fbpx
News

ಭಾರತೀಯ ಸ೦ವಿಧಾನ ಜಾರಿಗೆ ಬಂದ ದಿನವನ್ನು ನಾವು ಗಣರಾಜ್ಯೋತ್ಸವ ಆಚರಿಸಲಾಗುವುದು

ಭಾರತೀಯ ಸ೦ವಿಧಾನ ಜಾರಿಗೆ ಬಂದ ದಿನವನ್ನು ನಾವು ಗಣರಾಜ್ಯೋತ್ಸವ ಆಚರಿಸಲಾಗುವುದು

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.

ಇತಿಹಾಸ

ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು Amit manshetti ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.

ಸತ್ಯಮೇವ ಜಯತೆಯೆಂಬ ಧ್ಯೇಯ ವಾಕ್ಯ, ಕೇಸರಿ (ಧೈರ್ಯ ಮತ್ತು ತ್ಯಾಗದ ಪ್ರತೀಕ) ಬಿಳಿ (ಸತ್ಯ ಮತ್ತು ಶಾಂತಿಯ ಪ್ರತೀಕ) ಹಸಿರು(ನಂಬಿಕೆ ಮತ್ತು ಸಂಮೃದ್ಧಿಯ ಪ್ರತೀಕ)  ಬಣ್ಣಗಳಿಂದ ರಾರಾಜಿಸುವ ತ್ರಿವರ್ಣ ಧ್ವಜ ದೇಶದ ಪ್ರಗತಿಯ ಅಶೋಕ ಚಕ್ರವನ್ನು ಒಳಗೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top