fbpx
News

2017-18ನೇ ಕೇಂದ್ರ ಬಜೆಟ್ ಯೋಜನೆಯ ವಿವರ

ನವದೆಹಲಿ: 2017-18ನೇ ಸಾಲಿನ ಪ್ರಸಕ್ತ ವರ್ಷದ ಕೇಂದ್ರ ಬಜೆಟ್ ಮಂಡನೆ ಮುಕ್ತಾಯಗೊಂಡಿದ್ದು, ಈ ಬಾರಿಯ ಬಜೆಟ್’ನ ಒಟ್ಟು ಗಾತ್ರವು ರೂ. 21 ಲಕ್ಷದ 47 ಸಾವಿರ ಕೋಟಿಯಾಗಿದ್ದು, ಪ್ರಸಕ್ತ ವರ್ಷ ಸೇರಿ ಜೇಟ್ಲಿ ಅವರು ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. 1 ಗಂಟೆ 50 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಶಗಳನ್ನು ಓದಿ ಹೇಳಿದರು.

ರೈತರಿಗೆ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಹಲವು ಹೊಸ ಅಂಶಗಳ ಘೋಷಣೆಮಾಡಿದ್ದಾರೆ. 2017-18 ಸಾಲಿನಲ್ಲಿ ರೈತರಿಗೆ ಕೃಷಿ ಸಾಲದ ಮಿತಿ ರೂ.10 ಲಕ್ಷ ಕೋಟಿಗೆ ಏರಿಸಲಾಗುವುದು ಹಾಗೂ ಗ್ರಾಮೀಣಾಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ರೂ.1,87,223 ಕೋಟಿ ಮೀಸಲು. ಕಳೆದ ಬಾರಿಗಿಂತ ಇದು 24% ಹೆಚ್ಚಳಮಾಡಲಾಗಿದೆ.

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಕೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ಇದಾಗಿತ್ತು.

ಗ್ರಾಮೀಣ ಪ್ರದೇಶಗಳ ಮೂಲಭೂತ :ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಈ ವರ್ಷ 8,200 ಕೋಟಿ ರೂಪಾಯಿ ಮೀಸಲಿಟ್ಟಿದೆ. ಹಣಕಾಸು ವರ್ಷ 2017-18ರಲ್ಲಿ ಗ್ರಾಮೀಣ ವಲಯದ ಅಭಿವೃದ್ಧಿಗೆ 1,87,200 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ವರ್ಷ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ 48,700 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಮನ್ರೇಗಾದಡಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಶೇಕಡಾ 55ರಷ್ಟು ಹೆಚ್ಚಿಸಲಾಗಿದೆ.

2019ರ ವೇಳೆಗೆ ಗ್ರಾಮೀಣ ಪ್ರದೇಶವನ್ನು ಗುಡಿಸಲು ಮುಕ್ತಗೊಳಿಸಿ ಸರ್ವರಿಗೂ ಸೂರು ಕಲ್ಪಿಸಲು ನಿರ್ಧಾರ.

ಆರೋಗ್ಯ ವಲಯಕ್ಕೆ :* ದೇಶದಲ್ಲಿರುವ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸುಧಾರಣಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು

* ನಿಷ್ಣಾತ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿಗಳಲ್ಲಿ ಪ್ರತಿ ವರ್ಷಕ್ಕೆ 5000 ಹೆಚ್ಚು ಸೀಟುಗಳನ್ನು ಸೇರ್ಪಡೆ ಮಾಡಲು ನಿರ್ಧಾರ

* ಜನರಿಗೆ ರಿಯಾಯಿತಿ ದರದಲ್ಲಿ ಔಷಧಿ ಕೈಗೆಟುಕುವಂತೆ ಮಾಡಲು ಔಷಧಿ ಮತ್ತು ಪ್ರಸಾದನ ಕಾಯ್ದೆಯಡಿಯಲ್ಲಿ ಬದಲಾವಣೆಗೆ ಪ್ರಸ್ತಾಪ

* ವೈದ್ಯಕೀಯ ಉಪಕರಣಗಳಿಗೆ ಸಂಬಂಧಪಟ್ಟಂತೆ ಹೊಸ ಕಾಯ್ದೆಗಳನ್ನು ರೂಪಿಸಲಾಗುವುದು

ಗ್ರಾಮೀಣ ಮಹಿಳೆಯರ ಸಶಕ್ತೀಕರಣಕ್ಕೆ: ಈ ವರ್ಷ ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಲಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡುವ ಸಾಲದ ಅವಧಿಯನ್ನು 15ರಿಂದ 20 ವರ್ಷಕ್ಕೆ ಹೆಚ್ಚಿಸಲಾಗಿದೆ.ಅಲ್ಲದೆ ಈ ಯೋಜನೆಗೆ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು 15,000 ಕೋಟಿಯಿಂದ 23,000 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

*ಹೊಸ ಕಾನೂನಿನ ಮೂಲಕ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳೋದಾಗಿ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ಇದನ್ನು ಹೊರತುಪಡಿಸಿದ್ರೆ ರಕ್ಷಣಾ ಇಲಾಖೆಗೆ 2.74 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಆಧಾರ್ ಯೋಜನೆಗಳಿಗಾಗಿ 20 ಲಕ್ಷ ಹೊಸ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಆಧಾರ್ ಪೇ ಹೆಸರಲ್ಲಿ ಯೋಜನೆ ಜಾರಿ ಮಾಡಲಾಗುತ್ತದೆ.

ಡಿಜಿಟಲ್ ಟ್ರಾನ್ಸಾಕ್ಷನ್ ಉತ್ತೇಜನಕ್ಕೆ ಕ್ರಮ, ಹಲವು ಸಾರ್ವಜನಿಕ ಉದ್ದಿಮೆಗಳು ಷೇರುಮಾರುಕಟ್ಟೆಗೆ , ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಲಭ್ಯತೆ, 2020ರ ವೇಳೆಗೆ ಕ್ಷಯರೋಗ ನಿರ್ಮೂಲನೆ , ರೈತರಿಗೆ 10 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯದ ಗುರಿ ಹೀಗೆ ಹತ್ತಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಚಿವ ಅರುಣ್ ಜೇಟ್ಲಿ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top