‘ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ ಒಂದಾಗಿದೆ. ನಾಡಪ್ರಭು ಮಾಗಡಿಕೆಂಪೇಗೌಡರ ಪ್ರಮುಖ ಸೇನಾ ನೆಲೆಯಾಗಿತ್ತು. ಹಾಗೂ ಬೆಂಗಳೂರಿನ ಸುತ್ತಲಿನ ನವದುರ್ಗಗಳಲ್ಲಿ ಪ್ರಮುಖವಾದದ್ದು ಈ ಭೈರವದುರ್ಗ.
ಚಾರಣಿಗರಿಗೆ ಹೇಳಿಮಾಡಿಸಿದ ಬೆಟ್ಟ ಈ ಭೈರವದುರ್ಗ.
ಶೈವಗುರು ಗಗನದಾರ್ಯರು ಶಿವೈಕ್ಯರಾದ ಪವಿತ್ರಸ್ಥಳ ಭೈರವದುರ್ಗ , ಕರ್ನಾಟಕದ ಅತಿ ಎತ್ತರದ ಏಕಶೀಲಾಬೆಟ್ಟಗಳಲ್ಲಿ ಈ ಭೈರವದುರ್ಗದ ಬೆಟ್ಟ ಒಂದಾಗಿದೆ. ಚಾರಣಿಗರಿಗೆ ಹೇಳಿಮಾಡಿಸಿದ ಬೆಟ್ಟ ಇದಾಗಿದೆ.
ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ ಒಂದು
ಮಾಗಡಿ ಮತ್ತು ಹುಲಿಕಲ್ ನಡುವೆ ಇರುವ ಏಕಶಿಲಾ ಬೆಟ್ಟ ಕುದೂರಿನ ಭೈರವನ ದುರ್ಗ. ಕೆಂಪೇಗೌಡರ ಮನೆದೇವರು ಭೈರವನ ಹೆಸರಿನ ದುರ್ಗವಾಗಿರುವ ಇದೂ ಕೂಡ ಕೆಂಪೇಗೌಡರ ಸೇನಾನೆಲೆಯಾಗಿತ್ತು ಎಂದು ಇಲ್ಲಿನ ಕೋಟೆಯ ಅವಶೇಷಗಳಿಂದ ತಿಳಿದುಬರುತ್ತದೆ. ಸುಂದರವಾಗಿರುವ ಈ ಗಿರಿದುರ್ಗವನ್ನು ಸಂರಕ್ಷಿತ ತಾಣವನ್ನಾಗಿ ಮಾಡಲು ಜನಪ್ರತಿನಿಧಿಗಳು ಸರ್ಕಾರ ಕೈಕೋಡಿಸಬೇಕಿದೆ.
ಮಾಗಡಿ ಮತ್ತು ಹುಲಿಕಲ್ ನಡುವೆ ಪ್ರಕೃತಿ ದತ್ತವಾಗಿರುವ ಏಕಶಿಲಾ ಬೆಟ್ಟ ಕುದೂರಿನ ಭೈರವದುರ್ಗ, ಕೆಂಪೆಗೌಡರ ಮನೆದೇವರ ಹೆಸರಿನ ದುರ್ಗವಾಗಿರುವ ಇದು ಕೆಂಪೇಗೌಡರ ಪ್ರಮುಖ ಸೇನಾನೆಲೆಯಾಗಿತ್ತು.
ಸಮುದ್ರ ಮಟ್ಟದಿಂದ ಸು||3000 ಮಿಟರ್ ಎತ್ತರದಲ್ಲಿದೆ, ಈ ಬೆಟ್ಟ ಮೆಲ್ಬಾಗದಲ್ಲಿ ಕ್ರಿ.ಶ 17 ನೇ ಶತಮಾನದ ಮುಂಚುಣಿಯಲ್ಲಿ ಮಾಗಡಿ ಕೇಂಪೇಗೌಡರವರ ಕೋಟೆಗಳನ್ನು ನಿರ್ಮಿಸಲಾಗಿದೆ, ಬ್ರಿಟೀಷ್ ಅಧಿಕಾರಿಯಾದ ಮಾರ್ಥಸ್ ಎಂಬಾತನು ಕ್ರಿ.ಶ 1750 ರಲ್ಲಿ ಈ ಕೋಟೆಗೆ ರಕ್ಷಣಾಗೋಡೆಯನ್ನು ನಿರ್ಮಿಸಿದನು,
ಬೆಂಗಳೂರಿನ ಸುತ್ತಲಿರುವ ನವದುರ್ಗಗಳಲ್ಲಿ ಒಂದಾಗಿದೆ, ಬೆಂಗಳೂರಿನಿಂದ್ದ ಸು||60 km ದೂರದಲ್ಲಿದೆ. ಈ ಬೆಟ್ಟದ ಮಧ್ಯಭಾಗದಲ್ಲಿ ಭೈರವೇಶ್ವರ ಸ್ವಾಮಿಯ ದೇವಾಲಯವು ಗುಹೆಯ ಮಾದರಿಯಲ್ಲಿದೆ, ಶೈವಗುರು ಗಗನದಾರ್ಯರು ಭೈರವನದುರ್ಗದಲ್ಲಿ ಶಿವೈಕ್ಯರಾದರೆಂದು ತಿಳಿಯುತ್ತದೆ.
ಈ ಬೆಟ್ಟಕ್ಕೆ ಭೈರವದುರ್ಗ ಎಂದು ಹೆಸರು ಬರಲು ಕಾರಣ
ಶಿವನ ಶಿರಭಾಗದಲ್ಲಿ ಗಂಗಾಮಾತೆಯನ್ನು ಪಡೆಯದಂತೆ ಈ ಬೆಟ್ಟದ ಶಿರಭಾಗ ಅಂದರೆ ಮೇಲ್ಬಾಗದಲ್ಲಿ ನೀರಿನ ದೂಣೆಯನ್ನು ಕಾಣಬಹುದಾಗಿರುವುರಿಂದ ಈ ಹೆಸರು ಪಡೆದಿರಬಹುದೆಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಭೈರವದುರ್ಗವನ್ನು ಐತಿಹಾಸಿಕ ಸ್ಥಳ ಎಂದು ಗುರುತಿಸದಿರುವುದು ದುರ ದೃಷ್ಟದ ಸಂಗತಿ .
ಕೋಟೆಯ ಕುರುಹುಗಳು ಅವನತಿಯ ಅಂಚಿನಲ್ಲಿದೆ ಕರ್ನಾಟಕ ಸರ್ಕಾರ ಹಾಗೂ ಪ್ರವಾಸೋಧ್ಯಮ ಇಲಾಖೆ (KSTDC) ಮತ್ತ ಇತಿಹಾಸ ಪ್ರಾಚ್ಯ ಇಲಾಖೆಯು ಕೊಂಚ ಗಮನ ಹರಿಸುವ ಮೂಲಕ ಅಭಿವೃದ್ಧಿಪಡಿಸುವ ಮೂಲಕ ಸಂರಕ್ಷಣೆಗೆ ಸಹಕರಿಸಲು ಭೈರವದುರ್ಗದ ಜನತೆ ವಿನಂತಿಸಿಕೊಳ್ಳುತ್ತಿದ್ದಾರೆ.
ಭೈರವದುರ್ಗದ ವಿಳಾಸ:
ಭೈರವದುರ್ಗವನ್ನು NH 48 ಮತ್ತು SH 94. ಹಾಗೂ ಸೋಲೂರಿನ ರಸ್ತೆಯಿಂದ ತಲುಪಬಹುದಾಗಿದೆ. ಶಿವಗಂಗೆಯಿಂದ ಕೇವಲ 8 ಕಿ.ಮಿ. ಸಮೀಪದಲ್ಲಿದೆ.
ಪರ್ವಪುರ,
ಕುದೂರು,
ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ.
PIN-561101
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
