fbpx
ಆರೋಗ್ಯ

ಬೆಂಗಳೂರಿನ ನಾಯಿಗಳಿಗೆ ಹಬ್ಬುತ್ತಿದೆ ಕೆನೈನ್ ಡಿಸ್ಟಂಪರ್ ಭಯಂಕರ ಸಾಂಕ್ರಾಮಿಕ ರೋಗ

ಸಿಲಿಕಾನ್ ಸಿಟಿಯಲ್ಲಿರುವ ನಾಯಿಗಳಿಗೆ ಸಾಂಕ್ರಾಮಿಕ ರೋಗ ಹರಡುತ್ತಿದೆ. ಈ ಮಾರಣಾಂತಿಕ ಕಾಯಿಲೆ ಅತಿ ವೇಗವಾಗಿ ಗಾಳಿಯ ಮೂಲಕ ನಾಯಿಗಳಿಂದ ನಾಯಿಗಳಿಗೆ ಹಬ್ಬುತ್ತಿದೆ. ಅಂದಹಾಗೆ ಆ ಭಯಂಕರ ರೋಗದ ಹೆಸರು ಕೆನೈನ್ ಡಿಸ್ಟಂಪರ್.

ಕೆನೈನ್ ಡಿಸ್ಟಂಪರ್ ರೋಗದ ಮುಖ್ಯ ಲಕ್ಷಣಗಳು ಈ ಕೆಳಗಿನಂತಿವೆ.

  • ನಾಯಿಗಳು ಒಂದೇ ಸಮನೇ ಕೆಮ್ಮುವುದು,
  • ಮೂಗಿನಲ್ಲಿ ಗೊಣ್ಣೆ,
  • ಬಾಯಲ್ಲಿ ಜೊಲ್ಲು ಸುರಿಸುವುದು
  • ನಾಯಿಗಳು ಹೆಚ್ಚಾಗಿ ನಡುಗುತ್ತಿರುವುದು

ಕೆನೈನ್ ಡಿಸ್ಟಂಪರ್ ರೋಗವನ್ನು ತಡೆಯುವ ಬಗೆ:

  • ನಾಮರಿಗಳುಯಿ  ಜನಿಸಿದ 40 ದಿನಗಳೊಳಗೆ ಅವುಗಳಿಗೆ ಚುಚ್ಚುಮದ್ದು ನೀಡಬೇಕು.
  • ಪ್ರತಿ ವರ್ಷಕ್ಕೊಮ್ಮೆ ಐದು ಬಾರಿ ಚುಚ್ಚುಮದ್ದು ಕೊಡಿಸಬೇಕು.
  • ಜೊತೆಗೆ ರೋಗಪೀಡಿತ ಶ್ವಾನಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು.

ಸಾಕು ನಾಯಿಗಳಾದ್ರೆ ಮಾಲೀಕರು ಇದನ್ನೆಲ್ಲ ಮಾಡ್ತಾರೆ. ಆದ್ರೆ, ಬೀದಿನಾಯಿಗಳ ಪಾಡೇನು?. ವಿ ಸೇವ್ ಅನಿಮಲ್ ಸಂಘಟನೆ ಒಂದು NGO ಬೀದಿನಾಯಿಗಳ ಚಿಕಿತ್ಸೆಗೆ ಮುಂದಾಗಿದ್ದಾರೆ. ಈ ಸಂಘಟನೆ ಕೆನೈನ್ ಡಿಸ್ಟಂಪರ್ ರೋಗ ತಗುಲಿರುವ ಬೀದಿನಾಯಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸ್ತಿದೆ. ನಾಯಿಯೊಂದಕ್ಕೆ ಚಿಕಿತ್ಸೆಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಖರ್ಚಾಗುತ್ತೆ. ಇದುವರೆಗೆ 562 ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

aralikatte ತಂಡ ವಿ ಸೇವ್ ಅನಿಮಲ್ ಸಂಘಟನೆ ಮಾಡುತ್ತಿರುವುದು ಈ ಕಾರ್ಯವನ್ನು ಶ್ಲಾಘನೀಸುತ್ತದೆ. ಸಾಮಾನ್ಯವಾಗಿ ಬಿಬಿಎಂಪಿ ಮಾಡಬೇಕಿದ್ದ ಕಾರ್ಯವನ್ನು ಈ ಸಂಘಟನೆ ಮಾಡುತ್ತಿದೆ. ಈ ತಂಡಕ್ಕೆ ಇನ್ನಷ್ಟು ಸಾರ್ವಜನಿಕ ಸಹಕಾರ ಸಿಕ್ಕರೆ ಮತ್ತಷ್ಟು ಮೂಕ ಪ್ರಾಣಿಗಳ ಜೀವ ಉಳಿಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top