ಬೆಂಗಳೂರಿನಲ್ಲಿ ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡುವುದು ನಗರದ ಜನತೆಗೆ ಅನಿವಾರ್ಯವಾಗಿದೆ. ಒಂದು ವೇಳೆ ಹಸಿ ಹಾಗೂ ಒಣ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡದಿದ್ದರೆ 100ರೂ. ದಂಡ ವಿಧಿಸಲಾಗುವುದು ಎಂದು ಮೇಯರ್ ಜಿ.ಪದಮಾವತಿ ಎಚ್ಚರಿಸಿದ್ದಾರೆ.
ಬಿಬಿಎಂಪಿ ಈ ಹೊಸ ವ್ಯವಸ್ಥೆಯ ಅನುಷ್ಠಾನಕ್ಕೆ ಸಿದ್ಧವಾಗಿದೆ. ಈಗಾಗಲೇ ಕಸ ವಿಂಗಡಣೆ ಮಾಡಿ ಕೊಡಬೇಕೆಂದು ನಗರದ ಜನತೆಗೆ ಸೂಚಿಸಲಾಗಿದೆ.
ಕಸ ವಿಂಗಡಿಸದಿದ್ದರೆ 100ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ದಂಡ ಕಟ್ಟಿದವರು ನಾಲ್ಕನೇ ಬಾರಿಯೂ ಕಸ ವಿಂಗಡಿಸದಿದ್ದರೆ 500ರೂ. ದಂಡ ವಿಧಿಸಲಾಗುತ್ತದೆ. ಇದಕ್ಕೂ ಬಗ್ಗದಿದ್ದರೆ ಪ್ರಾಪರ್ಟಿ ಟ್ಯಾಕ್ಸ್‍ನಲ್ಲಿ ಬ್ಲಾಕ್ ಲೀಸ್ಟ್‍ಗೆ ಸೇರಿಸಲಾಗುತ್ತದೆ ಎಂದು ಮೇಯರ್ ಪದ್ಮಾವತಿ ನಗರದ ನಾಗರಿಕರಿಗೆ ಎಚ್ಚರಿಸಿದ್ದಾರೆ.
ಒಂದು ವಾರದಲ್ಲಿ ಕೇವಲ ಎರಡು ದಿನ ಮಾತ್ರ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಪ್ರತಿನಿತ್ಯ ಹಸಿ ಕಸ ಪಡೆಯುವಂತೆ ಪೌರಕಾರ್ಮಿಕರಿಗೆ ಸೂಚಿಸಲಾಗಿದೆ.
ಮೇಯರ್ ಜಿ.ಪದಮಾವತಿ, ಯಡಿಯೂರು ವಾರ್ಡ್ 167ರ ವ್ಯಾಪ್ತಿಯ ದ.ರಾ.ಬೇಂದ್ರೆ ವೃತದಲ್ಲಿ ನೂತನವಾಗಿ ನಿರ್ಮಿಸಿರುವ ದ.ರಾ.ಬೇಂದ್ರೆ ಗಗನ ಮಾರ್ಗ ಪಾದಚಾರಿ ಮೇಲುಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆಯಿಂದ ಕಸ ವಿಂಗಡಣೆ ಕಡ್ಡಾಯವಾಗಿದೆ. ಕಸ ವಿಂಗಡಣೆ ಮಾಡದವರಿಗೆ ದಂಡ ಪ್ರಯೋಗ ಅನಿವಾರ್ಯ ಎಂದು ತಿಳಿಸಿದರು. ನಗರದ ನಾಗರಿಕರು ಬಿಬಿಎಂಪಿಯೊಂದಿಗೆ ಸಹಕರಿಸಬೇಕಿದೆ ಎಂದು ಕೋರಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
