fbpx
News

ಗಣರಾಜ್ಯೋತ್ಸವ ವಿಶೇಷವಾಗಿ ಬುರ್ಜ್ ಖಲೀಫಾ ತ್ರಿವರ್ಣಗಳ ಲೈಟಿಂಗ್ ಸೊಬಗು

ದುಬೈ: 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾರತೀಯ ಪ್ರಜೆಗಳು ಸೌದಿಯಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ತ್ರಿವರ್ಣ ಧ್ವಜದ ವಿಶೇಷ ಬೆಳಕಿನ ವ್ಯವಸ್ಥೆ ಮೂಲಕ ಸಾರ್ವಜನಿಕ ಪ್ರದರ್ಶನ ಅಲ್ಲಿ ನೆರೆದಿದ್ದ ಸಾವಿರಾರು ಪ್ರವಾಸಿಗರ ಕಣ್ಮನ ಸೆಳೆಯಿತು.

68ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಗೆ ವಿಶೇಷ ಅತಿಥಿಯಾಗಿ ಸೌದಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರು ಆಗಮಿಸಿರುವಂತೆಯೇ ಅತ್ತ ಭಾರತ-ಯುಎಇ ಸ್ನೇಹವನ್ನು ಪ್ರತಿಬಿಂಬಿಸುವ ಸಲುವಾಗಿ ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾಗೆ ತ್ರಿವರ್ಣ ಧ್ವಜದ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕ ಪ್ರದರ್ಶನ ಮಾಡಲಾಗಿದೆ.

ಕಟ್ಟಡದ ಹೊರಮೇಲ್ಮೈಯನ್ನು ಎಲ್ ಇಡಿ ಲೈಟಿಂಗ್ ನಿಂದ ಅಲಂಕೃತಗೊಳಿಸಲಾಗಿದ್ದು, ಭಾರತದ ತ್ರಿವರ್ಣ ಧ್ವಜ ಹಾಗೂ ಮಧ್ಯದಲ್ಲಿ ಅಶೋಕ ಚಕ್ರ ಬರುವ ರೀತಿಯಲ್ಲಿ ಬೆಳಕಿನ ವಿನ್ಯಾಸವನ್ನು ಅಳವಡಿಸಲಾಗಿದೆ.

ಬುಧವಾರ ಹಾಗೂ ಗುರುವಾರಗಳಂದು ಈ ವಿಶೇಷ ತ್ರಿವರ್ಣದ ಲೈಟಿಂಗ್ ನಿಂತ ಖಲೀಫಾ ಕಟ್ಟಡ ಕಂಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ವಿಶೇಷ ಬೆಳಕಿನ ವ್ಯವಸ್ಥೆ ಯುಎಇ ಹಾಗೂ ಭಾರತ ದೇಶಗಳ ನಡುವಿನ ಐಕಮತ್ಯವನ್ನು ಸಾರುತ್ತದೆ ಎಂದು ಬುರ್ಜ್ ಖಲೀಫಾದ ಮಾಲೀಕತ್ವ ಸಂಸ್ಥೆ ಇಮಾರ್ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top