fbpx
ದೇವರು

ಮಹಾಮಾನವತಾವಾದಿ ಹಾಗು ಕನ್ನಡ ನಾಡಿನ ಹೆಮ್ಮೆ ಶ್ರೀ ಪುರಂದರದಾಸರು!!!

ಕರ್ನಾಟಕದ ದಾಸ ಪರಂಪರೆಯಲ್ಲಿ ಅಗ್ರಗಣ್ಯ ರಾದ ಪುರಂದರದಾಸರು ನಿಜವಾಗಿಯೂ ಮಾನವತಾವಾದಿ ಆಗಿದ್ದಾರೆ. ದಾಸರು ತಮ್ಮ ಒಂದು ಪದ್ಯದಲ್ಲಿ `ಮಾನವ ಜನ್ಮ ದೊಡ್ಡದು ಇದನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂಬ ದಿವ್ಯ ಸಂದೇಶವನ್ನು ಇಡೀ ಮಾನವ ಕುಲಕ್ಕೆ ನೀಡಿದ್ದಾರೆ. ದಾಸರು ಕೇವಲ ಬ್ರಾಹ್ಮಣರು ಶ್ರೇಷ್ಠರು, ಮಾಧ್ವರು ಶ್ರೇಷ್ಠರೆಂದು ಹೇಳದೇ ಮನುಷ್ಯ ಜನ್ಮವೇ ಅತ್ಯಂತ ಶ್ರೇಷ್ಠವೆಂದು ಎಲ್ಲ ಮಾನವರೂ ಅತ್ಯಂತ ಶ್ರೇಷ್ಠರೆಂದೂ ಈ ಮಾನವ ಜನು ಮವನ್ನು ಸಾರಕಗೊಳಿಸಬೇಕೆಂದು ಹೇಳಿ ದ್ದಾರೆ.

`ದಾಸರೆಂದರೆ ಪುರಂದರದಾಸ ರಯ್ಯಾ’ ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದಲೇ ಪ್ರಶಂಸಿಸಲ್ಪಟ್ಟ ಶ್ರೀ ಪುರಂದರದಾಸರು ನಿಜವಾಗಿಯೂ ದಾಸ ಶ್ರೇಷ್ಠರು ದಾಸ ಪರಂಪರೆಗೆ ಆದರ್ಶರು.ಇವರ ಚರಿತ್ರೆ ತಿಳಿಯದವರೇ ಯಾರೂ ಇಲ್ಲ. 15-16ನೇ ಶತಮಾನಗಳಲ್ಲಿ ಜೀವಿ ಸಿದ್ದ ಪುರಂದರದಾಸರ ಜೀವನ ಚರಿತ್ರೆ ಅತ್ಯಂತ ವಿಚಿತ್ರವಾಗಿದೆ. ದಾಸರು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರು. ಇವರು ಅತ್ಯಂತ ಪ್ರಸಿದ್ಧ ಚಿನಿವಾಲರು (ಸರಾ ಫರು) ಕೃಷ್ಣದೇವರಾಯನ ಆಸ್ಥಾನದಲ್ಲಿ ಮತ್ತು ರತ್ನಗಳ ಪರೀಕ್ಷೆಗೆ ಚಿನಿವಾರ ಶೀನಪ್ಪ (ದಾಸರ ಪೂರ್ವಾಶ್ರಮದ ಹೆಸರು) ಆಹ್ವಾನಿಸುತ್ತಾನೆಂದರೆ ದಾಸರ ಚಿನಿವಾರಿಕೆ ಯಲ್ಲಿ ನೈಪುಣ್ಯತೆ ಹೇಳಲಸಾಧ್ಯ ದಾಸರು ಜಿಪುಣಾಗ್ರೇಸರರಾಗಿದ್ದರು.

Image result for purandaradasa

ಪೂರ್ವಾಶ್ರಮದಲ್ಲಿ ಅತ್ಯಂತ ಲೌಕಿಕರಾಗಿ ದಾನ, ಧರ್ಮಗಳಿಂದ ಅತ್ಯಂತ ದೂರವಾಗಿದ್ದರು. ಪೂರ್ವಜನ್ಮದ ಸುಕೃತದಿಂದ ಸ್ವತಃ ಪರಮಾತ್ಮನೇ ವಿಪ್ರವೇಷ ದಿಂದ ಬಂದು ಶೀನಪ್ಪನಾಯಕರನ್ನು ವೈರಾಗ್ಯಮಾರ್ಗ ತೋರಿಸಿದ ನವಕೋಟಿ ನಾರಾಯಣರಾಗಿದ್ದ ಶೀನಪ್ಪ ನಾಯಕ ಒಂದೇ ದಿನದಲ್ಲಿ ತಮ್ಮ ಸಂಪತ್ತು ದಾನಮಾಡಿ ಹರಿ ದಾಸನಾದ. ಕೇವಲ ಒಂದು ತಂಬೂರಿ ಹಿಡಿದು ಸಾಧನಾ ಮಾರ್ಗದಲ್ಲಿ ಪ್ರವೃತ್ತರಾದರು. ಕೋಟ್ಯಾಧೀಶನಾಗಿದ್ದವನು ಎಲ್ಲವನ್ನು ದಾನ ಮಾಡಿ ದಾಸವೃತ್ತಿ ಸ್ವೀಕರಿಸಿದರೆಂದರೆ ದಾಸರ ಮಹಿಮೆ ಅವರ ಅಂತಃಸತ್ವದ ಅರಿವಾಗುವದು.ಹರಿದಾಸರಾಗಿ ಎಲ್ಲೆಡೆಗೆ ಸಂಚರಿಸುತ್ತಾ ಪುರಂದರದಾಸರು ಸಾವಿರಾರು ದೇವರ ಪದ ರಚಿಸುತ್ತಾ ಸಾಗಿದರು. ಒಂದು ತಮ್ಮ ಪದ್ಯದಲ್ಲಿ ತಾವು ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ದೇವರ ನಾಮ ರಚಿಸಿದ್ದಾಗಿ ತಾವೇ ತಿಳಿಸಿದ್ದಾರೆ. ನಮ್ಮ ದುರ್ದೈವದಿಂದ ಈಗ ಕೇವಲ ಸಾವಿರಾರು ಪದಗಳು ಮಾತ್ರ ಲಭ್ಯ ವಾಗಿವೆ. ಪುರಂದರದಾಸರ ಪದಗಳಲ್ಲಿ ಕಾವ್ಯಾಂಶ ಅತ್ಯಂತ ಶ್ರೇಷ್ಠವಾಗಿದೆ.

ಪದಗಳ ಆಯ್ಕೆಯ ಭಾಷೆ ಅತ್ಯಂತ ಸುಂದರ ಮತ್ತು ಸರಳವಾಗಿದೆ. ದಾಸರ ಪದಗಳಲ್ಲಿ ತತ್ವ ಜ್ಞಾನ ಹಾಗೂ ಆಡುಮಾತಿನ ವಿಶೇಷತೆ ಕಾಣಬಹುದು. ದಾಸರ ಇನ್ನೊಂದು ವೈಶಿಷ್ಟ್ಯವೆಂದರೆ ಸಂಗೀತಜ್ಞಾನ. ಸಂಗೀತದಲ್ಲಿ ಪುರಂದರದಾಸರು ಪ್ರಾವಿಣ್ಯತೆ ಪಡೆದಿದ್ದಾರೆ. ಕರ್ನಾಟಕ ಸಂಗೀತ (ದಕ್ಷಿಣಾದಿ)ದ ಪಿತಾಮಹ ರೆಂದೇ ಪುರಂದರದಾಸರು ಖ್ಯಾತರಾಗಿದ್ದಾರೆ. ದಾಸರು ಪದಗಳು ಆದಿಪ್ರಾಸ ಮತ್ತು ಅಂತ್ಯ ಪ್ರಾಸಗಳನ್ನು ಒಳಗೊಂಡಿವೆ. ದಾಸರು ಕನ್ನಡ ಭಾಷೆಯನ್ನು ತಮ್ಮ ಸುಲಭ ಪದಗಳಿಂದ ಅತ್ಯಂತ ಧೀಮಂತ, ಶ್ರೀಮಂತಗೊಳಿಸಿದ್ದಾರೆ.ದಾಸರ ಕೆಲ ಶ್ರೇಷ್ಠ ಜನಪ್ರೀಯ ಪದಗಳನ್ನು ಅವಲೋಕಿಸೋಣ. ದಾಸರ ಮೊದಲನೇ ಪದ `ಆದದ್ದೆಲ್ಲ ಒಳಿತೇ ಆಯಿತು, ನಮ್ಮ ಶ್ರೀಧರನ ಸೇವೆಗೆ ಸಂಪತ್ತಾಯಿತು. ಹೆಂಡತಿ ಸಂತತಿ ಸಾವಿರವಾಗಲಿ, ಗೋಪಾಳ ಬುಟ್ಟಿ ಹಿಡಿಸಿದಳಯ್ಯ. ಈ ಪದ ದಲ್ಲಿ ದಾಸರು ತಮ್ಮ ವೈರಾಗ್ಯಮಾರ್ಗಕ್ಕೆ ದಾಸತ್ವ ಸ್ವೀಕರಿಸಲು ಹೆಂಡತಿಯೇ ಕಾರಣ ಎಂದು ಹೇಳಿದ್ದಾರೆ. ದಾಸರು ಜೀವನದಲ್ಲಿ ಪಲಾ ಯನವಾದವನ್ನು ಎಂದಿಗೂ ಹೇಳಿಲ್ಲ. ಈಸಬೇಕು ಇದ್ದು ಜಯಿಸಬೇಕು ಎಂಬ ಪದದಲ್ಲಿ ಈ ಸಂಸಾರದಲ್ಲಿ ಇದ್ದುಕೊಂಡೇ ಎಲ್ಲ ಕಷ್ಟ-ನಷ್ಟ ಅನುಭವಿಸಿ ಪಾರಾಗಬೇಕು ಎಂದಿದ್ದಾರೆ. ಇರಬೇಕು, ಇಲ್ಲದಿರಬೇಕು ಸಂಸಾರದೊಳಗೆ ಎಂಬ ಪದದಲ್ಲಿ ಸಂಸಾ-ರಿಗಳಾಗಿದ್ದರೂ ಅದರಲ್ಲಿ ಅಂಟಿ-ಕೊಳ್ಳದೆ ನಿರ್ಲಿಪ್ತರಾಗಿರಬೇಕೆಂದು ಬೋಧಿಸಿದ್ದಾರೆ.

Image result for purandaradasa

`ಕುರುಡು ನಾಯಿ ತಾ ಸಂತೆಗೆ ಬಂತಂತೆ ಅದು ಯಾಕೆ ಬಂತೋ’ ಎಂಬ ಪದದಲ್ಲಿ ಜೀವಿಗಳು ಸಂಸಾರದಲ್ಲಿ ಬಿದ್ದು ಈ ಜನ್ಮದ ಉದ್ದೇಶವನ್ನೇ ಮರೆತಿದ್ದಾನೆ ಎಂದು ಹೇಳಿ ಕುರುಡು ನಾಯಿಯ ಉಪಮೆ ನೀಡಿದ್ದಾರೆ. ದುಷ್ಟ ಜನರ ಸ್ವಭಾವವನ್ನು ಅವರು ಯಾವ ಕಾಲಕ್ಕೂ ತಮ್ಮ ದುಷ್ಟ ಕಪಟತನ ಬಿಡು ವುದಿಲ್ಲವೆಂದು, ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದರೇನು ಫಲ ಎಂಬ ಸುಂದರ ಪದದಲ್ಲಿ ಹೇಳಿದ್ದಾರೆ. `ಜಾಲಿಯ ಮರದಂತೆ ದುರ್ಜನರು’ ಎಂಬ ಪದದಲ್ಲಿ ದುಷ್ಟಜನರನ್ನು ಚೆನ್ನಾಗಿ ಖಂಡಿಸಿದ್ದಾರೆ.

ಮಡಿ ಮಡಿ ಎಂದು ಮಾರು ಹಾರುತಿ ಮಡಿ ಎಲ್ಲಿಂದ ಮಹಾಮಾನವತಾವಾದಿ ಶ್ರೀ ಪುರಂದರದಾಸರುಜಗದಲ್ಲಿ ಯಾವುದೂ ವ್ಯರ್ಥವಾಗಿಲ್ಲ, ಪ್ರತಿಯೊಂದು ವಸ್ತುಬದಲಾಗುತ್ತಲೇ ಹೋಗುತ್ತದೆ, ಅದಕ್ಕೆ ಅದರದೆ ಅಸ್ತಿತ್ವವಿದೆತಿಪ್ಪೆಯಲ್ಲಿ ಹೊಲಸಿದೆ, ಸರಿ, ಹೊಲಸೆಲ್ಲವೂ ವ್ಯರ್ಥವಾಗಲಿಲ್ಲಗೊಬ್ಬರವಾಯಿತು, ಗಿಡಬಳ್ಳಿಗಳಿಗೆ ಉತ್ತಮ ಆಹಾರವಾಯಿತಲ್ಲಬೈಗಳನ್ನು ಉಂಡರೂ ಗಟ್ಟಿಯಾಗಿ ಬಾಳಲು ಕಲಿಯಬೇಕುಮೋಸ ವಂಚನೆಗಳಿಗೆ ಮ್ಲಾನವಾಗದೆ ಅರಳಲು ಕಲಿಯಬೇಕುಸೋಲುಗಳನೆಲ್ಲ ಸೋಪಾನ ಮಾಡಿ ಮುನ್ನಡೆದು ಗೆಲ್ಲಬೇಕು ಉಪ್ಪುನೀರಿನ ಸಮುದ್ರದಲ್ಲೇ ನಮ್ಮ ನೌಕೆಯನ್ನು ತೇಲಿಸಬೇಕುಬೈದವನ ಉಪಕಾರ ಸ್ಮರಿಸಬೇಕು, ಅವನ ಗುಣಗಾನ ಮಾಡಬೇಕುಕಳ್ಳರನು ನಿಂದಿಸದೆ ಹೋದ ಜನ್ಮದ ಆದಾಯಕರ ಸಂದಿತೆನ್ನಬೇಕುದುರ್ಜನರನ್ನು ಮೊದಲು ವಂದಿಸಲು ಕಲಿಯಬೇಕು, ಸಜ್ಜನರನ್ನುನಂತರ ವಂದಿಸಬಹುದು, ಅವರೆಂದಿಗೂ ತಪ್ಪು ಹುಡುಕುವುದಿಲ್ಲನೆಲದ ಮೇಲೆ ಕುದುರೆಯಾಗುತ್ತ, ನೀರಿನಲ್ಲಿ ಮೀನವಾಗುತ್ತ ಆಕಾಶದಲ್ಲಿ ಹಕ್ಕಿಯಾಗುತ್ತ ಸಂಚರಿಸಲು ನಾವು ಕಲಿಯಬೇಕು. `ಬಡ ನೂರು ವರುಷಗಳ’ ಹರುಷದಿ ಕಳೆಯಲು ಕಲಿಯಬೇಕುಹರಿ-ವಾಯು-ಗುರುಗಳನ್ನು ಸದಾ ಸ್ಮರಿಸುತ ಕಾಲಕಳೆಯಬೇಕು. ಯಾವುದೂ ವ್ಯರ್ಥವಾಗಿಲ್ಲ. ರೊಕ್ಕ ಎರಡಕ್ಕು ದುಃಖ ಕಾಣಕ್ಕ ಎಂಬ ಪದದಲ್ಲಿ ಹಣದ ಮಹತ್ವ ವರ್ಣಿಸಿ ಕೇವಲ ಹಣದಿಂದ ಸುಖ ಪಡೆಯಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

Image result for purandara vittala

`ಅನುಗಾಲವೂ ಚಿಂತೆ ಈ ಜೀವಕ್ಕೆ’ ಎಂಬ ಪದದಲ್ಲಿ ದಾಸರು ಮಾನವರಿಗೆ ಕೇವಲ ಐಶ್ವರ್ಯ, ಸಂಪತ್ತುಗಳಿಂದ ಸುಖ ಬರುವುದಿಲ್ಲ. ಯಾವಾಗಲೂ ಒಂದೊಲ್ಲೊಂದು ಚಿಂತೆ ಅವನಿಗೆ ಬಾಧಿಸುವುದು ಶ್ರೀರಂಗನಲ್ಲಿ ಭಕ್ತಿ ಹುಟ್ಟಿದರೆ ಮಾತ್ರ ಅವನು ನಿಶ್ಚಿಂತನೆಂದು ಹೇಳಿದ್ದಾರೆ. ಹೀಗೆ ಪುರಂದರದಾಸರು ತಮ್ಮ ಎಲ್ಲ ಸಂಪತ್ತನ್ನು ದಾನಮಾಡಿ ದಾಸವೃತ್ತಿ ಸ್ವೀಕರಿಸಿ ಸಾವಿರಾರು ಸುಂದರ ದೇವರ ಪದಗಳನ್ನು ರಚಿಸಿದ್ದಾರೆ. ಸಮಾಜದ ಓರೆಕೋರೆಗಳನ್ನು ತಿದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top