fbpx
News

ದೇಶದಲ್ಲಿ ಎಲ್ಲೆಲ್ಲೂ ರೈತರ ಆತ್ಮಹತ್ಯೆ!! ಅನ್ನದಾತನಿಗೆ ಸಿಗುವುದೇ ಪರಿಹಾರ!!!

ಆತ್ಮಹತೆ ಆತ್ಮಹತೆ ಆತ್ಮಹತೆ..!
ರೈತರ ಆತ್ಮಹತ್ಯೆ. ಕಳೆದ ಎರಡು ದಶಕಗಳಿಂದ ಈಚೆಗಂತೂ ವಿಪರೀತ. ಎನ್.ಸಿ.ಆರ್.ಬಿ. (ನ್ಯಾಶನಲ್ ಕ್ರೈಂ ರೆಕಾಡ್ರ್ಸ್ ಬ್ಯೂರೊ) ದಾಖಲೆಯನ್ವಯ 1995ರಿಂದ 2014ರ ಅವಧಿಯಲ್ಲಿ ದೇಶಾದ್ಯಂತ 3,08,826 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದೇಶದ ಒಟ್ಟು ಆತ್ಮಹತ್ಯೆಗಳ ಪ್ರಮಾಣದ ಅಂದಾಜು ಶೇ. 14ರಷ್ಟು. ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಂತೂ ಖಂಡಿತ ಅಲ್ಲ. ಈಚಿನ ಎರಡು ವರ್ಷಗಳಲ್ಲಿ ಇನ್ನೆಷ್ಟು ರೈತರು ಜೀವ ಕಳೆದುಕೊಂಡಿದ್ದಾರೆಂಬ ದಾಖಲೆ ಲಭ್ಯವಾಗಿಲ್ಲ. 1995ರ ಹಿಂದಿನದೂ ಗೊತ್ತಿಲ್ಲ.

Image result for farmer suicide

Source:IndiaToday

ಇಪ್ಪತ್ತು ವರ್ಷಗಳಲ್ಲಿ ಪ್ರತಿವರ್ಷ ಸರಾಸರಿ 15 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಖಲಾತಿ ಆರಂಭದಿಂದ ಏರುಮುಖವಾಗೇ ಹೊರಟ ಈ ಸಂಖ್ಯೆ 2004ರಲ್ಲಿ ಉತ್ತುಂಗ ತಲುಪಿದ್ದು (18,241) ನಂತರದ ವರ್ಷಗಳಲ್ಲಿ ಇಳಿಮುಖವಾಗಿದೆ. ಆದರೂ ಈ ಸಂಖ್ಯೆ ಕಳವಳಕಾರಿ (2014ರಲ್ಲಿ 12,360).ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ಮೊದಲ ಹತ್ತು ರಾಜ್ಯಗಳು ಕ್ರಮವಾಗಿ ಮಹಾರಾಷ್ಟ್ರ (61,702), ಅಖಂಡ ಆಂಧ್ರ (36,989), ಕರ್ನಾಟಕ (36,698), ಮಧ್ಯಪ್ರದೇಶ (28,458), ಕೇರಳ (20,254), ಪ.ಬಂಗಾಳ (17,334), ತಮಿಳ್ನಾಡು (15,198), ಛತ್ತೀಸ್‍ಗಡ (15,100), ರಾಜಸ್ಥಾನ (10,215) ಹಾಗೂ ಗುಜರಾತ (10,027). ಈ ಹಿನ್ನೆಲೆಯಲ್ಲೇ ಸುಪ್ರೀಂ ಕೋರ್ಟು, ಕೇಂದ್ರ, ಎಲ್ಲ ರಾಜ್ಯ ಸರಕರಕಾರಗಳಿಗೂ ಈಚೆಗೆ ಉಗಿದು ಉಪ್ಪು ಹಾಕಿದ್ದು.

ಇದಕ್ಕೆ ಈಗಿನ, ಹಿಂದಿನ ಸರಕಾರಗಳೆಲ್ಲವೂ ಹೊಣೆ. ಒಂದು ತಿಂಗಳಲ್ಲಿ ವಿವರಣೆ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಆದರೆ ಸರಕಾರಗಳು ಇದನ್ನು ಪೂರೈಸಿಯಾವೇ ಎಂಬುದೇ ಸಂದೇಹ.ಬಹುಶಃ 30 ವರ್ಷ ಹಿಂದೆ ಈ ಪ್ರಮಾಣದ ಆತ್ಮಹತ್ಯೆ ಇರಲಿಲ್ಲ. ಯಾವಾಗ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಮಕ್ಮಲ್ ಟೋಪಿ ಹಾಕಿಕೊಂಡೆವೊ; ಅಲ್ಲಿಂದ ಕೆಲವೇ ವರ್ಷಗಳಲ್ಲಿ ರೋಗ ಶುರುವಾಯ್ತು. ಕೃಷಿ ಕ್ಷೇತ್ರಕ್ಕೊಂದೇ ಅಲ್ಲ. ದೇಶಿ ಕ್ಷೇತ್ರಗಳೆಲ್ಲಕ್ಕೂ ಇದು ದುಷ್ಪರಿಣಾಮ ಬೀರಿತು. ರೈತನ ಉತ್ಪಾದನಾ ವೆಚ್ಚ (ಬೀಜ, ಗೊಬ್ಬರ, ಕ್ರಿಮಿನಾಶಕ, ಪರಿಕರ ಖರೀದಿ, ಕೂಲಿ) ಹೆಚ್ಚತೊಡಗಿತು. ಬೆಳೆಯಿಂದ ಬರಬಹುದಾದ ಆದಾಯದ ಶೇ. 50ರಷ್ಟು ಉತ್ಪಾದನಾ ವೆಚ್ಚವೇ ಆಗಿ ಬೆಳೆ ಕೈಕೊಟ್ಟಾಗ ಹಾಗೂ ಬೆಳೆ ಬಂದರೂ ಬೆಲೆ ಕೈಕೊಟ್ಟಾಗ ಸಹಜವಾಗಿ ಆತ ಸಾಲಗಾರರ ಮಗನಾದ. ಸಾಲ ತೀರಿಸಲಾಗದೇ ಜೀವ ಕಳೆದುಕೊಳ್ಳಲು ಮುಂದಾದ.

Image result for farmer suicide

Source:IndiaToday

ದೇಶದ ಕೃಷಿಕ ಸಮುದಾಯದಲ್ಲಿ ಬಡ, ಮಧ್ಯಮವರ್ಗದ ಕೃಷಿಕರೇ ಶೇ. 80ರಷ್ಟು. ಬಹುತೇಕ ಎಲ್ಲರೂ ಸಾಲದ ಸುಳಿಗೆ ಸಿಕ್ಕವರೆ. ಇವರು ಈ ಸಂಕಷ್ಟಕ್ಕೆ ಸಿಲುಕಲು ಇನ್ನೂ ಒಂದು ಮುಖ್ಯ ಕಾರಣ ಮಿಶ್ರಬೆಳೆ ಪದ್ಧತಿಯನ್ನು ಬಹುಜನ ಕೈಬಿಟ್ಟಿದ್ದು. ಎಲ್ಲರೂ ಒಂದಕ್ಕೇ ಗಂಟು ಬಿದ್ದರೆ ಇಂಥ ಅಪಾಯ ತಪ್ಪಿದ್ದಲ್ಲ. ಇದನ್ನು ಪೂರ್ವಜ ಕೃಷಿಕರು ಹೇಳಿದ್ದಾರೆ. ಅವರ ಮಾತು ನಾವು ಕೇಳಲಿಲ್ಲ.

ಹುಲಿಯ ಬಣ್ಣ ಬಯಸಿ ನರಿ ಮೈ ಸುಟ್ಟುಕೊಂಡಂತಾಗಿದೆ.ಹೀಗಾದ ಮೇಲೆ ಆತ್ಮಹತ್ಯೆ ಮಾಡಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆಯೆ? ಖಂಡಿತ ಇಲ್ಲ. ಅದು ದುಪ್ಪಟ್ಟಾಗುತ್ತದೆ. ಸಾಲಗರರ ಕಾಟ ಆತನ ಕುಟುಂಬಕ್ಕೆ ಜಾಸ್ತಿ ಆಗುತ್ತದೆ. ಅವಲಂಬಿತರು ದಿಕ್ಕುಗಾಣದಂತಾಗುತ್ತಾರೆ. ಇದ್ದ ಚೋಟು ಹೊಲವನ್ನೂ ಮುಟ್ಟುಗೋಲು ಹಾಕಿಕೊಂಡರೆ ಅವನ ಹೆಂಡತಿಮಕ್ಕಳು ಬೀದಿಪಾಲು.

ಶಾಲೆ-ಕಾಲೇಜು ಕಲಿಯುತ್ತಿದ್ದ ಮಗ ಅದನ್ನು ಬಿಟ್ಟು ಕೂಲಿ ಹುಡುಕಿಕೊಂಡು ಹೋಗಬೇಕು. ಮದುವೆಗೆ ಬಂದ ಮಗಳಿದ್ದರೆ ಆ ಗೋಳಂತೂ ದೇವರಿಗೇ ಪ್ರೀತಿ. ಅವಲಂಬಿತರ ಸಂಖ್ಯೆ ಹೆಚ್ಚಿದ್ದಷ್ಟೂ ಸಮಸ್ಯೆ ಭೂತಾಕಾರ. ಈ ದಯನೀಯ ಸ್ಥಿತಿಯಿಂದ ಆತನ ಕುಟುಂಬ ಸ್ವಾವಲಂಬಿಯಾಗಬೇಕಾದರೆ ಒಂದು ಪೀಳಿಗೆಯೇ ಕಳೆಯುತ್ತದೆ. ಇದಕ್ಕೂ ಹೆಚ್ಚಾಗಿ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡವನನ್ನು ಕಾಯಂ ಶಪಿಸುತ್ತಾರೆ.ಈಗ ಹೇಳು ಅನ್ನದಾತನೇ, ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ…..? ಬೇಡ. ಸುತರಾಂ ಬೇಡ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top