fbpx
ಕರ್ನಾಟಕ

ಪ್ರಪಂಚದ 10 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ

ಪ್ರಪಂಚದ 10 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನಪಡೆದುಕೊಂಡಿದೆ.

ಬೆಂಗಳೂರು: ವಿಶ್ವದ 10 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ ಅಲಂಕರಿಸುವ ಮೂಲಕ ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿಯ ಅಮೆರಿಕದ ಸಿಲಿಕಾನ್ ಸಿಟಿಯನ್ನು ಹಿಂದಿಮಾಡಿದ  ವಿಶಿಷ್ಠ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನ ಖ್ಯಾತಿಗೆ ಈಗ ಮತ್ತೊಂದು ಮೆರುಗು ಬಂದಂತಾಗಿದೆ.

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಿಕೆ, ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನವನ್ನು ಪಡೆದಿದೆ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಇರುತ್ತಿದ್ದ ಲಂಡನ್ ನಗರವನ್ನು ಬೆಂಗಳೂರು ಹಿಂದಿಕ್ಕಿದೆ.

ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿನ ಆರ್ಥಿಕ ಬೆಳವಣಿಗೆಯ ದರ, ನಗರೀಕರಣ, ಮೂಲಸೌಲಭ್ಯ ಸುಧಾರಣೆ ಕ್ಷೇತ್ರದಲ್ಲಿ ಅಗಾಧ ಹೂಡಿಕೆ, ಇಲ್ಲಿರುವ ನವೋದ್ಯಮಗಳು ಮತ್ತು ನಗರದಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಪೋರೇಟ್ ಕಚೇರಿಗಳಿಗೆ ಸ್ಥಳಾವಕಾಶ ಲಭ್ಯವಾಗುತ್ತಿರುವ ಅಂಶಗಳನ್ನು ಪರಿಗಣಿಸುವ ಮೂಲಕ ಉದ್ಯಾನನಗರಿ ನಂ.1 ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಜೆಎಲ್‌ಎಲ್ ಸಿಟಿ ಮೊಮೆಂಟಂ ಇಂಡೆಕ್ಸ್ ಪ್ರಕಾರ, ವಿಶ್ವದ ಟಾಪ್ 30 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ ವನ್ ಸ್ಥಾನ ಪಡೆದಿದ್ದರೆ, ನೆರೆಯ ತಮಿಳುನಾಡು 30ನೇ ಸ್ಥಾನದಲ್ಲಿದೆ.

ವಿಯೆಟ್ನಾಂನ ಹೊ ಚಿ ಮಿನಾ ನಗರ ನಂ 2, ಅಮೆರಿಕದ ಸಿಲಿಕಾನ್ ವ್ಯಾಲಿ ನಂ 3, ಚೀನಾದ ಶಾಂಘೈ ನಂ 4, ಬ್ರಿಟನ್ ನ ಲಂಡನ್ ನಂ 6, ಅಮೆರಿಕದ ಆಸ್ಟಿನ್ ನಂ7, ವಿಯೆಟ್ನಾಂನ ಹನೋಯ್ ನಂ8, ಬೋಸ್ಟನ್ ನಂ9 ಹಾಗೂ ಕೇನ್ಯಾದ ನೈರೋಬಿ ನಂ 10, ಬೀಜಿಂಗ್ ನಂ 15,

ಹೈದರಾಬಾದ್ 5ನೇ ಸ್ಥಾನದಲ್ಲಿದ್ದು, ದೆಹಲಿ 23 ಹಾಗೂ ಮುಂಬೈ 25ನೇ ಸ್ಥಾನ ಪಡೆದಿದೆ. ವಿಶ್ವದ ವೇಗದ ಬದಲಾವಣೆ ಕಾಣುತ್ತಿರುವ ನಗರಗಳ ಪಟ್ಟಿಯಲ್ಲಿಯೂ ಬೆಂಗಳೂರು ಚೀನಾವನ್ನು ಹಿಂದಿಕ್ಕಿದೆ ಎಂದು ಡಬ್ಲ್ಯುಎಫ್ (ವರ್ಲ್ಡ್ ಎಕೋನಾಮಿಕ್ ಫಾರಂ) ಟ್ವೀಟ್ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top