fbpx
Karnataka

ರಾಜಪಥ್’ನ ಪಥ ಸಂಚಲನದಲ್ಲಿ ಈ ಬಾರಿ ಕರ್ನಾಟಕದ ಚಿತ್ತಾಕರ್ಷಕ ಸ್ತಬ್ಧಚಿತ್ರ

ನವದೆಹಲಿ: ಜ.26-ರಾಜಧಾನಿಯಲ್ಲಿ ಇಂದು 68ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ವರ್ಣರಂಜಿತ ಪಥಸಂಚಲನದಲ್ಲಿ ಕರ್ನಾಕಟ ರಾಜ್ಯದ ವಾರ್ತಾ ಮತ್ತು ಸಂಪರ್ಕ ಇಲಾಖೆಯ ಸ್ತಬ್ಧ ಚಿತ್ರ ವಿಶೇಷ ಗಮನಸೆಳೆಯಿತು.

kpatasanchalana

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಒಂದು ತಿಂಗಳಿನಿಂದ ಸಿದ್ಧವಾದ ಈ ಸ್ತಬ್ಧಚಿತ್ರದಲ್ಲಿ ಗೊರವರ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪಟ್ಟದ ಕುಣಿತ, ಜಗ್ಗಲಗೆ, ದಾಸರಪದ, ನಂದಿಧ್ವಜದಂತಹ ಜನಪದ ಪ್ರಕಾರಗಳು ಇರಲಿವೆ. ರಾಜ್ಯದಿಂದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಅಭ್ಯಾಸ ನಡೆಸಿದ್ದಾರೆ.

ಪರೇಡ್‍ನಲ್ಲಿ ಸತತ 6 ವರ್ಷಗಳಿಂದ ಸ್ತಬ್ಧಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ರಾಜ್ಯದ ಸಾಂಸ್ಕøತಿಕ ಪರಂಪರೆ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳಿಸುತ್ತಿದೆ.

ರಾಜ್ಯದ ಪ್ರಸಿದ್ಧ ಕಲಾವಿದರಾದ ಶಶಿಧರ ಅಡಪ ಅವರ ಕೈಚಳಕದಲ್ಲಿ ರಾಜ್ಯದ ಸ್ತಬ್ಧಚಿತ್ರ ನಿರ್ಮಾಣವಾಗಿದ್ದು, ಒಂದು ತಿಂಗಳಿಂದ 25ಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಕೆಲಸ ನಿರ್ವಹಿಸಿದ್ದಾರೆ. ವಿ. ಮನೋಹರ್ ಸ್ತಬ್ಧಚಿತ್ರಕ್ಕೆ ಹಿನ್ನೆಲೆ ಸಂಗೀತ, ಅಮರೇಶ್ ದೊಡ್ಡಮನಿ ಕಲಾವಿದರ ಉಸ್ತುವಾರಿ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top