fbpx
ಕನ್ನಡ

ಕಾವೇರಿ ವಿವಾದಕ್ಕೆ ಬ್ರೀಟಿಷರೇ ಕಾರಣನಾ? 

ಬ್ರೀಟಿಷರ ಒಡೆದು ಆಳುವ ನೀತಿ ಇನ್ನೂ ಜೀವಂತವಾಗಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ವಿವಾದ ಸೃಷ್ಠಿಯಾದಾಗ ತಮಿಳಿರಿಗೆ ಬ್ರೀಟಿಷ ನೀತಿ ನೆನಪಾಗುತ್ತದೆ. ಅಸಲಿಗೆ ಸ್ವತಂತ್ರ್ಯ ಭಾರತದಲ್ಲಿ ಇನ್ನು ಏಕೆ ನಾವೆಲ್ಲಾ ಈ ನೀತಿಗಳನ್ನು ಪಾಲಿಸಬೇಕು.

Image result for cauvery river

Image Credits: TripAdvisor

ಹೌದು ಈ ಪ್ರಶ್ನೆ ಸಾಮಾನ್ಯ ಕನ್ನಡಿಗರ ಮನದಲ್ಲಿ ಎದ್ದಿರುವುದು ಸಹಜ. ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆಯೂ ಇದೇ ಪ್ರಶ್ನೆ ಎತ್ತಿದೆ. ಮೈಸೂರು-ಮದ್ರಾಸ್ ಪ್ರೆಸಿಡೆನ್ಸಿ ನಡುವಿನ ಒಪ್ಪಂದವನ್ನು ಪಾಲಿಸಲೇಬೇಕಾ ಎಂದು ಕೇಳಿದೆ. ಅಲ್ಲದೆ ವಿಚಾರಣೆ ಮಾರ್ಚ್ ೧೧ಕ್ಕೆ ಮುಂದೂಡಿದೆ.
ರಾಜ ಮನೆತನಗಳು ಹಾಗೂ ಬ್ರೀಟಿಷರು ಆಗಿನ ಕಾಲಮಿತಿಗೆ ತಕ್ಕ ಒಪ್ಪಂದವನ್ನು ಮಾಡಿದ್ದವು. ಆದರೆ ಈಗಲೂ ಆ ನಿಯಮಗಳು ಪ್ರಸ್ತುತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕರ್ನಾಟಕ ಪರ ವಾದವನ್ನು ಮಂಡಿಸುತ್ತಿರುವ ಹಿರೀಯ ವಕೀಲರು ಸಹ ಈ ವಾದವನ್ನೇ ಕೋರ್ಟ್ ಮುಂದೆ ಇಡುತ್ತಿದ್ದಾರೆ. ಕರ್ನಾಟಕ ಪರ ವಕೀಲರು ಈ ನಿಯಮ ಸರಿಯಾಗಿಲ್ಲ, ಇದರಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಾರೆ ಎಂಬ ವಾದಕ್ಕೆ, ಎದುರಾಳಿ ವಕೀಲರು ಸಾಂಬಾ ಬೆಳೆಗೆ ನೀರು ಕೇಳುತ್ತಾರೆ. ಕರ್ನಾಟಕಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಮರೀಚಿಕೆಯಾಗಿದೆ. ನಮ್ಮ ಮನೆಯಲ್ಲಿ ಕುಡಿಯಲು ನೀರೆ ಇಲ್ಲದಿರುವಾಗ, ನಾವು ಬೇರೆಯವರ ಮನೆಯ ಗಿಡಕ್ಕೆ ನೀರು ಹಾಕುವುದು ಎಷ್ಟು ಸೂಕ್ತ.
Related image

Supreme Court of India

ಕನ್ನಡನಾಡಿನಲ್ಲೇ ಹುಟ್ಟಿ ಕನ್ನಡಿಗರಿಗೆ ನೆರವಾಗುವ ಆಸೆ ತಾಯಿ ಕಾವೇರಿಗೂ ಇದೆ ಆದರೆ, ಅವಳ ಕೈಗಳನ್ನು ಕಟ್ಟಿಹಾಕಲಾಗಿದೆ. ಇನ್ನು ಮುಂದಾದರೂ ಸಕ್ಕರೆ ನಾಡು, ಪಶ್ವಿಮ ಘಟ್ಟದಲ್ಲಿ ಕಾವೇರಿ ಪರಿಮಳ ಪಸರಿಸಲಿ ಎಂಬುದೇ ನಮ್ಮೆಲ್ಲರ ಆಶಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top