ಐಷಾರಾಮಿ ಜೀವನ ನಡೆಸುವ ಅರಬ್ ದೇಶಗಳ ರಾಜಮನೆತವದವರ ಬಗ್ಗೆ ಸಾಕಷ್ಟು ಕತೆಗಳನ್ನು ಕೇಳಿದ್ದೀರಿ. ಆದರೆ ಇಲ್ಲೊಬ್ಬ ದುಬೈ ರಾಜಕುಮಾರ, ತಾನು ಸಾಕಿದ ಹದ್ದುಗಳನ್ನು ಸಾಗಿಸಲು ವಿಮಾನದ ಎಲ್ಲಾ ಟಿಕೆಟ್‍ಗಳನ್ನು ಖರೀದಿಸಿ ಸುದ್ದಿ ಮಾಡಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುವುದು ಎಷ್ಟೋ ಜನರ ಜೀವಮಾನದ ಕನಸು. ಆದರೆ ಈ ಹದ್ದುಗಳು ಮನುಷ್ಯರು ಕುಳಿತುಕೊಳ್ಳುವ ಆಸನಗಳಲ್ಲಿ ವಿರಾಜಮವಾಗಿ ಹಾರಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೊಡ್ಡ ಸುದ್ದಿ ಮಾಡುತ್ತಿದೆ.
ರೆಡಿಟ್ ಎಂಬಾತ ತನ್ನ ಫೇಸ್‍ಬುಕ್‍ನಲ್ಲಿ ತಾನು ಸಾಕಿದ ಸುಮಾರು 80 ಹದ್ದುಗಳು ವಿಮಾನದಲ್ಲಿ ಪ್ರಯಾಣಿಸಿದ ಫೋಟೋಗಳನ್ನು ಹಾಕಿದ್ದಾರೆ. ಫೋಟೋ ಕೆಳಗೆ ನನ್ನ ಗೆಳೆಯ ನಾಯಕ ಈ ಫೋಟೋ ಕಳುಹಿಸಿದ್ದಾನೆ. ಸೌದಿ ರಾಜಕುಮಾರ 80 ಹದ್ದುಗಳಿಗಾಗಿ ಇಡೀ ವಿಮಾನದ ಟಿಕೆಟ್ ಖರೀದಿಸಿದ್ದಾನೆ ಎಂದು ಬರೆದುಕೊಂಡಿದ್ದಾನೆ.
ಹದ್ದುಗಳಿಗೆ ಗ್ರೀನ್ ಕಾರ್ಡ್
ವಿಮಾನದಲ್ಲಿ ಪ್ರಯಾಣಿಸಲು ಹದ್ದುಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಫಾರೆಸ್ಟ್ ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಅಲ್ಲದೇ ಬಹರೇನ್, ಕುವೈತ್, ಓಮನ್, ಕತಾರ್, ಸೌಧಿ ಅರೆಬಿಯಾ, ಪಾಕಿಸ್ತಾನ, ಮೊರಾಕ್ಕೊ ಮತ್ತು ಸಿರಿಯಾಗಳಿಗೆ ಪ್ರವೇಶ ಪಡೆಯಲು ಪಾಸ್‍ಪೋರ್ಟ್ ನೀಡಲಾಗುತ್ತಿದೆ.
ಕತಾರ್ ಏರ್ ಲೈನ್ಸ್ ತನ್ನ ಪ್ರಕಟಣೆಯಲ್ಲಿ ಶ್ರೀಮಂತರು ಪ್ರಯಾಣಿಸುವ ಎಕನಾಮಿಕ್ ಕ್ಲಾಸ್‍ನಲ್ಲಿ 6 ಹದ್ದುಗಳಿಗೆ ಅವಕಾಶ ನೀಡುವುದಾಗಿ ಹೇಳಿಕೊಂಡಿದೆ.
ದುಬೈ ವಿಮಾನ ಸಂಸ್ಥೆಯ ವಕ್ತಾರ ಕೂಡ ಈ ವಿಷಯ ಸ್ಪಷ್ಟಪಡಿಸಿದ್ದು, ವಿಮಾನದಲ್ಲಿ ಪ್ರಯಾಣಿಸಲು ಹದ್ದುಗಳಿಗೆ ಅನುಮತಿ ಇದೆ. ಪ್ರಯಾಣದ ವೇಳೆ ಹದ್ದುಗಳಿಗೆ ವಿಶೇಷ ವಸ್ತ್ರವನ್ನೂ ನೀಡಲಾಗುತ್ತದೆ. ಇದರಿಂದ ಯಾವುದೇ ಅಪಾಯ ಸಂಭವಿಸಬಾರದು ಎಂಬು ಉದ್ದೇಶವಾಗಿದೆ ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
