fbpx
ಕಥೆ

ಬಿಟ್ಟಿ ಕೂಳು ಹಾಕಲು ಇದೇನು ತೋಟದಪ್ಪನ ಛತ್ರವೇ ? ಈ ನಾಣ್ಣುಡಿ ಸಾಮಾನ್ಯ ಆದ್ರೆ ಈ ತೋಟದಪ್ಪ ಯಾರು?

ಗುಬ್ಬಿಯ ಲಿಂಗಾಯಿತ ಶೆಟ್ಟರ ಕುಟುಂಬದಲ್ಲಿ ೧೮೩೮ ರಲ್ಲಿ ರುದ್ರಪ್ಪ ಹಾಗೂ ಚೆನ್ನಮ್ಮ ದಂಪತಿಗಳಿಗೆ ಜನಿಸಿದರು, ಮೂಲತಃ ಗುಬ್ಬಿಯವರಾದ ಇವರ ತಂದೆಯವರು ಬೆಂಗಳೂರಿನ ಮಾಮೂಲು ಪೇಟೆಗೆ ಬಂದು ನೆಲೆಸಿದರು. ತಮ್ಮ ಕುಲ ಕಸುಬಾದ ವ್ಯಾಪಾರ ವೃತ್ತಿಯನ್ನು ಮುಂದುವರೆಸಿದರು.

Gubbi_Thotadappa_pic

ಗುಬ್ಬಿ ತೋಟದಪ್ಪ

ಮಕ್ಕಳಿಲ್ಲದ ಅವರ ಮನೆಯಲ್ಲಿ ಅನೇಕ ಬಡ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದರು; ಊಟ ವಸತಿಗಳನ್ನು ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದರು,ದೇಶದಾದ್ಯಂತದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರವಾಸಿಗರಿಗೆ ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿದ್ದರು. ಆ ಸ್ಥಳಕ್ಕೆ “ಗುಬ್ಬಿ ತೋಟದಪ್ಪನವರ ಛತ್ರ”ಎಂಬ ಹೆಸರು ಬಂತು, ಮುಂದೆ ವಿದ್ಯಾರ್ಥಿ ನಿಲಯ ಸ್ಥಾಪಿಸಲು ತೋಟದಪ್ಪನವರಿಗೆ ಇದು ಸೂರ್ತಿಯಾಯಿತು.

1897 ರಲ್ಲಿ ಮೈಸೂರು ರೈಲ್ವೆ ಇಲಾಖೆಯಿಂದ 10,000/- ರೂ. ಗಳಿಗೆ ಜಮೀನು ಖರೀದಿಸಿ ಅಲ್ಲಿ ವೀರಶೈವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯವನ್ನು ಕಟ್ಟಿಸಿದರು. ಶ್ರೀಮನ್ಮಹಾರಾಜ ನಾಲ್ವಡಿ ಕಷ್ಣರಾಜ ಒಡೆಯರ್ ರವರು 11.2.1903 ರಂದು ವಿದ್ಯಾರ್ಥಿ ನಿಲಯ ಮತ್ತು ಛತ್ರಗಳ ಉದ್ಘಾಟನೆ ಮಾಡಿದರು .

maxresdefault

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ

ಇವರಿಗೆ ಆಗಿನ ಮೈಸೂರು ಅರಸರಾದ ಕೃಷ್ಣರಾಜ ಒಡೆಯರ್ ರವರು “ಧರ್ಮಪ್ರವರ್ತ” ಹಾಗೂ ಬ್ರಿಟಿಷ್ ಸರ್ಕಾರವು “ರಾವ್ ಬಹದ್ದೂರ್” ಎಂಬ ಬಿರುದುಗಳನ್ನು ಇತ್ತು ಗೌರವಿಸಲಾಯಿತು.

ತೋಟದಪ್ಪನವರ ಕೊನೆಯ ದಿನಗಳಲ್ಲಿ ತಮ್ಮ ಆಸ್ತಿಯನ್ನೆಲ್ಲ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಗೆ ದಾನ ಮಾಡಿ, ಆ ಸಂಸ್ಥೆಗೆ ಕೆ.ಪಿ.ಪುಟ್ಟಣ್ಣ ಶೆಟ್ಟಿಯವರನ್ನು ಪ್ರಥಮ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.

Gubbi_thotadappa_statue

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ

೨೦೦೫ ರಲ್ಲಿ, ವಿಧ್ಯಾರ್ಥಿ ನಿಲಯವು ಮರುನಿರ್ಮಾಣವಾಯಿತು. ಸಂಸ್ಥೆಯ ಆದಾಯದ ಮೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಶತಮಾನೋತ್ಸವ ಭವನ ನಿರ್ಮಿಸಲಾಯಿತು. ಪ್ರವಾಸಿ ಮಂದಿರವು ಎಲ್ಲರಿಗೂ ತೆರೆದಿದೆ, ವಿಧ್ಯಾರ್ಥಿ ನಿಲಯ ಮಾತ್ರ ವೀರಶೈವ-ಲಿಂಗಾಯತರಿಗೆ ಮಾತ್ರ ಮೀಸಲಿದೆ.

ಶತಾಯುಷಿ ಸಿದ್ಧಗಂಗಾ ಮಠಧೀಶರಾದ ಶಿವಕುಮಾರ ಸ್ವಾಮಿಗಳವರು 1927-30 ರಲ್ಲಿ ಈ ವಿದ್ಯಾರ್ಥಿ ನಿಲಯದಲ್ಲಿದ್ದರೆಂಬುದು ಒಂದು ವಿಶೇಷ ಸಂಗತಿ.

ru_61

ಶಿವಕುಮಾರ ಸ್ವಾಮಿ

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪನವರೂ ಸಹ 1921-24ರಲ್ಲಿ ಇದೇ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು

PIO (Bangalore)/May, 1957, A24e/A32NShri S. Nijalingappa, chief Minister Mysore State.

ಎಸ್ ನಿಜಲಿಂಗಪ್ಪ

ಹಾಗು ಇನ್ನು ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ತಮ್ಮ ಪರಿಣತಿಯನ್ನು ಮೆರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top