ಕರ್ನಾಟಕ ರಜ್ಯ ರಸ್ತೆ ಸಾರಿಗೆ ಸಂಸ್ಥೆ ಯಲ್ಲಿ (ಕೆಎಸ್‌ಆರ್‌ಟಿಸಿ) ಭರ್ಜರಿ ನೇಮಕ ನಡೆಯಲಿದ್ದು, ಈ ಸಂಬಂಧ ಸದ್ಯವೇ ಪ್ರಕಟಣೆ ಹೊರಡುವ ನಿರೀಕ್ಷೆಗಳಿವೆ.
ಸಂಸ್ಥೆಯ ಮೂಲಗಳ ಪ್ರಕಾರ ಅಸಿಸ್ಟೆಂಟ್ ಅಕೌಂಟೆಂಟ್, ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್‌ಪ್ಟೆಕ್ಟ್ ಹುದ್ದೆಗಳು ಸೇರಿದಂತೆ ನಾನ್ ಸೂಪರ್ ವೈಸರಿ ವಿಭಾಗದಲ್ಲಿ ಒಟ್ಟು 274 ಹುದ್ದೆಗಳಿಗೆ ನೇಮಕ ನಡೆಯಲಿದೆ. ಅದೇ ರೀತಿಯಾಗಿ ಮೆಕ್ಯಾನಿಕಲ್ ವಿಭಾಗದಲ್ಲಿ 840 ಹುದ್ದೆಗಳಿಗೆ ನೇಮಕ ನಡೆಯಲಿದೆ. ಆಟೋ ವೆಲ್ಡರ್, ಆಟೋ ಪೆಯಿಂಟರ್, ಟೆಕ್ನಿಕಲ್ ಅಸಿಸ್ಟೆಂಟ್, ಆಟೋ ವೆಲ್ಡರ್ , ಆರ್ಟಿಸನ್ ಆಟೋಮೆಕ್ಯಾನಿಕ್ ಹುದ್ದೆಗಳು ಈ ವಿಭಾಗದಲ್ಲಿ ಖಾಲಿ ಇವೆ ಎಂದು ಹೇಳಲಾಗಿದೆ. 556 ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು 160ಆರ್ಟಿಸನ್ ಆಟೋಮೆಕ್ಯಾನಿಕ್ ಹುದ್ದೆಗಳಿಗೆ ನೇಮಕ ನಡೆಯುತ್ತಿರುವುದು ವಿಶೇಷವಾಗಿದೆ.
ಇದೇ ರೀತಿಯಾಗಿ, 39 ಟ್ರಾಫಿಕ್ ಇನ್ಸ್‌ಪೆಕ್ಟರ್ ಹಾಗೂ 23 ಚಾರ್ಜ್ ಮನ್, 6 ಅಕೌಂಟ್ಸ್ ಸೂಪರ್‌ವೈಸರ್ ಹುದ್ದೆಗಳಿಗೂ ನೇಮಕ ನಡೆಯಲಿದೆ. ಮುಂದಿನ ಮೂರ್ನಾಲ್ಕು ದಿನಗಳ ಒಳಗೆ ಈ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಹೊರಬೀಳಲಿದೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ನಡೆಯಲಿದ್ದು, ಅರ್ಜಿ ಸಲ್ಲಿಸಲು ಕನಿಷ್ಠ 15 ದಿನ ಕಾಲಾವಕಾಶ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕೆಎಸ್‌ಆರ್‌ಟಿಸಿಯ ವೆಬ್ ನೋಡುತ್ತಿರಬಹುದು: www.ksrtc1.online-ap1.com
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
