fbpx
ದೇವರು

ರಥಸಪ್ತಮಿಯಂದು ಹೀಗೆ ಪೂಜೆ ಮಾಡಿದರೆ ನಿಮ್ಮ ಕಷ್ಟವೆಲ್ಲ ದೂರವಾಗುತ್ತದೆ!!!

ಅನಾದಿ ಕಾಲದಿಂದಲೂ ಸೂರ್ಯನನ್ನು ದೇವರೆಂದು ಪೂಜಿಸುತ್ತ ಬಂದಿರುವ ಸಂಸ್ಕೃತಿ ನಮ್ಮದು. ಮಾಘ ಮಾಸದ  ಶುದ್ಧ ಸಪ್ತಮಿಯಂದು ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ರಥ ಸಪ್ತಮಿಯಾಗಿ ಆಚರಿಸಲಾಗುತ್ತದೆ. ಈ ದಿನ ಮಹರ್ಷಿ ಕಶ್ಯಪ ಹಾಗು ಅದಿತಿಯು ಸೂರ್ಯನಿಗೆ ಜನ್ಮ ನೀಡಿದರೆಂದು ನಂಬಲಾಗಿ ಸೂರ್ಯಜಯಂತಿ ಎಂದು ಸಹ ವ್ಯಾಖ್ಯಾನಿಸಲಾಗಿದೆ. ರೈತರು ಬೇಸಿಗೆಯ ಬೆಳೆಯನ್ನು ಉತ್ತುವ ಮೊದಲು ಸೂರ್ಯನಿಗೆ ಪೂಜಿಸಿ ಬೆಳೆಯನ್ನು ರಕ್ಷಿಸಲು ಬೇಡುವ ಈ ದಿನವು ಜಾನಪದ ಸೊಗಡನ್ನು ಸಹ ಹೊಂದಿದೆ. ಸೂರ್ಯನ ಸಾರಥಿಯಾದ ಅರುಣನು ಏಳು ಅಶ್ವಗಳುಳ್ಳ ರಥವನ್ನು ಉತ್ತರ ಪಥಕ್ಕೆ ತಿರುಗಿಸಿ ಅದರ ವೇಗವನ್ನು ಹೆಚ್ಚಿಸಿ ಬೇಸಿಗೆ ಕಾಲಕ್ಕೆ ನಾಂದಿ ಹಾಡುತ್ತಾನೆಂಬ ಪ್ರತೀತಿಯೂ ಸಹ ಇದೆ.

surya_jayanti

ಸೂರ್ಯಾರಾಧನೆಯ ವಿಧಾನ:

     ಇಂದು ವಿಷ್ಣುವನ್ನು ಸೂರ್ಯನ ರೂಪದಲ್ಲಿ ಆರಾಧಿಸಲಾಗುತ್ತದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ಬಿಳಿ  ಎಕ್ಕದ ಎಲೆಗಳನ್ನು ದೇಹದ ಏಳು  ಭಾಗಗಳಲ್ಲಿ ಅಂದರೆ  ತಲೆ, ೨ ಭುಜ, ೨ ಮಂಡಿ ಹಾಗು ೨ ಪಾದಗಳ ಮೇಲಿರಿಸಿ ಸೂರ್ಯ ದೇವರನ್ನು ಪ್ರಾರ್ಥಿಸುತ್ತ ಸ್ನಾನವನ್ನು ಮಾಡಬೇಕು. ಸ್ನಾನ ಮಾಡಬೇಕಾದರೆ ಈ ಕೆಳಗಿನ ಸ್ತೋತ್ರವನ್ನು ಪಠಿಸಬೇಕು

                    ಸಪ್ತ ಸಪ್ತ ಮಹಾ ಸಪ್ತ

                    ಸಪ್ತ ದ್ವೀಪ ವಸುಂಧರಾ|

                    ಸಪ್ತಾರ್ಕ ಪರ್ಣ ಮಾದಾಯ

                    ಸಪ್ತಾಮ್ಯಹಮ್ ಸ್ನಾನ ಮಾಚರೇತ್ ||

ಸ್ನಾನಾನಂತರ ಪೂರ್ವ ದಿಕ್ಕಿಗೆ ಮುಖ ಮಾಡಿ ಉದಿಸುವ ಸೂರ್ಯನಿಗೆ ಅರ್ಘ್ಯವನ್ನು(ಕಲಶದಿಂದ ನೀರನ್ನು ಬಿಡುವುದು) ಕೊಡಬೇಕು.ದೇವರನ್ನು ಮಂತ್ರ ಪುಷ್ಪಗಳಿಂದ ಪೂಜಿಸಿ ಮುಖ್ಯವಾಗಿ ಆದಿತ್ಯ ಹೃದಯಂ , ಗಾಯತ್ರಿ ಮಂತ್ರ, ಸೂರ್ಯ ಅಷ್ಟಕಂ , ಸೂರ್ಯ ಸಹಸ್ರನಾಮಗಳನ್ನು ಪಠಿಸಬೇಕು. ಗೋಧಿ,ಅಕ್ಕಿ ಅಥವಾ ಅವಲಕ್ಕಿಯಿಂದ ತಯ್ಯಾರಿಸಿದ ಭಕ್ಷ್ಯ/ ಪಾಯಸವನ್ನು ನೈವೇದ್ಯ ಮಾಡಿ ಪ್ರಸಾದವನ್ನು ಸ್ವೀಕರಿಸಬೇಕು. ಹೀಗೆ ಮಾಡಿದ್ದಲ್ಲಿ ಆಯು ಆರೋಗ್ಯ ವೃದ್ಧಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top