ಜನವರಿ 28, 2017 (ಶನಿವಾರ)
ಪಂಚಾಂಗ: ಶ್ರೀ ಮನ್ಮಥನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ರಾಹುಕಾಲ: ಮಧ್ಯಾಹ್ನ 2:03 pm ರಿಂದ 3:30 pm
ಗುಳಿಕಕಾಲ: ಬೆಳಗ್ಗೆ 9:42 am ರಿಂದ 11:09 am
ಯಮಗಂಡಕಾಲ: ಬೆಳಗ್ಗೆ 6:49 am ರಿಂದ 8:16 am
ಮೇಷ
ನೀವು ನಿಮ್ಮ ಮಿತ್ರರಲ್ಲಿ ಕಲಹ ಮಾಡುವ ಸ೦ಭವ, ಜೀವನದಲ್ಲಿ ಸ೦ತೃಪ್ತಿ, ನಿಮ್ಮ ಸ್ವಭಾವ ಬಹಳಷ್ಟು ಪ್ರಬಲವಾಗಿದೆ. ಉತ್ತಮ ನಾಯಕರಾಗುವ ಯೋಗ, ಮಾತು ಕಡಿಮೆ ಇರಲಿ.
ವೃಷಭ
ಸಮಸ್ಯೆಗಳ ಜಂಜಾಟದಿಂದ ಮುಕ್ತರಾಗುವಿರಿ, ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ, ವೃತ್ತಿರಂಗದಲ್ಲಿ ಮುಂಭಡ್ತಿಯ ಸೂಚನೆ.
ಮಿಥುನ
ಸಮಾಜದ ಸವ೯ತೋಮುಖ ಪ್ರಗತಿಗಾಗಿ ಉತ್ತಮ ಮಾಗ೯ದಶ೯ನ ಮಾಡಿ ಪ್ರಶ೦ಸೆಗೆ ಪಾತ್ರರಾಗುವಿರಿ, ಕೆಲಸ ಕಾಯ೯ಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ.
ಕಟಕ
ದೇವತಾಕಾರ್ಯಗಳಿಂದ ಖರ್ಚು ತಂದೀತು, ಅತೃಪ್ತಿ ಮನೋಭಾವದಿಂದಾಗಿ ಕಸಿ ವಿಸಿಯಾಗಲಿದೆ, ದಿನಾಂತ್ಯದಲ್ಲಿ ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ.
ಸಿಂಹ
ಸಾಂಸಾರಿಕವಾಗಿ ನೆಮ್ಮದಿ ತರುತ್ತದೆ. ವಿದ್ಯೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಇರುತ್ತದೆ. ಪ್ರಭಾವಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಸಿದ್ಧಿ, ಆರೋಗ್ಯ ಭಾಗ್ಯ.
ಕನ್ಯಾ
ಬಂಧು ವರ್ಗದ ಸಹಕಾರ ಸಂತಸ ತಂದೀತು, ಹಿರಿಯರಿಗೆ ಗೌರವ, ಸನ್ಮಾನ ನಿಮ್ಮ ಸಂಪಾದನೆ ಹೆಚ್ಚಿನ ರೀತಿಯಲ್ಲಿ ವೃದ್ಧಿಯಾಗಲಿದೆ. ಪ್ರೇಮಿಗಳಿಗೆ ಸಂತಸ.
ತುಲಾ
ಪ್ರವಾಸದಿಂದ ಸಂತಸ, ಹಣಕಾಸು ವಿಚಾರದಲ್ಲಿ ಜಾಗ್ರತೆ ಮಾಡಿದಷ್ಟು ಉತ್ತಮ, ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ, ಅಲೆದಾಟ ಜಾಸ್ತಿಯಾಗಲಿದೆ.
ವೃಶ್ಚಿಕ
ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಲಿ, ಬ್ಯಾಂಕ್ ಹೋಟೆಲ್, ಭೂ ಖರೀದಿ ವ್ಯವಹಾರಸ್ಥರಿಗೆ ಉತ್ತಮ ಲಾಭ ತಂದು ಕೊಡಲಿದೆ. ಆಗಾಗ ಕಿರಿಕಿರಿಯಿಂದ ಬೇಸರ.
ಧನು
ಧನಾಗಮನದಲ್ಲಿ ಏರುಪೇರು, ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಯಶಸ್ಸು ನಿಮ್ಮದಾಗಲಿದೆ. ಮಿತ್ರರಿಂದ ಸಹಕಾರ.
ಮಕರ
ಜಲೋತ್ಪನ್ನ ವಸ್ತುಗಳಿಗೆ ಬೇಡಿಕೆ, ವಾಹನ ಖರೀದಿಸುವಾಗ ದುಡುಕದಿರಿ, ವಿದ್ಯಾರ್ಥಿಗಳಿಗೆ ಯಶೋಭಿವೃದ್ಧಿ ಇರುತ್ತದೆ. ವಿವಾಹಕ್ಕೆ ಅನುಕೂಲಕರ ಸಮಯ.
ಕುಂಭ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ, ಆದಾಯ ಉತ್ತಮವಿದ್ದರೂ ಖರ್ಚು ಜಾಸ್ತಿ, ನ್ಯಾಯಾಲಯ ಕೆಲಸ ಕಾರ್ಯಗಳು ಮುನ್ನಡೆಯಲ್ಲಿ ಸಾಗಲಿವೆ.
ಮೀನ
ಮಾರ್ಗಾಯಾಸದಿಂದ ಕಾಲಹರಣವಾದೀತು. ಹಣ ಸದ್ವಿನಿಯೋಗದಿಂದ ಕಾರ್ಯಸಿದ್ಧಿ, ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆಮ್ಮದಿಯ ಜೀವನ ಹತ್ತಿರವಿದೆ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
