fbpx
Breaking News

ಪನ್ನಿರ್ ಸೆಲ್ವಂ ಉಲ್ಟಾ ಹೊಡೆದಿದ್ದು ಯಾಕೆ? 

ಜಯಲಲಿತಾ ಸಾವಿನ ಬಳಿಕ ತಮಿಳುನಾಡು ರಾಜ್ಯವನ್ನು ಮುನ್ನಡೆಸುತ್ತಿರುವ ಪನ್ನೀರ್ ಸೆಲ್ವಂ, ಮಂಗಳವಾರ ಹೊಸ ಬಾಂಬ ಹಾಕಿದ್ದಾರೆ. ಇದರಿಂದ ಸಲೀಸಾಗಿ ಗದ್ದುಗೇಯ ಮೇಲೆ ಕುಳಿತು ಬಹುದಿನಗಳ ಆಸೆಯನ್ನು ಈಡೆರಿಸಿಕೊಳ್ಳುವ ಶಶಿಕಲಾ ನಟರಾಜನ್ ಅವರಿಗೆ ಪೆಟ್ಟು ಬಿದ್ದಿದೆ.
Image result for shashikala

Image Credits: BBC

ಎಲ್ಲವೂ ಶಶಿಕಲಾ ಅಂದುಕೊಂಡಂತೆ ಆಗುತ್ತಿದೆ ಎಂದು ಅಂದುಕೊಂಡಿದ್ದರು. ಆದರೆ ಮಂಗಳವಾರ ರಾತ್ರಿ ಸುಮಾರು ೯.೫೦ರ ಸುಮಾರಿಗೆ ಪನ್ನೀರ್ ಸೆಲ್ವಂ ನೀಡಿದ ‘ಚೆಕ್’ಗೆ ದಳಗಳನ್ನು ಮುಂದುವರೆಸಲು ಶಶಿಕಲಾ ಕಕ್ಕಾಬಿಕ್ಕಿಯಾಗಿದ್ದಾರೆ.
ಜಯಲಲಿತಾ ಅವರ ಸಮಾಧಿ ಬಳಿ ಧ್ಯಾನ ಮಾಡಿದ ಸೆಲ್ವಂ, ನೆರೆದ ಪತ್ರಕರ್ತರನ್ನು ಉದ್ದೇಶಿಸಿ, ಒತ್ತಡದಿಂದ ನನ್ನ ಕೈಯಿಂದ ರಾಜೀನಾಮೆ ಪಡೆಯಲಾಗಿದೆ ಎಂದು ತಿಳಿಸುತ್ತಾರೆ. ಇಲ್ಲಿಯ ತನಕ ಸುಸೂತ್ರವಾಗಿ ನಡೆಯುತ್ತಿದೆ ಶಶಿಕಲಾ ಆಟಕ್ಕೆ ಬ್ರೇಕ್ ಹಾಕಲು ಸೆಲ್ವಂ ಪ್ಲಾನ್ ಮಾಡಿಕೊಂಡಿದ್ದಾರೆ.
ತಮಿಳರ ಅಮ್ಮನ ಸ್ಥಾನವನ್ನು ತುಂಬಿದ್ದ ಜಯಲಲಿತಾ ಅವರ ಸಾವಿನ ಬಳಿಕ, ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡ ರೀತಿ ಎಐಡಿಐಂಕೆ ಪಕ್ಷದಲ್ಲಿ ಹಂತ ಹಂತವಾಗಿ ಮೇಲೆರಿದ ಶಶಿಕಲಾ, ಸಿಎಂ ಗದ್ದುಗೆ ಸನೀಹಕ್ಕೆ ಬಂದು ನಿಂತಿದ್ದಾರೆ. ಅಲ್ಲದೆ ಇವರಿಗೆ ಚಿನ್ನಮ್ಮನ ಸ್ಥಾನವನ್ನು ಮುಗ್ದ ಜನ ಸಹ ನೀಡಿದ್ದಾರೆ.
Image result for shashikala

Image Credits: ABPNews

ಅಧಿಕಾರವನ್ನು ಅನುಭವಿಸುವ ಆಶಯ ಹೊಂದಿರುವ ಶಶಿಕಲಾ ಅವರಿಗೆ ಜನಮಣ್ಣನೆ ಇದೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಜಯಲಲಿತಾ ಪಕ್ಷ ಭಾರಿ ಜಯ ಸಾಧಿಸಿತ್ತು. ಅಲ್ಲದೆ ಅಮ್ಮ ಮತ್ತೆ ಅಧಿಕಾರ ಹಿಡಿದರು. ಜನರು ಅಮ್ಮನ ಕೈ ಬಿಡಲಿಲ್ಲ. ಅವರ ಸಾವಿನ ಬಳಿಕವೂ, ಪನ್ನಿರ್ ಸೆಲ್ವಂಗೆ ಜನ ಅದೇ ಪ್ರೀತಿ ನೀಡುತ್ತಿದ್ದಾರೆ. ಜನಮನ್ನಣೆಯನ್ನು ಪಡೆಯದ ಶಶಿಕಲಾ ಹೇಗೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಎಲ್ಲಾ ಕುತೂಹಲಗಳಿಗೂ ತಮಿಳುನಾಡಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top