ಸಮಾಚಾರ

ಅಮರಾವತಿ : ನೀನು ಜಾತಿ ನಾಯಿ, ನಾನು ನಾಯಿ ಜಾತಿ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅರಳಿಕಟ್ಟೆ ಅಂಕಪಟ್ಟಿ

ತುಂಬಾ ದಿನಗಳ ನಂತರ ಕನ್ನಡಕ್ಕೆ ಒಂದು ನೈಜ್ಯ ಕನ್ನಡ ಸಿನಿಮಾ ಬಂದಿದೆ. ಇದು ನಮ್ಮ ಸಮಾಜದ ಕನ್ನಡಿ ಎನ್ನಬೋಹುದು . ಈ ಚಿತ್ರಕ್ಕೆ ಕಥೆನೇ ಹೀರೋ. ಪೌರಕಾರ್ಮಿಕನ ಪಾತ್ರದಲ್ಲಿ ನಟಿಸಿರುವ ಅಚ್ಯುತ ಕುಮಾರ್‌ ಚಿತ್ರದ ನಾಯಕ ಮಾತ್ರವಲ್ಲ, ಕನ್ನಡ ಚಿತ್ರರಂಗದ ನಿಜವಾದ ‘ನಾಯಕ’ ಅನ್ನಿಸಿಬಿಡುತ್ತಾರೆ. ಪೌರಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೆ ಏನು ಆಗುತೆ ಅಂತ ತೋರಿಸುತ್ತೆ ಈ ಸಿನಿಮಾ.

‘ಮೈತ್ರಿ’ಯಂಥ ಪ್ರಯೋಗಶೀಲ ಚಿತ್ರವನ್ನು ರೂಪಿಸಿದ್ದ ಬಿ.ಎಂ. ಗಿರಿರಾಜ್‌, ಇದೀಗ ‘ಅಮರಾವತಿ’ ಮೂಲಕ ಪೌರಕಾರ್ಮಿಕರ ಬದುಕಿನ ಸಂಘರ್ಷಗಳನ್ನು ದೃಶ್ಯರೂಪಕ್ಕೆ ತಂದಿದ್ದಾರೆ. ಅಭಿವೃದ್ಧಿಯ ಫಲವಾಗಿ ಹುಟ್ಟಿಕೊಂಡ ಚರಂಡಿಗಳೂ ಹಾಗೂ ಅವುಗಳನ್ನು ತಿಳಿಗೊಳಿಸುವ ಪೌರ ಕಾರ್ಮಿಕರೂ ಚಿತ್ರದಲ್ಲಿದ್ದಾರೆ. ಜಲಗಾರರ ಹಸಿವು, ಪ್ರೀತಿ, ಸೆಡವುಗಳ ಜೊತೆಗೆ ಅವರ ಬದುಕಿನ ಜೊತೆಗೆ ಆಟವಾಡುವ ಕ್ರೂರಿ ವ್ಯವಸ್ಥೆಯೂ ಚಿತ್ರದಲ್ಲಿದೆ.

ವಲಸೆ ಕಾರ್ಮಿಕರ ಬಗ್ಗೆ ಒಂದು ಸಿನಿಮಾ ಮಾಡಬೇಕೆಂಬ ಆಲೋಚನೆಯಿತ್ತು. ಆಗಷ್ಟೇ ‘ಜಟ್ಟ’ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಅಂದು ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮೂರು ದಿನ ನಗರದ ಕಸ ತೆಗೆಯದೆ ಪ್ರತಿಭಟಿಸಿದ್ದರು. ರಾಜಧಾನಿ ಗಬ್ಬು ನಾರುತ್ತಿದ್ದುದು ವಿಶ್ವದ ಸುದ್ದಿಯಾಗಿತ್ತು. ಕಾರ್ಮಿಕರ ಕುರಿತ ನನ್ನ ಸಿನಿಮಾ ಕನಸಿಗೆ ಆ ಪ್ರತಿಭಟನೆಯೂ ಇಂಬು ಕೊಟ್ಟಿತು’ ಎಂದು ನಿರ್ದೇಶಕ ಬಿ.ಎಂ. ಗಿರಿರಾಜ್ ‘ಅಮರಾವತಿ’ ಹುಟ್ಟಿನ ಹಿನ್ನೆಲೆಯನ್ನು ನಮ್ಮೊಂದಿಗೆ ಹಂಚಿಕೊಂಡರು.

ನಾಯಿಯೊಂದಿಗೆ ಎದೆಯುಬ್ಬಿಸಿಕೊಂಡು ನಡೆಯುವಷ್ಟೇ ಸಲೀಸಾಗಿ ಚರಂಡಿಯಲ್ಲೂ ಅಚ್ಯುತ ಕುಮಾರ್‌ ಇಳಿಯುತ್ತಾರೆ. ಉಳಿದಂತೆ ಕಿರಣ್ ನಾಯಕ್, ಹೇಮಂತ್‌, ನೀನಾಸಂ ಅಶ್ವಥ್ ಹಾಗೂ ವಿದ್ಯಾ ವೆಂಕಟರಾಮ್ ಪಾತ್ರಪೋಷಣೆ ನೆನಪಿನಲ್ಲುಳಿಯುತ್ತದೆ.

ಸಾಧ್ಯತೆಗಳ ದೃಷ್ಟಿಯಿಂದ ಪ್ರಶ್ನೆಗಳನ್ನು ಉಳಿಸಿದರೂ, ಬದ್ಧತೆಯ ದೃಷ್ಟಿಯಿಂದ ಮುಖ್ಯವೆನ್ನಿಸುವ ‘ಅಮರಾವತಿ’ ನಮ್ಮ ಅಂತರಂಗವನ್ನು ನಾವು ಪರೀಕ್ಷಿಸಿಕೊಳ್ಳಲು ಒತ್ತಾಯಿಸುವ ಸಿನಿಮಾ. ಚಿತ್ರ ತಂಡಕ್ಕೆ ಶುಭಕೋರುತೇನೆ

Comments

comments

1 Comment

1 Comment

  1. Santhosh

    February 11, 2017 at 4:09 am

    Howdy, ondu naija katheyannu adharisida chitra. Its a very good cobtent based film.

Leave a Reply

Your email address will not be published. Required fields are marked *

To Top