ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡುವಾಗ’ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಲಿದಾನ ಮಾಡಿದ್ದಾರೆ ಬಿಜೆಪಿಯಿಂದ ಒಂದು ನಾಯಿಯು ಪ್ರಾಣ ಕೊಟ್ಟಿಲ್ಲ’ ಎಂದರು. ಖರ್ಗೆ ಮಾತಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿದಂತೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ಸಂದರ್ಭ ನೋಟು ಅಮಾನ್ಯೀಕರಣ ವಿಷಯ ಪ್ರಸ್ತಾಪಿಸಿದ ಖರ್ಗೆ ಕೇಂದ್ರದ ನಿರ್ಧಾರದಿಂದ ಬ್ಯಾಂಕ್ ಗಳ ಎದುರು ಸುಮಾರು 100 ಮಂದಿ ಜನಸಾಮಾನ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರ, ಬಿ.ಜೆ.ಪಿ.ಯನ್ನು ಟೀಕಿಸಿ ಮಾತನಾಡುತ್ತಿದ್ದ ಖರ್ಗೆ, ದೇಶಕ್ಕಾಗಿ ಗಾಂಧಿಗಳು ಮಡಿದು ಹೋಗಿದ್ದಾರೆ. ಇಂದಿರಾ ಗಾಂಧಿಯವರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಆದರೆ, ಬಿ.ಜೆ.ಪಿ. ನಾಯಕರ ಮನೆಯ ಒಂದೇ ಒಂದು ನಾಯಿಯೂ ದೇಶಕ್ಕಾಗಿ ಸತ್ತಿಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಖರ್ಗೆ ಹಾಗೂ ಅನಂತ್ ಕುಮಾರ್ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಸದನದಲ್ಲಿ ಆಗ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
