ಒಂದು ಕಾಲಕ್ಕೆ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯದ ಹಿಂಭಾಗದ ಬೆಟ್ಟದಿಂದ ಹರಿಯುತ್ತಿದ್ದ ವೃಷಭಾವತಿ ನದಿ ಹಾಗೆಯೇ ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಹರಿದು ಅರ್ಕಾವತಿ ನದಿಯೊಡನೆ ಕೂಡಿ ಕಾವೇರಿಯಲ್ಲಿ ಸಂಗಮವಾಗುತ್ತಿದ್ದವು.
ಬಸವನಗುಡಿ
ಕೆಂಗೇರಿಯ ಪ್ರಸಿದ್ಧ ಶಿವನ ದೇವಾಲಯ ಹಾಗೂ ಮೈಸೂರು ರಸ್ತೆಯ ಬಾಪೂಜಿನಗರದ ಗಾಳಿ ಆಂಜನೇಯ ಸ್ವಾಮಿಗೆ ನಿತ್ಯ ಇದೇ ವೃಷಭಾವತಿ ನದಿ ನೀರಿನಿಂದ ಅಭಿಷೇಕ ಮಾಡಲಾಗುತ್ತಿತ್ತು.
ಗಾಳಿ ಆಂಜನೇಯ ಸ್ವಾಮಿ
ಕಾಲ ಕ್ರಮೇಣ 1970ರ ಹೊತ್ತಿಗೆ ನಗರೀಕರಣದ ಹೊಸ್ತಿಲಲಿದ್ದ ಬೆಂಗಳೂರು ನಗರಕ್ಕೆ ಕಾರ್ಖಾನೆಗಳು ಮೆಲ್ಲ ಬರಲು ಶುರು ಹೊಂದಿದವು ,ಇದರಲ್ಲಿ ಪ್ರಮುಖವಾಗಿ ಹತ್ತಿ ಕಾರ್ಖಾನೆಗಳು, ನೆಲಮಂಗಲದ ಕೈಗಾರಿಕಾ ಪ್ರದೇಶ ಅಭಿವೃದ್ಧಿಯ ಉತ್ತುಂಗದಲ್ಲಿದ್ದವು ಹಾಗೆಯೇ ಬೆಂಗಳೂರು ನೀರು ಹಾಗೂ ಒಳಚರಂಡಿ ಮಂಡಳಿ ಎಲ್ಲಾ ಚರಂಡಿಗಳನ್ನು ಒಂದು ನಾಲೆಯ ಮೂಲಕ ನದಿಗೆ ಸೇರಿಸುವ ವ್ಯವಸ್ಥೆಯನ್ನು ಸಹ ರೂಪಿಸಿದ್ದವು. ಇವೆಲ್ಲವೂ ಸೇರಿ ನದಿಗೆ ವಿಷ ಪ್ರಾಷಾನವನ್ನು ಮಾಡಿದವು.
ಹೀಗಿತ್ತು ವೃಷಭಾವತಿ ನದಿ 1965ರಲ್ಲಿ
1920ರ ಚರಂಡಿ ವ್ಯವಸ್ಥೆಯು ನದಿ ಮೂಲಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡದೇ ಕೇವಲ 215 ಕೀ. ಮೀ ಗಳ ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿತ್ತು .
ಕೆಂಪೇಗೌಡರ ನಗರ ವ್ಯವಸ್ಥೆ ಹೇಗಿತ್ತೆಂದರೆ ಒಂದು ಕೆರೆ ತುಂಬಿದರೆ ಇನ್ನೊಂದು ಕೆರೆಗೆ ನೀರು ಹರಿಯುತ್ತಿತ್ತು ಮತ್ತು ಯಾವುದೇ ಪ್ರವಾಹ ಸ್ಥಿತಿ ಬರದಂತೆ ರೂಪಿಸಲಾಗಿತ್ತು.
ಅಂದು ಸಾವಿರಾರು ಜನರ ನೀರಿನ ಮೂಲ, ಕೃಷಿಗೆ ಆಧಾರವಾಗಿದ್ದ ,ನೂರಾರು ತೆಂಗಿನ ಮರಗಳನ್ನ ತನ್ನ ತೆಕ್ಕೆಯಲ್ಲಿ ಹೊತ್ತು , ಸಾವಿರಾರು ಜಲಚರಗಳ ಜೀವನಾಡಿಯಾಗಿದ್ದ ನದಿ ಇಂದು ವಿಷಕಾರಿ ರಾಸಾಯನಿಕಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ತನ್ನ ಹರಿವ ಜಾಗದಲ್ಲಿ ಮಾರಕ ರೋಗಗಳನ್ನು ಉಂಟು ಮಾಡುತ್ತಿರುವುದು ಶೋಚನೀಯ.
ಹೀಗಾಗಿದೆ ವೃಷಭಾವತಿ ನದಿ
ಈಗಾಗಲೇ ನಗರದ ಜನಸಂಖ್ಯೆ 1.25 ಕೋಟಿಗೂ ಮೀರಿದೆ ಇರುವುದು ಒಂದೇ ನದಿ ಮೂಲ ಕಾವೇರಿ , ಕಾವೇರಿ ತಾಯಿ ಎಷ್ಟೇoದು ಜನರಿಗೆ ನೀರು ಕೊಡುವಳು? ಹೀಗಾಗಲೇ ಅಂತರ್ಜಲ ಮೂಲ ಬತ್ತು ಹೋಗಿದೆ , ಎಷ್ಟು ಟ್ಯಾಂಕರ್ ಮೊರೆ ಹೋದರು ಅಷ್ಟೇ ಅದು ಕೆಲವೇ ವರ್ಷಗಳು ನಂತರ ನೀರಿನ ಹಾಹಾಕಾರ ಮುಗಿಲೇರುವುದು.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರಿನ ಕೆರೆ, ತೊರೆಗಳು ಹಾಗೂ ತನ್ನ ಏಕೈಕ ನದಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದೇ ? ನೋಡೋಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
