ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ಸೇನೆಯು ಎನ್‌ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್‌ಗೆ ಪ್ರವೇಶ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿವಾಹಿತ ಮತ್ತು ಅವಿವಾಹಿತ ಪುರುಷರು ಹಾಗೂ ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. 2017ರ ಅಕ್ಟೋಬರ್‌ನಿಂದ ಈ ಕೋರ್ಸ್ ಆರಂಭಗೊಳ್ಳಲಿದೆ. ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಚೆನ್ನೈಯ ಆಫೀಸರ್ ಅಕಾಡೆಮಿಯಲ್ಲಿ ತರಬೇತಿ/ ಪದವೀಧರ ಪುರುಷ-ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ
-ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 15, 2017
-ರಾಜ್ಯದ ಅಭ್ಯರ್ಥಿಗಳಿಗೆ ಎಸ್‌ಎಸ್‌ಬಿ ಪರೀಕ್ಷಾ ಕೇಂದ್ರ: ಬೆಂಗಳೂರು
-ಕೋರ್ಸ್ ಆರಂಭ: ಅಕ್ಟೋಬರ್ 2017
-ವೆಬ್‌ಸೈಟ್ ವಿಳಾಸ: http://joinindianarmy.nic.in/alpha/login.htm
ಅರ್ಹತೆಗಳೇನಿರಬೇಕು?
ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ, ನಿಗದಿತ ವಿದ್ಯಾರ್ಹತೆಯಲ್ಲಿ ಶೇಕಡಾ 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.ಅಂತೆಯೇ ಅಂತಿಮ ಪದವಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳೂ ಅರ್ಜಿ ಹಾಕಬಹುದು.
ಇನ್ನು ಎನ್‌ಸಿಸಿ ಅಭ್ಯರ್ಥಿಗಳಿಗಾಗಿಯೇ ಇರುವ ಕೋರ್ಸ್ ಆಗಿರುವುದರಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎನ್‌ಸಿಸಿಯ ಸೀನಿಯರ್ ಡಿವಿಷನ್ ವಿಭಾಗದಲ್ಲಿ ಕನಿಷ್ಠ ಎರಡು ಶೈಕ್ಷಣಿಕ ವರ್ಷ ಕಾರ್ಯನಿರ್ವಹಿಸಿರಬೇಕು ಹಾಗೂ ಎನ್‌ಸಿಸಿ ಬಿ ಅಥವಾ ಸಿ ಸರ್ಟಿಫಿಕೇಟ್ ಹೊಂದಿರಬೇಕು.
ವಯೋಮಿತಿ: 1992ರ ಜುಲೈ 2ರ ಮತ್ತು 1998ರ ಜುಲೈ2ರ ಮಧ್ಯೆ ಜನಿಸಿದವರು ಮಾತ್ರ ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ 19ರಿಂದ 25 ವರ್ಷದೊಳಗಿನ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕ ಪ್ರಕ್ರಿಯೆ ಹೇಗಿರುತ್ತದೆ?
ಎಸ್‌ಎಸ್‌ಬಿ (ಸವೀರ್‍ಸ್ ಸೆಲೆಕ್ಷನ್ ಬೋರ್ಡ್) ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ, ಸ್ಥಳದ ಕುರಿತು ಮಾಹಿತಿ ನೀಡುತ್ತದೆ. ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಈ ಮಾಹಿತಿ ನೀಡಲಾಗುತ್ತದೆ.
-ಬೆಂಗಳೂರು, ಅಲಹಾಬಾದ್, ಭೋಪಾಲ್ ಮತ್ತು ಕಪುರ್‌ತಲದಲ್ಲಿ ಎಸ್‌ಎಸ್‌ಬಿ ನೇಮಕ ಪ್ರಕ್ರಿಯೆಗಳು ನಡೆಯುತ್ತವೆ.
-ಸೈಕಾಲಜಿಸ್ಟ್, ಗ್ರೂಪ್ ಟೆಸ್ಟಿಂಗ್ ಆಫೀಸರ್ ಮತ್ತು ಇಂಟರ್‌ವ್ಯೂ ಆಫೀಸರ್ ನೇಮಕ ಪ್ರಕ್ರಿಯೆಗಳನ್ನು ನಡೆಸುತ್ತಾರೆ.
-ಐದು ದಿನಗಳ ಕಾಲ ನೇಮಕ ಪ್ರಕ್ರಿಯೆ ನಡೆದ ಬಳಿಕ, ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
-ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈಯ ದಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ 49 ವಾರಗಳ ತರಬೇತಿ ನೀಡಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
