ಮನುಷ್ಯರನ್ನು ಕಾಡುತ್ತಿರುವ ಸಿಒಪಿಡಿ
ಭಾರತದ ಮೂರು ಕೋಟಿ ಜನರಿಗೆ ಸಿಒಪಿಡಿ ರೋಗಗಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಆಂತಕಾರಿ ವರದಿಯೊಂದು ಬಂದಿದೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ರೋಗ ಅಥವಾ ಸಿಒಪಿಡಿ (ಕ್ರಾನಿಕ್ ಅಬ್‍ಸ್ಟ್ರಾಕ್ಟೀವ್ ಆಫ್ ಪಲ್ಮನರಿ ಡಿಸೀಸ್) ವಿಶ್ವದಾದ್ಯಂತದ 5ನೇ ಅತ್ಯಂತ ಭಯಂಕರ ರೋಗವಾಗಿದೆ. ಸಿಒಪಿಡಿಯನ್ನು ಯಾವಾಗಲೂ ಧೂಮಪಾನಿಗಳ ರೋಗ ಎಂದು ತಿಳಿಯಲಾಗುತ್ತಿತ್ತು. ಆದರೆ ಈಗ ಧೂಮಪಾನಿಗಳಲ್ಲದವರಿಗೂ ಸಿಒಪಿಡಿ ರೋಗಗಕ್ಕೆ ಬಲಿಯಾಗುತ್ತಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದ್ದು, ಅಭಿವೃದ್ಧಿಶೀಲ ದೇಶಗಳಲ್ಲಿ ಈ ರೋಗಿಗಳ ಪ್ರಮಾಣ ಹೆಚ್ಚಾಗಿದೆ.

Credits:Medindia.net
ಸಿಒಪಿಡಿಗೂ ಧೂಮಪಾನಕ್ಕೂ ಪರಸ್ಪರ ಸಂಬಂಧವಿದೆ ಎಂಬುದು ಸಿದ್ಧಗೊಂಡಿರುವ ಸಂಗತಿಯಾದರೂ, ಧೂಮಪಾನ ಮಾಡದವರಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದೆ. ಜಗತ್ತಿನ ಸರಿಸುಮಾರು ಅರ್ಧದಷ್ಟು ಜನರು ಅಡುಗೆಗೆ ಬಳಸುವ ಜೈವಿಕದ್ರವ ಇಂಧನದ (ಬಯೊಮಾಸ್) ಹೊಗೆಯಿಂದ ಸಿಒಪಿಡಿ ಹೆಚ್ಚಾಗುತ್ತಿದ್ದು. ಗ್ರಾಮೀಣ ಪ್ರದೇಶಗ¼ಳ ಜನರು ಸಿಒಪಿಡಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಸಿಒಪಿಡಿ ರೋಗ ಕಂಡು ಬರುತ್ತಿದೆ.
ಜೈವಿಕದ್ರವ ಇಂಧನವೇ ಕಾರಣ ಸಿಒಪಿಡಿಗೆ ಬಲಿಯಾಗಿರುವ ಶೇ.30ರಷ್ಟು ರೋಗಿಗಳು ಎಂದೂ ಧೂಮಪಾನ ಮಾಡಿದವರೇ ಅಲ್ಲ ಎಂಬುದರ ಬಗ್ಗೆ ಬರ್ಡನ್ ಆಫ್ ಲಂಗ್ ಅಬ್‍ಸ್ಟ್ರಾಕ್ಟೀವ್ ಡಿಸೀಸ್(ಬಿಒಎಲ್‍ಡಿ) ಎಂಬ ಸಂಸ್ಥೆ ವರದಿಯಲ್ಲಿ ಬಹಿರಂಗ ಪಡಿಸಿದೆ. ಭಾರತದ ನಗರ ಪ್ರದೇಶಗಳಲ್ಲಿ ಶೇ. 32 ಕುಟುಂಬಗಳು ಈಗಲೂ ಜೈವಿಕದ್ರವ್ಯದ ಸ್ಟೊವ್‍ಗಳನ್ನು ಬಳಸುತ್ತಿದ್ದಾರೆ. ಶೇ.22 ಅವರು ಅಡುಗೆಗೆ ಕಟ್ಟಿಗೆಯನ್ನು ಬಳಸುತ್ತಿದ್ದಾರೆ.
Credits: BUPA
ಶೇ.8 ಅವರು ಎಣ್ಣೆ (ಕೆರೋಸಿನ್) ಬಳಸುತ್ತಿದ್ದು, ಉಳಿದವರು ಲಿಕ್ವಿಡ್ ಪೆಟ್ರೋಲಿಯಮ್ ಗ್ಯಾಸ್ ಅಥವಾ ನೈಸರ್ಗಿಕ ಇಂಧನ ನಂತಹ ಇಂಧನಗಳನ್ನು ಬಳಸುತ್ತಿದ್ದಾರೆ. ಅಭಿವೃದ್ಧಿಶೀಲ ದೇಶಗಳಲ್ಲಿ ಶೇ. 50ನಷ್ಟು ಸಿಒಪಿಡಿ ಸಂಬಂಧದÀ ಸಾವುಗಳಿಗೆ ಜೈವಿಕದ್ರವದ ಹೊಗೆ ಕಾರಣವೆನ್ನಬಹುದು. ಇದರಲ್ಲಿ ಸುಮಾರು ಶೇ. 75 ಅವರು ಮಹಿಳೆರಾಗಿದ್ದಾರೆ. ಕಟ್ಟಿಗೆ, ಬೆರಣಿ, ಒಣಹುಲ್ಲಿನಂತಹ ಜೈವಿಕದ್ರವ ಇಂಧನಗಳು ಸಕ್ರಿಯ ಧೂಮಪಾನದಷ್ಟೇ ದೊಡ್ಡ ಅಪಾಯಕಾರಿ ಅಂಶಗಳು. ಚೀನಾ, ಭಾರತ ಮತ್ತು ಆಫ್ರಿಕಾದ ಶೇ. 80ಗೂ ಹೆಚ್ಚು ಕುಟುಂಬಗಳು ಅಡಿಗೆಗೆ ಜೈವಿಕದ್ರವ ಇಂಧನವನ್ನು ಬಳಸುತ್ತಿದ್ದಾರೆ. ವರದಿಯ ಪ್ರಕಾರ, ಮಹಿಳೆಯರಲ್ಲಿ ಸಿಒಪಿಡಿ ಪ್ರಸಂಗಗಳು ಮೂರು ಪಟ್ಟು ಹೆಚ್ಚಿರುವುದು ಕಂಡುಬಂದಿದೆ. ಇದಕ್ಕೆ ಕಾರಣವೆಂದರೆ ಹೆಂಗಸರು ಮತ್ತು ಎಳೆಯ ಹುಡುಗಿಯರು ಅಡಿಗೆ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿರುವುದರಿಂದಲೇ ಅವರಲ್ಲಿನ ಕಾಯಿಲೆ ಹೆಚ್ಚಳಕ್ಕೆ ಕಾರಣವಾಗಿದೆ.

Credits: HealthDirect
ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಉದ್ಯೋಗಗಳು, ಯಂತ್ರ ನಿರ್ವಾಹಣಕಾರ, ದಾಸ್ತಾನು ಮತ್ತು ಮಾನ್‍ನಲ್ಲಿ ಕೆಲಸ ಮಾಡುವವರಲ್ಲಿ ಶೇ. 19.2ರಷ್ಟಿದ್ದು, ಧೂಮಪಾನ ಮಾಡದವರಲ್ಲಿ ಶೇ. 31.1ರಷ್ಟಿದ್ದಾರೆ. ನಮ್ಮ ಮನೆಗಳಲ್ಲಿ ರಾತ್ರವೇಳೆ ಬಳಸುವ ಮಸ್‍ಕಿಟೋ ಕಾಯಿಲ್ ಹೊಗೆ ಸೇವನೆಯಿಂದಲೂ ಸಿಒಪಿಡಿ ಕಾಯಿಲೆಗೆ ಕಾರಣವಾಗಿದೆ. ನೂರು ಸಿಗರೇಟುಗಳಿಂದ ಬರುವಷ್ಟು ಹೊಗೆ (ಪಿಎಮ್ 2.5) ಹೊರಹೊಮ್ಮುತ್ತದೆ. ಅದರಿಂದ 50 ಸಿಗರೇಟುಗಳಿಂದ ಬರುವಷ್ಟು ಫಾರ್ಮಾಲ್ಡಿಹೈಡ್ ಹೊರಹೊಮ್ಮುತ್ತದೆ ಎಂಬ ಸಂಗತಿ ವರದಿಯಿಂದ ತಿಳಿದು ಬಂದಿದೆ.

Image Credits: BodyWorx Healthcare
ನಾವು ಧೂಮಪಾನ ಮಾಡದವರಾಗಿರಬಹುದು, ಆದರೆ ನಮ್ಮ ಆರೋಗ್ಯವನ್ನು ಹಾಳುಮಾಡುವ ವಸ್ತುಗಳನ್ನು ಬಳಸುವ ಮೂಲಕ ನಮಗೆ ಗೊತ್ತಿಲ್ಲದೆಯೇ ಸಿಒಪಿಡಿಗೆ ಬಲಿಯಾಗಬೇಕಾಗುತ್ತದೆ. ಶೇ. 75ರಷ್ಟು ಜನ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಔಷಧಿ ನಿರಂತರ ಔಷಧಿ ತೆಗೆದುಕೊಳ್ಳುತ್ತಿದ್ದು, ಅಂಥವರಲ್ಲಿ ಸಿಒಪಿಡಿ ರೋಗ ಕಾಣಿಸಿಕೊಳ್ಳುತ್ತಿದೆ. ಜೈವಿಕದ್ರವ ಇಂಧನಗಳಲ್ಲದೆಯೆ, ನಗರ ಪ್ರದೇಶಗಳಲ್ಲಿ ಈಗಿನ ವಾಯು ಮಾಲಿನ್ಯದ ಸ್ಥಿತಿಯೂ ಸಿಒಪಿಡಿ ರೋಗಗಕ್ಕೆ ತುತ್ತಾಗುತ್ತಿದ್ದಾರೆ. ವಾಯು ಮಾಲಿನ್ಯದ ವಿಷಯಕ್ಕೆ ಬಂದಾಗ, ಜಗತ್ತಿನ 20 ವಾಯು ಮಾಲಿನ್ಯದ ನಗರಗಳಲ್ಲಿ 10 ನಗರಗಳು ಭಾರತದಲ್ಲಿದೆ. ಆದ್ದರಿಂದ ಉಸಿರಾಟದಲ್ಲಿ ತೊಂದರೆ, ಶ್ವಾಸಕೋಶದಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ಹತ್ತಿರ ವೈದ್ಯರನ್ನು ಕಾಣುವುದು ಉತ್ತಮ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
