ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಥಂಕರರು ವೃಷಭನಾಥರು
ಗೊಮ್ಮಟೇಶ್ವರನು ಜೈನ ಧರ್ಮದವರಿಗೆ ಅತಿ ಪವಿತ್ರವಾದ ದೇವಮಾನವ. ನಂಬಿಕೆಯ ಪ್ರಕಾರ, ಬಾಹುಬಲಿಯು ಜೈನ ಧರ್ಮದ ಮೊದಲ ತೀರ್ಥಂಕರರಾದ ವೃಷಭನಾಥರ ನೂರ ಎರಡು ಮಕ್ಕಳಲ್ಲಿ ಎರಡನೆಯವನು.
ಹಿಂದೊಮ್ಮೆ ಅಹಂಕಾರದಿಂದ ಕೂಡಿದ್ದ ಬಾಹುಬಲಿಯು ಅಣ್ಣನೊಡನೆ ಯುದ್ಧ ಮಾಡಿ ನಂತರ ವಿಷಾದಿಸಿ, ಸತ್ಯ – ಜ್ಞಾನಗಳ ಶೋಧನೆಯ ಹಾದಿಯಲ್ಲಿ ತೊಡಗಿಕೊಂಡು ಕಠಿಣವಾದ ತಪಸ್ಸನ್ನಾಚರಿಸಿ ಕೊನೆಗೆ ಬ್ರಹ್ಮ ಜ್ಞಾನ ಪಡೆದ ಮಹಾನುಭಾವ.ಸರ್ವವನ್ನು ಧಿಕ್ಕರಿಸಿದ ತ್ರಿಲೋಕ ಜ್ಞಾನಿ .
ಕರ್ನಾಟಕದಲ್ಲಿರುವ ಬಾಹುಬಲಿಯ ಪ್ರಮುಖ ಏಕಶಿಲೆಯ ಪ್ರತಿಮೆಗಳು
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಕ್ರಿ .ಶ 981 ರಲ್ಲಿ ಕೆತ್ತಲಾದ 57 ಅಡಿ ಎತ್ತರದ ಬಾಹುಬಲಿ ಮೂರ್ತಿ
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕ್ರಿ .ಶ 1432 ರಲ್ಲಿ ಕೆತ್ತಲಾದ 42 ಅಡಿ ಎತ್ತರದ ಬಾಹುಬಲಿ ಮೂರ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳದಲ್ಲಿ ಕ್ರಿ .ಶ 1973 ರಲ್ಲಿ ಕೆತ್ತಲಾದ 39 ಅಡಿ ಎತ್ತರದ ಬಾಹುಬಲಿ ಮೂರ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಣೂರಿನಲ್ಲಿ ಕ್ರಿ .ಶ 1604 ರಲ್ಲಿ ಕೆತ್ತಲಾದ 35 ಅಡಿ ಎತ್ತರದ ಬಾಹುಬಲಿ ಮೂರ್ತಿ
ಮೈಸೂರು ಜಿಲ್ಲೆಯ ಗೊಮ್ಮಟಗಿರಿಯಲ್ಲಿ 12 ನೇ ಶತಮಾನದಲ್ಲಿ ಕೆತ್ತಲಾದ 20 ಅಡಿ ಎತ್ತರದ ಬಾಹುಬಲಿ ಮೂರ್ತಿ
ಬಾಹುಬಲಿ ಏಕಶಿಲೆ ಹಳೇಬೀಡು
ಮುದ್ದೇಬಿಹಾಳದ ಅರಿಹಂತಗಿರಿಯಲ್ಲಿ 2015 ರಲ್ಲಿ ನಿರ್ಮಿಸಿದ 13 ಅಡಿ ಎತ್ತರದ, 5 ಟನ್ ಭಾರದ ಬಾಹುಬಲಿ ಮೂರ್ತಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
