ಬೀಟ್ ರೂಟ್ನ ಆರೋಗ್ಯಕಾರಿ ಗುಣಗಳು
೧.ಡಿಟಾಕ್ಸಿಫೈಯಿಂಗ್ ಮಾಡಲು ಸಹಾಯ ಮಾಡುತ್ತದೆ :
ವಿಷಕಾರಿ ಅಂಶಗಳನ್ನುದೇಹದಿಂದ ನಿರ್ಮೂಲನೆ ಮಾಡುವುದನ್ನು ಡಿಟಾಕ್ಸಿಫೈಯಿಂಗ್ ಎನ್ನುತ್ತಾರೆ .
ಕೆಲವು ಅಧ್ಯಯನಗಳು ಬೀಟ್ರೂಟ್ ರಸ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಸಹಕಾರಿ ಎಂದು ಸೂಚಿಸುತ್ತವೆ.
೨.ಕ್ಯಾಲೊರಿ ಕಡಿಮೆ ಮತ್ತು ಕೊಬ್ಬು ರಹಿತ:
ಕಡಿಮೆ ಕೊಬ್ಬು ಮತ್ತು ಕ್ಯಾಲೊರಿ: ಇದು ಹೆಚ್ಚಿನ ಸಕ್ಕರೆ ಹೊಂದಿದೆಯಾದರೂ ಕ್ಯಾಲೊರಿ ಕಡಿಮೆ ಮತ್ತು ಕೊಬ್ಬು ರಹಿತ , ಫೈಬರ್ ಅಂಶವು ಜೀರ್ಣ ಕ್ರಿಯೆಗೆ ಸಹಾಯಕ .
೩.ಖನಿಜಾಂಶವು ಹೇರಳವಾಗಿದೆ:
ಬೀಟ್ ರೂಟ್ನಲ್ಲಿ ವಿಟಮಿನ್ ಹಾಗೂ ಖನಿಜಾಂಶವು ಹೇರಳವಾಗಿದೆ. ಇದರಲ್ಲಿ ಪ್ರಮುಖವಾಗಿ ವಿಟಮಿನ್ B3, B6, ಮತ್ತು C ಅಂಶ ಸಾಕಷ್ಟು ಪ್ರಮಾಣದಲ್ಲಿದೆ. ಜೊತೆಗೆ ಬಿಟಾ ಕೆರೋಟಿನ್ ಮ್ಯಾಗ್ನಿಶೀಯಂ, ಕ್ಯಾಲ್ಸಿಯಂ, ಝಿಂಕ್ ಮತ್ತು ಕಬ್ಬಿಣಾಂಶವೂ ಸೇರಿದೆ. ಇದು ಲಿವರ್ ಮತ್ತು ಪಿತ್ತರಸದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.
೪. ಹೃದಯ ಆರೋಗ್ಯ :
ಬೀಟ್ ರೂಟ್ನಲ್ಲಿರುವ ನೈಟ್ರೇಟ್ ಅಂಶವು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ ,ಎದೆ ನೋವಿನಿಂದ ಬಳಲುತ್ತಿರುವವರಿಗೆ ಉಪಯೋಗಕಾರಿ .
ಪ್ರತಿದಿನ ಒಂದು ಬಟ್ಟಲು ಬೀಟ್ ರೂಟಿನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು
೫ ಕೂದಲು ಆರೈಕೆ:
ತಲೆ ಕೆರೆತ , ನೆತ್ತಿಯ ಶುಷ್ಕತನ ಹೋಗಲಾಡಿಸಲು ಬೀಟ್ ರೂಟ್ ರಸವನ್ನು ಬಳಸಬಹುದು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
