fbpx
ಜಾಗೃತಿ

ಮಹಿಳೆಯರೇ ಅಂಗಡಿಗಳಲ್ಲಿ ರಿಚಾರ್ಜ್ ಮಾಡಿಸುತ್ತಿದ್ದರೆ ಜೋಕೆ!!! 

ಪ್ರತಿಷತ ೯೦ ರಷ್ಟು ಮಹಿಳೆಯರು ಉತ್ತರ ಪ್ರದೇಶದ ರಾಜ್ಯದಲ್ಲಿ ೧೦೯೦ ಸಹಾಯವಾಣಿಗೆ ಫೋನ್ ಮಾಡಿ ತಮಗೆ ಹುಡುಗರು ಮೊಬೈಲ್ ಕಾಲ್ ಮಾಡಿ ಕಾಟ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಹೌದು… ಉತ್ತರ ಪ್ರದೇಶದ ಅಂಗಡಿಗಳಲ್ಲಿ ರಿಚಾರ್ಜ್ ಮಾಡಿಸಿದ ಮಹಿಳೆಯರ ನಂಬರ್‌ಗಳನ್ನು ಸೇವಿ ಮಾಡಿಕೊಳ್ಳುವ ಯುವಕರು ಯುವತಿಯರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದಾರೆ.
ಕರೆ ಮಾಡಿದ ಯುವಕರು, ನಾನು ನಿನ್ನೊಂದಿಗೆ ಸ್ನೇಹವನ್ನು ಬಯಸುವೇ ಎಂದು ಮಾತನ್ನು ಆರಂಭಿಸುತ್ತಾನೆ ಎಂದು ನೊಂದ ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಅಂಗಡಿ ಮಾಲೀಕರು ಯುವತಿಯ ಅಂದಕ್ಕೆ ಅನುಸಾರವಾಗಿ ನಂಬರ್‌ಗಳ ಬೆಲೆ ನಿಗದಿ ಮಾಡಿರುತ್ತಾರೆ. ತುಂಬಾ ಸುಂದರ ಯುವತಿಯಾಗಿದ್ದರೆ ಆಕೆಯ ನಂಬರ್ ಪಡೆಯಲು ೫೦೦ ರೂ. ನೀಡಿದರೆ ಸಾಕು. ಒಂದು ನಂಬರ್‌ಗೆ ೫೦ ರೂಪಾಯಿಂದ ೫೦೦ ರೂಪಾಯಿಗಳ ವರೆಗೆ ನಂಬರ್‌ಗಳನ್ನು ಅಂಗಡಿಯವರು ನೀಡುತ್ತಾರೆ.
ದೂರುಗಳನ್ನು ಪಡೆದ ಅಧಿಖಾರಿಗಳು ಯುವಕರಿಗೆ ಕರೆ ಮಾಡಿದ್ದಾರೆ. ಅವರು ಹೇಳುವ ಅನುಸಾರ ಯುವಕರು ನಿರುದ್ಯೋಗಿಗಳು, ಗ್ರಾಮೀಣ ಪ್ರದೇಶದವರು, ವಯಸ್ಸಾದವರು, ಯುವಕರು ಸೇರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅವಳು ನನ್ನ ಪ್ರೇಯಸಿ ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದಾಳೆ ಎಂದು ಯುವಕ ತಿಳಿಸಿದ್ದಾನೆ ಎಂದು ೧೦೦ಕ್ಕೂ ಹೆಚ್ಚು ದೂರಗಳನ್ನು ಪಡೆದ ರಾಜೇಶ್ ಪ್ರತಾಪ್ ಯಾದವ್ ಹೇಳುತ್ತಾರೆ.
ನಂಬರ್ ನೀಡುವ ಮಾಫೀಯಾ ದೊಡ್ಡದಾಗಿ ಬೆಳೆಯುತ್ತಿದ್ದು, ಅಧಿಕಾರಿಗಳು ಮಟ್ಟ ಹಾಕದೇ ಇದ್ದಲ್ಲಿ ತೊಂದರೆ ಖಂಡಿತ.
ಹಾಗಿದ್ದರೆ ಇದರಿಂದ ದೂರ ಉಳಿಯಲು ಏನು ಮಾಡಬೇಕು. 
೧- ಅಂತಾರ್ಜಾಲದ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಿ
೨- ಬಿಲ್‌ಗಳನ್ನು ಜಾಲತಾಣಗಳಲ್ಲಿ ತುಂಬಿರಿ
೩- ಅಂಗಡಿಗೆ ಹೋಗುವುದನ್ನು ಹೆಚ್ಚಾಗಿ ನಿಲ್ಲಿಸಿ
೪- ಈ ವಿಷಯದಲ್ಲಿ ಯಾರ ಪರವೂ ನಂಬಿಕೆ ಸಲ್ಲದು
೫- ಡಿಜಿಟಲ್ ಯುಗದ ಸಂಪೂರ್ಣ ಲಾಭ ಪಡೆಯಿರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top