯ ಪತಂಜಲಿ ಮಹರ್ಷಿಗಳು ಯೋಗ ಪ್ರವರ್ತಕರು. ಯೋಗ ಸೂತ್ರಗಳು ಎಂಬ ಗ್ರಂಥದ ಮೂಲಕ, ಕ್ಲಿಷ್ಟಕರವಾದ ಯೋಗ ರಹಸ್ಯ ಗಳನ್ನು ಸುಲಭವಾಗಿ ತಿಳಿಸಿದ್ದಾರೆ.

ಯೋಗದ ಎಂಟು ಅಂಗಗಳು (ಅಷ್ಟಾಂಗಗಳು)

*ಯಮ  *ನಿಯಮ  *ಆಸನ  *ಪ್ರಾಣಯಾಮ  *ಪ್ರತ್ಯಾಹಾರ  *ಧಾರಣ  *ಧ್ಯಾನ  *ಸಮಾಧಿ

*ಕೀಲು ಸಂಧಿ ನೋವು ನಿವಾರಣೆ : ಯೋಗಾಸನಗಳಿಂದ ಕೀಲು ಸಂಧಿಗಳಲ್ಲಿ  ದ್ರವಗಳ ಹರಿದಾಟ  ಹೆಚ್ಚಿ ಚಲನೆ ಸರಾಗವಾಗುತ್ತದೆ.  ಇದರಿಂದ ಕೀಲುಸಂಧಿ ಸಂಬಂಧಿತ ತೊಂದರೆಗಳನ್ನು ನಿವಾರಣೆಯಾಗುತ್ತವೆ .

*ಚಯಾಪಚಯ-ಬೊಜ್ಜು ನಿವಾರಣೆ : ಯೋಗ / ಯೋಗಾಸನದಿಂದ ಚಯಾಪಚಯ ಕ್ರಿಯೆ ಹೆಚ್ಚಿ ಸೇವಿಸಿದ ಆಹಾರ ಸಮರ್ಪಕವಾಗಿ ಶಕ್ತಿಯಾಗಿ ಮಾರ್ಪಾಡಾಗುತ್ತದೆ. ಇದರಿಂದ ಬೊಜ್ಜು ಬರುವುದಿಲ್ಲ ಎನ್ನುವ ಪ್ರಬಲ ನಂಬಿಕೆ ಚಾಲ್ತಿಯಲ್ಲಿದೆ.

* ವಿಷಕಾರಿಗಳ ನಿರ್ಮೂಲನೆ –ರೋಗ ನಿರೋಧತ್ವ: ತಲೆನೋವು ,ಹೊಟ್ಟೆ ನೋವು ,ಕ್ಯಾನ್ಸರ್ , ಚಿಕನ್ ಗುನ್ಯಾ ಏನೇ ಬರಲಿ ದೇಹದಿಂದ ವಿಷವಸ್ತುಗಳನ್ನು ಹೊರಗೆ ಹಾಕಬೇಕೆಂದು ಇವರು ಕರೆ ನೀಡುತ್ತಾರೆ.  ಇವರೆಲ್ಲರ ನಡುವೆ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು   ಯೋಗಾಸನಕ್ಕಿಂತ ಉತ್ತಮವಾದ ಇನ್ನೊಂದು ದಾರಿಯಿಲ್ಲ , ವಕ್ರಾಸನ ಬಹು ಪರಿಣಾಮಕಾರಿ ಎನ್ನುವವರು ಮುಂಚೂಣಿಯಲ್ಲಿದ್ದಾರೆ. ‘ಬಿಕ್ರಂ ಬಿಸಿ ಯೋಗ’ ಇದಕ್ಕೆ ಅತ್ಯುತ್ತಮವಾದ್ದಾಗಿಗೆ.

* ಮಾನಸಿಕ ನೆಮ್ಮದಿ: ಯೋಗ / ಯೋಗಾಸನದಿಂದ ಯೋಗಾಸನದಿಂದ ಮೆದುಳಿನಲ್ಲಿರುವ ಗಾಮಾ-ಅಮಿನೊಬ್ಯುತೈರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ  ಇದರಿಂದ ಮಾನಸಿಕ ಭಾವನೆ, ಲಹರಿಗಳು ಉತ್ತಮಗೊಳ್ಳುತ್ತವೆ. ಈ ರಾಸಯನಿಕ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಆತಂಕ, ಉದ್ವೇಗ, ಖನ್ನತೆಗೆ ಕಾರಣ. ಆದ್ದರಿಂದ ಯೋಗಾಸನ ಖಿನ್ನತೆ ನಿವಾರಿಸುವಲ್ಲಿ ಸಹಾಯಕಾರಿ. ಯೋಗ ಮೆದುಳಿಗೆ ಸಹಾಯಕಾರಿ-ಯೋಗಾಸನ ನಿರತರಾದವರಲ್ಲಿ ಸೃಜನಶೀಲತೆಗೆ ಕಾರಣವಾದ ಮೆದುಳಿನ ಬಲಭಾಗ  ಪ್ರಚೋದಿಸಲ್ಪಡುತ್ತದೆ. ಯೋಗಾಸನ ಮಾಡುವುದರಿಂದ ‘ದೇಹ ಪ್ರಜ್ಞೆ’ ಎತ್ತರದ ಮಟ್ಟಕ್ಕೆ ಏರುತ್ತದೆ ಎಂದು ಕೆಲ ಸಂಶೋದನೆಗಳಿಂದ ತಿಳಿದು ಬಂದಿದೆ.

* ಮಾನಸಿಕ ಒತ್ತಡ ಇಳಿಸುವಲ್ಲಿ ಯೋಗಾಸನದ ಪಾತ್ರ ಕುರಿತಾಗಿ ನಡೆಸಿದ ಸಂಶೋಧನೆಗಳಿಂದ ಸಾಮಾನ್ಯ ವಿಶ್ರಾಂತಿ ಮತ್ತು ಉಲ್ಲಾಸಕರ ಪರಿಸರ ನೀಡುವ ಪರಿಣಾಮಗಳೇ ಕಂಡುಬಂದಿವೆ.  ಕೆಲವು ಸಂಶೋಧನೆಗಳು ಯೋಗಾಸನಗಳಂತೆ ಮನೋ-ದೈಹಿಕ ಚಟುವಟಿಕೆಗಳನ್ನು ಒಳಗೊಂಡಿರುವ ತೈ-ಷಿ ಕೂಡ ಉತ್ತಮವಾದುದು.

ಮಾನವನ ಪ್ರಜ್ಞೆ ಯಾ ಆತ್ಮಶಕ್ತಿಯ ಅಭಿವೃದ್ಧಿಯಲ್ಲಿ ಯೋಗವು ವಿಕಾಸವಾಗುತ್ತಿರುವ ಪ್ರಕ್ರಿಯೆಯಾಗಿದೆ. ಸಮಗ್ರ ಪ್ರಜ್ಞೆ ಯಾ ಅರಿವು/ ತಿಳುವಳಿಕೆಯು ಯಾವುದೇ ನಿರ್ದಿಷ್ಟ ವ್ಯಕ್ತಿಯಲ್ಲಿ ವಿಕಾಸವಾಗಬೇಕಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಬಯಸಿದಲ್ಲಿ ಮಾತ್ರ ಆರಂಭವಾಗುತ್ತದೆ. ಮದ್ಯ ಮತ್ತು ಮಾದಕದ್ರವ್ಯದ ಚಟಗಳು, ಅತಿಯಾಗಿ ಕೆಲಸಮಾಡುವುದು, ಅತಿಯಾದ ಲೈಂಗಿಕ ಚಟುವಟಿಕೆ, ಹಾಗೂ ವಿಸ್ಮೃತಿಗಾಗಿ ಇತರ ಚಟುವಟಿಕೆಗಳಲ್ಲಿ ತೊಡಗುವುದು ಅರಿವಿನಿಂದ ದೂರ ಸರಿಯುವಂತೆ ಮಾಡುತ್ತವೆ. ಭಾರತೀಯ ಯೋಗಿಗಳು ಆರಂಭಿಸುವುದು ಪಾಶ್ಚಿಮಾತ್ಯ ಮನೋವಿಜ್ಞಾನದ ಕೊನೆಯ ಹಂತದಿಂದ. ಫ್ರಾಯ್ಡನ ಮನೋವಿಜ್ಞಾನವು ಖಾಯಿಲೆಗಳ ಮನೋವಿಜ್ಞಾನವಾಗಿಯೂ, ಮಾಸ್ಲೋವಿನ ಮನೋವಿಜ್ಞಾನವು ಆರೋಗ್ಯಯುತ ಮಾನವನ ಮನೋವಿಜ್ಞಾನವಾಗಿಯ ಇದ್ದರೆ, ಭಾರತೀಯ ಮನೋವಿಜ್ಞಾನವು ಜ್ಞಾನೋದಯದ ಮನೋವಿಜ್ಞಾನವಾಗಿದೆ. ಯೋಗದಲ್ಲಿ, ಅದು ಮಾನವನ ಮನೋವಿಜ್ಞಾನದ ಪ್ರಶ್ನೆಯಾಗಿರುವುದಿಲ್ಲ, ಬದಲಾಗಿ, ಆತನ, ಆಧ್ಯಾತ್ಮಿಕ ಬೆಳವಣಿಗೆ ಪ್ರಶ್ನೆಯಾಗಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top