ತಿಂಡಿ ತೀರ್ಥ

ಟೊಮೆಟೊ ಪರೋಟಾ

ಸಾಮಗ್ರಿ: ಕತ್ತರಿಸಿದ ಟೊಮೆಟೊ-1 ಕಪ್, ಗೋಧಿ ಹಿಟ್ಟು-3 ಕಪ್, ಗರಮ್ ಮಸಾಲೆ-2 ಟೀ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-2 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-5 ಟೀ ಚಮಚ.

tomato parota


ವಿಧಾನ: ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಸೊಪ್ಪು, ಗರಮ್ ಮಸಾಲೆ, ಉಪ್ಪುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಗೋಧಿಹಿಟ್ಟಿಗೆ, ರುಬ್ಬಿದ ಟೊಮೆಟೊ ಮಿಶ್ರಣ, ಸ್ವಲ್ಪ ಎಣ್ಣೆ ಬೆರೆಸಿ ಚಪಾತಿ ಹದಕ್ಕೆ ಕಲೆಸಿ, ಒಂದು ಗಂಟೆ ನೆನೆಸಿ.
ಈ ಮೊದಲು ಕಲೆಸಿದ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಯನ್ನು ತೆಗೆದು ಚಪಾತಿಯ ಆಕಾರದಲ್ಲಿ ಲಟ್ಟಿಸಿ ಕಾಯಿಸಿದ ತವಾದ ಮೇಲೆ ಎಣ್ಣೆ ಸವರಿ ಹರಡಿ. ಎರಡೂ ಬದಿಯನ್ನು ಬೇಯಿಸಿ ತೆಗೆದರೆ ರುಚಿಯಾದ ಟೊಮೆಟೊ ಪರೋಟಾ ಸವಿಯಲು ಸಿದ್ಧ. ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಬಲು ರುಚಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top