fbpx
Achivers

ರೈತರಿಗೆ ಲಕ್ಷಾಂತರ ರೂಗಳ ಆದಾಯ ತರುತ್ತಿದೆ ಗೋಮಾತೆ!!!

ಆದಾಯದ ಧಾರೆ ಹರಿಸಿದ ಹೈನೋದ್ಯಮ!
ಕೃಷಿಯ ಉಪಕಸುಬುಗಳು ಎಂದಿಗೂ ಅನ್ನದಾತನನ್ನು ಕೈ ಬಿಟ್ಟ ಉದಾಹರಣೆ ಇಲ್ಲ. ನೀವು ಯಾರಾದರೂ ಪ್ರಗತಿಪರ ರೈತರನ್ನು ಕೇಳಿ ನೋಡಿ, ಈ ಕು-ರಿತು ತಮ್ಮ ಯಶೋಗಾಥೆಯನ್ನು ಅವರು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ 38ರ ಹರೆಯದ ಬಸವರಾಜ ಸೆದೆಪ್ಪ ವಾರದ ಈ ಮಾತಿಗೆ ಜ್ವಲಂತ ಉದಾಹರಣೆ. ವಾರದರ ಮೇಲಿದ್ದ ನಿರುದ್ಯೋಗಿ ಹಣೆಪಟ್ಟಿಯನ್ನು ತೊಡೆದು ಹಾಕುವಲ್ಲಿ ಹೈನೋದ್ಯಮ ಮಹತ್ತರ ಪಾತ್ರ ವಹಿಸಿದೆ.

ಶಿಕ್ಷಕನಾಗುವ ಹಂಬಲ ಎಂ.ಎ.ಎಂಎಡ್ ಮಾಡಿಕೊಂಡಿರುವ ಬಸವರಾಜ ಎಲ್ಲರಂತೆ ಶಿಕ್ಷಕನಾಗಬೇಕೆಂಬ ಹಂಬಲ ಹೊತ್ತವರು. ಖಾನಾಪುರ ತಾಲೂಕಿನ ಇಟಗಿಯ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಬಿ.ಎಂ. ಸಾಣಿಕೊಪ್ಪ ಪ್ರಾಥಮಿಕ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳ ಕೊರತೆಯಿಂದ ಆ ಕೇಂದ್ರ ಮುಚ್ಚಲ್ಪಟ್ಟಾಗ ಇಡೀ ಆಕಾಶವೇ ಮೈಮೇಲೆ ಕಳಚಿ ಬಿದ್ದಂತಾಗುತ್ತದೆ.

Image result for dairy india

Representational Image; Source: Vetconcerns

ಪರ್ಯಾಯ ಕಾಯಕದ ಅರಿವೇ ಇಲ್ಲದ ಇವರು ಮಾನಸಿಕ ವ್ಯಥೆಗೆ ಒಳಪಟ್ಟಾಗ ಕೈಹಿಡಿದಿದ್ದು ಧಾರವಾಡದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಬೆಳಗಾವಿಯ ಮಹಾಂತೇಶ ನಗರದ ಸರ್ಕಾರಿ ಪಶು ವೈದೈಕೀಯ ಸಹಾಯಕರ ತರಬೇತಿ ಸಂಸ್ಥೆ. ಅಲ್ಲಿ ಆಧುನಿಕ ಹೈನುಗಾರಿಕೆ, ಮೇವು ಅಭಿವೃದ್ದಿ ಹಾಗೂ ಮನೆಬಾಗಿಲಿಗೆ ಕೃತಕ ಗರ್ಭಧಾರಣೆ ಸೇವೆಯ ತರಬೇತಿ ಪಡೆದರು.ಕೈಹಿಡಿದ ತರಬೇತಿಈ ತರಬೇತಿ ಮುಂದೆ ಸ್ವ-ಉದ್ಯೋಗಕ್ಕೆ ರಹದಾರಿ ಕಲ್ಪಿಸಿತು.

ಇದರ ಫಲವಾಗಿ ಇದೀಗ ಯರಡಾಲ-ಬೈಲಹೊಂಗಲ ರಸ್ತೆಗೆ ಹೊಂದಿಕೊಂಡಿರುವ ತಮ್ಮ ಜಮೀನಿನಲ್ಲಿ ಆಕಳು ಸಾಕಾಣಿಕಾ ಫಾರಂ(ಡೇರಿ) ತೆರೆದು ಅರ್ಥಿಕ ಪ್ರಗತಿಯ ಹಾದಿಯಲ್ಲಿದ್ದಾರೆ. ಪ್ರಾರಂಭದಲ್ಲಿ ಈ ಉದ್ಯೋಗ ಮುಜುಗರ ತಂದದ್ದೇನೋ ನಿಜ. ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತನ್ನು ಮರೆಯದೇ ಬೈಲಹೊಂಗಲದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಸ್ಥೆ ಸಂಪರ್ಕಿಸಿ 1 ಲಕ್ಷ ಆರ್ಥಿಕ ನೆರವು ಪಡೆದರು.

Image result for dairy india

Representational Image; Source: Dairy News India

ಬೈಲಹೊಂಗಲ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಸುಮಾರು 8 ಲಕ್ಷ ಸಾಲ ಪಡೆದು ಮಹಾರಾಷ್ಟ್ರದ ಸಾಂಗೋಲಾದಲ್ಲಿ ಸುಮಾರು 10 ಆಕಳುಗಳನ್ನು ಖರೀದಿಸಿದರು. ಚಟುವಟಿಕೆ ಪ್ರಾರಂಭಿಸಿದ ಎರಡೇ ವರ್ಷದಲ್ಲಿ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಹಾಕಿದಾಗ ಅದು ಎಲ್ಲರ ಗಮನಕ್ಕೆ ಬರಲು ತಡವಾಗಲಿಲ್ಲ.ಇವರ ಮಾದರಿ ಅನುಸರಿಸಲು ಅನೇಕಾನೇಕ ಹೈನೋದ್ಯಮದ ಉತ್ಸಾಹಿಗಳು ಭೇಟಿ ನೀಡಿರುವದು ಇಲ್ಲಿ ವಿಶೇಷವಾಗಿದೆ.ಹಾಲು ಸಂಗ್ರಹಣಾ ಕೇಂದ್ರಪ್ರತಿ ತಿಂಗಳು ಸುಮಾರು 15 ರಿಂದ 20 ಸಾವಿರ ನಿವ್ವಳ ಆದಾಯ ಪಡೆದ ಬಸವರಾಜ ಅವರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಬ್ಯಾಂಕಿನ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ತಮ್ಮ ಜಮೀನಿನಲ್ಲೇ ಹಾಲು ಸಂಗ್ರಹಣಾ ಕೇಂದ್ರವೂಂದನ್ನು ತೆರೆ ಯುವ ವಿಚಾರ ಹೊಂದಿದ್ದಾರೆ. ಕೃಷಿ ಸಂಬಂಧಿತ ಉಪ ಕಸುಬುಗಳೆಂದರೆ ಮೂಗು ಮುರಿಯುವವರು ಬಸವ ರಾಜ ಅವರನ್ನು ನೋಡಿ ಕಲಿಯುವದು ಸಾಕಷ್ಟಿದೆ. ಮುಖ್ಯವಾಗಿ ಇದು ನಿರುದ್ಯೋಗಿಗಳಿಗೆ ಪಾಠವಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top