ಜಯನಗರ (ಪೂರ್ವ)ದಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಶಾಖೆಯಲ್ಲಿ ಗ್ರಾಹಕರಿಗೆ ನೀಡುವ ‘withdrawal form’ ಅನ್ನು ತಮಿಳಿನಲ್ಲಿ ನೀಡಲಾಗುತಿತ್ತು.
ಅಪನಗಧೀಕರಣದ [Demonetisation] ನ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ಹಣ ಹಿಂಪಡೆಯುವಿಕೆ ದುಪ್ಪಟ್ಟು ಆಗಿದ್ದ ಹಿನ್ನೆಲೆಯಲ್ಲಿ withdrawal form ನ ಕೊರತೆಯಿಂದಾಗಿ ತಮಿಳಿನಲ್ಲಿರುವ ಫಾರಂಗಳನ್ನು ಕನ್ನಡ ಗ್ರಾಹಕರಿಗೆ ನೀಡುತಿದ್ದನ್ನು, ಸುಧೀರ್ ಎಂಬ ಗ್ರಾಹಕರು ಗಮನಿಸಿ, ಶಾಖೆಯ ವ್ಯವಸ್ಥಾಪಕರಿಗೆ ದೂರು ನೀಡಿದರು. ಆದರೆ, ಐ.ಒ.ಬಿ (ಜಯನಗರ ಪೂರ್ವ) ಶಾಖೆಯ ವ್ಯವಸ್ಥಾಪಕರು ‘ಅಪನಗಧೀಕರಣ’ ದ ಹಿನ್ನೆಲೆಯಲ್ಲಿ ಗ್ರಾಹಕರ ನಗದು ಹಿಂಪಡೆಯುವಿಕೆ (cash withdrawal ) ಯಲ್ಲಿ ಗಣನೀಯವಾಗಿ ಏರಿದ್ದು; ದಿನಕ್ಕೆ ೩೦೦ ರಷ್ಟು ನಗದು ಹಿಂಪಡೆಯುವಿಕೆ ಆಗಿರುವುದರಿಂದ ನಮ್ಮಲಿ – ಕನ್ನಡ ಮತ್ತು ಇಂಗ್ಲಿಷ್ ಫಾರಂ ಗಳು ಅಲಭ್ಯವಾಗಿದೆ.
ಆದ್ಧರಿಂದ, ನಾವು ತಮಿಳು ಫಾರಂಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆಂದು ಕಾಗೆ ಹಾರಿಸಿದ್ದಾರೆ. ಅಸಲಿಗೆ, ಅವರು ಕನ್ನಡ ಫಾರಂ ಗಳಿಗೆ Indent ನೀಡಿಲ್ಲ, ಸೋಂಬೇರಿ ಮ್ಯಾನೇಜರ್ ಇರೋ ತಮಿಳು ಫಾರಂ ಖಾಲಿ ಮಾಡಣ ಎಂದು ಗ್ರಾಹಕರಿಗೆ ಈ ರೀತಿ ಮಾಡ್ತಾ ಇದ್ದಾರೆ.
ಸಾಮಾನ್ಯ ಕನ್ನಡಿಗ ತಂಡ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಪ್ರತಿಷ್ಠಿತ ಐ.ಒ.ಬಿ ತಮಿಳು ಹೇರಿಕೆ ಬಯಲಾಗಿದೆ. ಇದರ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ ತಂಡಕ್ಕೆ, ಬ್ಯಾಂಕ್ ನವರ ಬಂಡವಾಳ ಬಯಲು ಮಾಡಿದೆ. ಇದನ್ನು ಬ್ಯಾಂಕ್ ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ; ಆಗಿರುವ ತಪ್ಪನ್ನು ಸರಿ ಮಾಡಲು ಮನವಿ ಮಾಡಿದೆ. ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ಗೆ ಮಿಂಚಂಚೆ ಹಾಕಿರುವ ನಮ್ಮ ತಂಡಕ್ಕೆ; ಅದೇ ಹಳೆ stereotype ರಿಪ್ಲೈ ಬಂದಿದೆ. ನಿಮಗೆ ಈ ರೀತಿ ಅನುಭವ ಆಗಿದ್ದಲ್ಲಿ, ನಮ್ಮ ಫೇಸ್ಬುಕ್ ಗೆ ಮೆಸೇಜ್ ಮಾಡಿ. ಬನ್ನಿ ಬ್ಯಾಂಕ್ ಮತ್ತು ಎಲ್ಲ ಕಚೇರಿಗಳ ‘ಲಿಖಿತ ವ್ಯವಹಾರಗಳಲ್ಲಿ’ ಕನ್ನಡ ಬಳಸಲು ಒತ್ತಾಯಿಸೋಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
