fbpx
News

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಸಲ್ಮಾನ್ ನಿರ್ದೋಷಿ ಎಂದು ತೀರ್ಪು ನೀಡಿದ ಜೋದ್ಪುರ್ ನ್ಯಾಯಾಲಯ

ಅಕ್ರಮ ಶಸ್ತಾಸ್ತ್ರ ಹೊಂದಿರುವ ಪ್ರಕರಣದಲ್ಲಿ ಇಂದು ತೀರ್ಪು ಪ್ರಕಟ ಮಾಡಿದ ಜೋದ್ಪುರ್ ನ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ನಿರ್ದೋಷಿ ಎಂದು ತೀರ್ಪು ನೀಡಿದೆ. ಹಮ್ ಸಾಥ್, ಸಾಥ್ ಹೇ ಚಿತ್ರೀಕರಣದ ವೇಳೆಯಲ್ಲಿ ಗೋಧ್ರಾ ಫಾರ್ಮ್ಸ್ನಲ್ಲಿ – ಸಲ್ಲು, ಸೈಫ್ ಅಲಿ ಖಾನ್, ನಟಿ ಟಬ್ಬು ಮತ್ತಿತರರು ಅಮೇರಿಕಾದ ಅತ್ಯಾಧುನಿಕ ಶಸ್ತ್ರವನ್ನು ಬಳಸಿ ಕೃಷ್ಣ ಮೃಗ ಬೇಟೆ ಮಾಡಿದ್ದಾರೆಂದು ಅರಣ್ಯ ಇಲಾಖೆ ದೂರು ದಾಖಲಿಸಿತ್ತು.

Image result for salman khan case

ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರು [ಪಬ್ಲಿಕ್ ಪ್ರಾಸಿಕ್ಯೂಟರ್] ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ರವರನ್ನು ಆರೋಪಮುಕ್ತಗೊಳಿಸಿದೆ. ‘ಸಾಂದರ್ಭಿಕ ಸಾಕ್ಷ್ಯಗಳನ್ನಿಟ್ಟುಕೊಂಡು’ ಸಲ್ಮಾನ್ ದೋಷಿ ಎಂದು ಪರಿಗಣಿಸಲು ಅಸಾಧ್ಯವೆಂದು ಜೋದ್ಪುರ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಜ್ ಪುರೋಹಿತರು ಮಹತ್ವದ ತೀರ್ಪು ನೀಡಿದ್ದಾರೆ. ಸಲ್ಮಾನ್ ವಿರುದ್ಧ ಅಕ್ರಮ ಶಸ್ತಾಸ್ತ್ರ ಹೊಂದಿರುವ ಯಾವುದೇ ಪುರಾವೆ ಇರುವುದಿಲ್ಲ ಆದ್ದರಿಂದ ಸಲ್ಮಾನ್ ನಿರ್ದೋಷಿ ಪರಿಗಣಿಸಲಾಗುವುದು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Image result for salman khan case

ಪರವಾನಗಿ ಅವಧಿ ಮುಗಿದ ಶಸ್ತ್ರವನ್ನು ಉಪಯೋಗಿಸಿದ ಹಿನ್ನೆಲೆಯಲ್ಲಿ ‘ಆರ್ಮ್ಸ್ ಆಕ್ಟ್’ ನ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಶೂಟಿಂಗ್ ವೇಳೆ ಸಲ್ಮಾನ್ ರವರು ರೂಮ್ನಲ್ಲಿದ್ದ ಅಮೇರಿಕಾದ ಅತ್ಯಾಧುನಿಕ ಶಸ್ತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಶಸ್ತ್ರ ಉಪಯೋಗಿಸಿ ಹತ್ಯೆಮಾಡಲಾದ ಕೃಷ್ಣ ಮೃಗಗಳ ದೇಹಗಳಲ್ಲಿ ಅದೇ ಶಸ್ತ್ರದ ಬುಲೆಟ್ ಕಂಡುಬಂದಿತ್ತು. ಆದರೆ, ಸಲ್ಲು ವಿರುದ್ಧ ‘ಸಾಂದರ್ಭಿಕ ಸಾಕ್ಷ್ಯಗಳನ್ನು’ ಪರಿಗಣಿಸಲು ಸಾಧ್ಯವಿಲ್ಲವೆಂದು ‘ಸಂದೇಹದ ಲಾಭ’ [Benefit of doubt] ವನ್ನು ಸಲ್ಮಾನ್ ಖಾನ್-ರವರಿಗೆ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top