fbpx
ಕನ್ನಡ

ಕನ್ನಡದ ಹೆಮ್ಮೆ ತೀ.ನಂ. ಶ್ರೀಕಂಠಯ್ಯ

ಭಾರತ ಸಂವಿಧಾನ ರಚನೆಯಾದಗ ಸಂವಿಧಾನ ಪರಿಷತ್ತಿನ ಅಧ್ಯಕ್ಷರನ್ನು ಏನೇಂದು ಕರೆಯಬೇಕು ಗೊಂದಲವಿತ್ತು. ಇದಕ್ಕಾಗಿ ವಿವಿಧ ಚರ್ಚೆ, ವಿಚಾರ ಗೋಷ್ಠಿಗಳು ಪ್ರಾರಂಭವಾಗಿದ್ದವು, 1949ರಲ್ಲಿ ದೇಶದ ಎಲ್ಲಾ ರಾಜ್ಯದ ಭಾಷಾ ವಿಜ್ಞಾನಿಗಳನ್ನು ದೆಹಲಿಯಲ್ಲಿ ಸೇರಿಸಿ, ಭಾಷಾ ವಿಜ್ಞಾನಿಗಳ ಸಮ್ಮೇಳನವನ್ನೂ ನಡೆಸಿದರು. ಇಲ್ಲಿಗೆ ಬಂದಿದ್ದ ಪ್ರತಿಯೊಬ್ಬ ಪ್ರತಿನಿಧಿಗಳು ತಮ್ಮ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರು. ಭಾರತದ ಮುಖ್ಯಸ್ಥರನ್ನು ರಾಷ್ಟ್ರಪತಿ ಎಂದು ಕರೆಯಬಹುದು ಎಂಬುದನ್ನು ಕರ್ನಾಟಕ ಮೂಲದ ಘನ ವಿದ್ವಾಂಸರೊಬ್ಬರು ಸೂಚಿಸಿದರು. ಇದನ್ನು ಸಮ್ಮೇಳನದ ಸಮಿತಿ ಒಪ್ಪಿಕೊಂಡಿತ್ತು. ಈ ರಾಷ್ಟ್ರಪತಿ ಎಂಬ ಶಬ್ದದ ಪರಿಕಲ್ಪನೆಯನ್ನು ಪ್ರಕಟಿಸಿದ ಕೀರ್ತಿ ಖ್ಯಾತ ಭಾಷಾ ವಿಜ್ಞಾನಿ, ವಿದ್ವಾಂಸ ತೀ.ನಂ.ಶ್ರೀಕಂಠಯ್ಯ ಅವರಿಗೆ ಸಲ್ಲುತ್ತದೆ.

ಪ್ರೋ.ತೀ.ನಂ.ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ತೀ.ನಂ.ಶ್ರೀ ಸಂಶೋಧನಾತ್ಮಕ ಬರವಣಿಗೆಗಳಲ್ಲಿ ಕಾವ್ಯ ಸ್ಪರ್ಶ ಮಾಡಿರುವುದನ್ನು ಇವರ ಬರಹಗಳಲ್ಲಿ ಕಾಣಬಹುದು. ಇದಲ್ಲದೆ, ತೀ.ನಂ.ಶ್ರೀ ಭಾರತದ ಸಂವಿಧಾನವನ್ನು ಕನ್ನಡಕ್ಕೆ ಅನುವಾದಿಸಿ 1952ರಲ್ಲಿ ಪ್ರಕಟಿಸುವಲ್ಲಿ ಅವರ ಕೊಡುಗೆ ಅಪಾರವಾದುದ್ದು. ತಮ್ಮ ಸತ್ವದಿಂದ, ಸಾಮಥ್ರ್ಯದಿಂದ, ಪ್ರತಿಭೆಯಿಂದ, ವಿದ್ವತ್ತಿನಿಂದ ಕನ್ನಡ ನಾಡು-ನುಡಿಗಳನ್ನು ಶ್ರೀಮಂತಗೊಳಿಸಿದವರಲ್ಲಿ ತೀ.ನಂ.ಶ್ರೀ ಕೂಡ ಒಬ್ಬರು.1926ರಲ್ಲಿ ಬಿ.ಎ. ಪದವಿಯ ಎಲ್ಲಾ ವಿಷಯಗಳಲ್ಲಿ ಪ್ರಥಮ ಸ್ಥಾನಗಳಿಸಿ, ನಾಲ್ವಡಿ ಕೃಷ್ಣರಾಜ ಒಡೆಯರಿಂದ ಘಟಿಕೋತ್ಸವದಲ್ಲಿ ಆರು ಚಿನ್ನದ ಪದಕವನ್ನು ಪಡೆದ ಮೊಟ್ಟ ಮೊದಲ ವ್ಯಕ್ತಿ. ಇದಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಶ್ರೇಷ್ಠ ವಿಮರ್ಶಕ, ಭಾಷಾಶಾಸ್ತ್ರ ಪಂಡಿತ, ನಿಘಂಟು ರಚನಕಾರ ತೀ.ನಂ.ಶ್ರೀಕಂಠಯ್ಯ ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ ನಂಜುಂಡಯ್ಯ ಮತ್ತು ಭಾಗೀರಥಮ್ಮ ಇವರ ಪುತ್ರರಾಗಿ 1906ರ ನವೆಂಬರ್ 26ರಂದು ಜನ್ಮತಾಳಿದರು.ಅಪಾರ ಅನುಭವದ ತೀ.ನಂ.ಶ್ರೀ..ಕೇವಲ 9 ವರ್ಷದಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡು ಬಾಲ್ಯದಲ್ಲಿಯೇ ಮಾತೃ ವಾತ್ಸಲ್ಯದಿಂದ ವಂಚಿತರಾದರು. ತೀರ್ಥಪುರದಲ್ಲಿಯೇ ಪ್ರಾರಂಭಿಕ ಶಿಕ್ಷಣ ಪ್ರಾರಂಭಿಸಿದ ತೀ.ನಂ.ಶ್ರೀ 1929ರಲ್ಲಿ ಇಂಗ್ಲಿಷ್ ಎಂ.ಎ ಮತ್ತು 1931ರಲ್ಲಿ ಕನ್ನಡ ಎಂ.ಎ ಪದವಿ ಪಡೆದ ಆ ನಂತರ ರೆವಿನ್ಯು ಇಲಾಖೆಯಲ್ಲಿ ಅಮಲ್ದಾರರಾಗಿ ವೃತ್ತಿ ಜೀವನ ಆರಂಭಿಸಿದ ಸ್ವಲ್ಪ ದಿನಗಳ ನಂತರ ಆ ವೃತ್ತಿಗೆ ರಾಜೀನಾಮೆ ನೀಡಿ, ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು. ಇದಕ್ಕೆ ತಮ್ಮ ಕುಟುಂಬಸ್ಥರು ಸ್ವಲ್ಪ ವಿರೋಧವನ್ನು ವ್ಯಕ್ತಪಡಿಸಿದಾಗ, ಬೋಧನ ವೃತ್ತಿಯೇ ಚೆನ್ನಾಗಿರುತ್ತದೆ ಎಂದು ಅವನ್ನು ಸಮಾಧಾನ ಪಡಿಸಿದರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯ ವಿಮರ್ಶಕ, ಕವಿ, ಸಂಶೋಧಕ, ಅನುವಾದಕ, ಗ್ರಂಥ ಸಂಪಾದಕ, ನಿಘಂಟು ತಜ್ಞ, ಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದರು. ಈ ಎಲ್ಲಾ ಕ್ಷೇತ್ರದಲ್ಲಿ ವಿಶೇಷವಾದ ಜ್ಞಾನವನ್ನು ಹೊಂದಿದ್ದ ತೀ.ನಂ.ಶ್ರೀ, ಕನ್ನಡ ಸರಸ್ವತ ಲೋಕವನ್ನು ಶ್ರೀಮಂತಗೊಳಿಸಿದರು.

ಓದು ಬರಹಕ್ಕೆ ಶತ್ರು, ಮಾತು ಕೃತಿಗೆ ಶತ್ರು ಎಂದು ಹೇಳುತ್ತಿದ್ದ ತೀ.ನಂ.ಶ್ರೀ ಅವರು ಬರೆದಿರುವುದು ಕಡಿಮೆಯಾದರೂ, ಬರೆದಿರುವ ಎಲ್ಲಾ ಕೃತಿಗಳು ಉನ್ನತ ಸ್ಥಾನವನ್ನು ಪಡೆದಿವೆ. ಇಂದಿಗೂ ಕೂಡ ಇವರ ಗ್ರಂಥಗಳಿಗೆ ಬೇಡಿಕೆ ಇದ್ದು, ಪುನಃ ಪುನಃ ಮರುಮುದ್ರಣಗಳನ್ನು ಕಾಣುತ್ತಿವೆ. ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ತೀ.ನಂ.ಶ್ರೀ ಅವರ ಕನ್ನಡದ ಮೊಟ್ಟ ಮೊದಲನೆಯ ಪ್ರೇಮ ಗೀತೆಗಳ ಸಂಕಲನವಾಗಿರುವ ಒಲುಮೆ ಪುಸ್ತಕ ಸ್ಪೂರ್ತಿ ನೀಡಿತು. ಆ ನಂತರದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರು ಮೈಸೂರು ಮಲ್ಲಿಗೆ ಕವನ ಸಂಕಲನ ಮುದ್ರಣಗೊಂಡಿತು.ಬಿಡಿಮುತ್ತು, ರಾಕ್ಷಸನ ಮುದ್ರಿಕೆ, ಪಂಪ, ಕಾವ್ಯ ಸಮೀಕ್ಷೆ, ಸಮಾಲೋಕನ, ಕಾವ್ಯಾನುಭವ. ಕನ್ನಡ ಮಧ್ಯಮ ವ್ಯಾಕರಣ. ಹೆಣ್ಣು ಮಕ್ಕಳ ಪದಗಳು, ಹರಿಹರ ಕವಿಯ ನಂಬಿಯಣ್ಣನ ರಗಳೆ, ರನ್ನ ಕವಿಯ ಗದಾಯುದ್ಧ ಸಂಗ್ರಹ, ಭಾರತೀಯ ಕಾವ್ಯ ಮೀಮಾಂಸೆ ಈ ಎಲ್ಲಾ ಕೃತಿಗಳು ಇಂದಿನ ಸಂಶೋಧಕರು ಅಧ್ಯಾಯನ ನಡೆಸಿ ವಿಚಾರ – ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಬಹು ಪ್ರಖ್ಯಾತ ಗ್ರಂಥವಾದ ಭಾರತೀಯ ಕಾವ್ಯ ಮೀಮಾಂಸೆಗೆ ಪಂಪ ಪ್ರಶಸ್ತಿ ದೊರಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top