ಗುರುವಾರ ಭಾರತ-ಬಾಂಗ್ಲಾ ನಡುವಣ ಏಕೈಕ ಟೆಸ್ಟ್ ಪಂದ್ಯ ಹೈದರಾಬಾದ್ ನಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ಸ್ಪಿನ್ ಮಾಂತ್ರಿಂಕ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಮೇಲೆ ನಿತ್ತಿದೆ. ಈ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಕಲೆ ಹಾಕಿ ಮೊದಲ ಬಾರಿಗೆ ಜಡ್ಡು ಅಗ್ರ ಸ್ಥಾನಕ್ಕೇ ಏರುವ ಕನಸು ಕಾಣುತ್ತಿದ್ದರೆ, ಅಶ್ವಿನ್ ಇನ್ನೇರಡು ವಿಕೆಟ್ ಪಡೆದು ಅತಿ ವೇಗವಾಗಿ 250 ವಿಕೆಟ್ ಪಡೆಯುವ ಸಾಧನೆಯ ಆಶಯ ಹೊಂದಿದ್ದಾರೆ.
ಅಶ್ವಿನ ಭಾರತದ ಕ್ರಿಕೇಟ್ ಆಟಗಾರರಲ್ಲಿ ಬೇಸ್ಟ್ ಪ್ರದರ್ಶನ ನೀಡುವ ಆಟಗಾರರಾಗಿದ್ದಾರೆ. ಇವರ ಹೆಸರಲ್ಲಿ ಹಲವು ಪ್ರಥಮಗಳು ಕೂಡಿಕೊಂಡಿವೆ. ಅತಿವೇಗವಾಗಿ 200 ವಿಕೇಟ್ ಪಡೆದ ಭಾರತದದ ಮೊದಲ ಆಟಗಾರ ಅಶ್ವಿನ್ ಏಷ್ಯಾ ಖಂಡದಲ್ಲಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿ ಕಾಡಬಲ್ಲರು. ತಮ್ಮ ಕರಾರುವಕ್ ಕೇರಮ್, ಆಫ್ ಸ್ಪಿನ್ ಗಳಿಂದ ಬ್ಯಾಟ್ ಮನ್ ರ ನಿದ್ದೇ ಗೆಡಿಸುವ ಅಶ್ವಿನ್, ಹೈದರಾಬಾದ್ ನಲ್ಲಿ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.
ಅಶ್ವಿನ್ 887 ಅಂಕ ಮತ್ತು ಜಡೇಜಾ 879 ಅಂಕ ಪಡೆದು ಐಸಿಸಿ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ. ವಿಶ್ವದ ನಂ.1 ಸ್ಥಾನ ಯಾರ ಮುಕುಟ ಸೇರಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
