ನವದೆಹಲಿ: ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ಹೆಚ್ಚುವರಿ 10 ಲಕ್ಷ ಪಿಒಎಸ್ ಯಂತ್ರಗಳನ್ನು ಒದಗಿಸಲಾಗುವುದು ಎಂದು ಅವರು ಬಜೆಟ್ನಲ್ಲಿ ಜೇಟ್ಲಿ ಘೋಷಿಸಿದ್ದಾರೆ.
ನಗದು ರಹಿತ ವಹಿವಾಟು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಬಜೆಟ್ನಲ್ಲಿ ಪಿಒಎಸ್ ಮಷಿನ್ ಮೇಲಿನ ಎಲ್ಲ ಮಾದರಿ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ.
ಸದ್ಯಕ್ಕೆ ಆನ್ಲೈನ್ ವಹಿವಾಟು ನಡೆಸುವ ಮಷಿನ್ಗಳಿಗೆ ವಿಧಿಸಲಾಗುತ್ತಿರುವ ಮೂಲ ಸುಂಕ ಶುಲ್ಕ (ಬಿಸಿಡಿ), ಆಡಳಿತಾತ್ಮಕ ಶುಲ್ಕ(ಸಿವಿಡಿ), ವಿಶೇಷ ವಹಿವಾಟು ಶುಲ್ಕ(ಎಸ್‌ಎಡಿ) ಗಳನ್ನು ಪಿಒಎಸ್, ಫಿಂಗರ್ಪ್ರಿಂಟ್ ಸ್ಕ್ಯಾನರ್ ಮಷಿನ್ಗಳ ಮೂಲಕ ವಹಿವಾಟು ನಡೆಸುವ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಇವುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಸದ್ಯ ಇರುವ ಪಿಒಎಸ್ ಮಷಿನ್ಗಳನ್ನು ಮೇಲ್ದರ್ಜೆಗೆ ಏರಿಸಿ ತೆರಿಗೆ ಮುಕ್ತ ವಹಿವಾಟಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಈ ಮಷಿನ್ಗಳ ಕೆಲಭಾಗಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲು ವೇದಿಕೆ ನಿರ್ಮಿಸಲಾಗುವುದು ಎಂದು ಜೇಟ್ಲಿ ಹೇಳಿದರು.
ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ಹೆಚ್ಚುವರಿ 10 ಲಕ್ಷ ಪಿಒಎಸ್ ಯಂತ್ರಗಳನ್ನು ಒದಗಿಸಲಾಗುವುದು ಎಂದು ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ. ಅದರ ಜತೆಗೆ ಯಂತ್ರದ ಬಿಡಿಭಾಗಗಳನ್ನು ಭಾರತದಲ್ಲೇ ನಿರ್ಮಾಣಕ್ಕೆ ನಿರ್ಧರಿಸಿರುವುದು ಪಿಒಎಸ್ ಯಂತ್ರಗಳ ಬೇಡಿಕೆ ಶೀಘ್ರ ಪೂರೈಕೆಗೆ ಸಹಾಯವಾಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
