ಮೇಷ
ನೆರೆಹೊರೆಯವರೊಂದಿಗೆ ಪ್ರೀತಿಯಿಂದ ವರ್ತಿಸಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ, ಶುಭ ವಾರ್ತೆ ಕೇಳಿಬರಲಿದೆ.
ವೃಷಭ
ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನ, ದೂರ ಪ್ರಯಾಣಕ್ಕೆ ಸಿದ್ಧತೆ.
ಮಿಥುನ
ಗುರು ಹಿರಿಯರ ಆಶೀರ್ವಾದ ದಿಂದ ವ್ಯಾಪಾರದಲ್ಲಿ ಲಾಭ, ಹಣ ಹೂಡಿಕೆಯ ವಿಷಯದಲ್ಲಿ ಜಾಗರೂಕರಾಗಿರಿ.
ಕಟಕ
ಮನಸ್ಸಿಗೆ ಒತ್ತಡ ನೀಡುವ ಕೆಲಸಕ್ಕೆ ಗಮನ ಹರಿಸಬೇಡಿ, ನಿಮ್ಮ ಹಳೆಯ ಮಿತ್ರರ ಭೇಟಿ, ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಸಿಂಹ
ವಿನಾಕಾರಣ ಅಲೆದಾಟದಿಂದ ಅಧಿಕ ಖರ್ಚು, ಕೋರ್ಟು, ಕಚೇರಿ ಕೆಲಸಗಳನ್ನು ಮುಂದೂಡುವುದು ಒಳ್ಳೆಯದು, ಕುಲದೇವತಾ ಪ್ರಾರ್ಥನೆ ಮಾಡಿ.
ಕನ್ಯಾ
ಧನಾಗಮನದಲ್ಲಿ ಏರುಪೇರು, ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಯಶಸ್ಸು ನಿಮ್ಮದಾಗಲಿದೆ. ಮಿತ್ರರಿಂದ ಸಹಕಾರ.
ತುಲಾ
ಕೌಟುಂಬಿಕ ಜೀವನದಲ್ಲಿ ನಡೆದ ಘಟನೆ ಮನಸ್ಸಿಗೆ ಬೇಸರ ತರಲಿದೆ, ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆಗಳು ನಡೆದಾವು, ಕೋಪಕ್ಕೆ ಕಡಿವಾಣ ಹಾಕಿ.
ವೃಶ್ಚಿಕ
ಆದಷ್ಟು ತಾಳ್ಮೆಯಿಂದ ಇದ್ದು ಕಾರ್ಯ ಪೂರೈಸಿಕೊಳ್ಳಿ, ಹಣಕಾಸಿನ ಸ್ಥಿತಿ ಉತ್ತಮ, ಕೆಲಸದ ಒತ್ತಡ ಜಾಸ್ತಿಯಾಗಲಿದೆ.
ಧನು
ಕೋರ್ಟ್, ಕಚೇರಿಯ ಕೆಲಸಗಳು ಯಶಸ್ವಿಯಾಗಿ ನಡೆಯುವುವು, ಪ್ರಮುಖ ಕಾರ್ಯಗಳು ಕೈಗೂಡುವುವು, ಅಧಿಕಾರಿಗಳ ಸಹಕಾರ ದೊರೆಯಲಿದೆ.
ಮಕರ
ಮಾನಸಿಕ ನಿರಾಳತೆ, ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿ, ಹೊಸ ಯೋಜನೆಗಳಿಂದ ಬದುಕಿಗೆ ಹೊಸ ಆಯಾಮ ದೊರೆಯುವುದು, ವಿಶೇಷ ಭೋಜನ ಕೂಟ.
ಕುಂಭ
ಕುಟುಂಬ ಸದಸ್ಯರಿಂದ ಒಮ್ಮತದ ಅಭಿಪ್ರಾಯ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ತಾಳ್ಮೆಯಿಂದ ಇರುವುದು ಲೇಸು, ಗುರುವಿನ ಸ್ತೋತ್ರ ಪಠಿಸಿ, ಕಾರ್ಯಸಿದ್ಧಿ.
ಮೀನ
ಅಧಿಕಾರಿವರ್ಗದವರಿಂದ ನೀವು ಒಳ್ಳೆಯ ಪ್ರಶಂಸೆಗೆ ಒಳಗಾಗುವಿರಿ, ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ, ಒಳ್ಳೆಯ ಸುದ್ದಿಗಳು ಬಂದು ಸಂತಸ ನೀಡುವುದು.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
