fbpx
News

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3ನೇ ಸ್ಥಾನ

ಬೆಂಗಳೂರು ನಗರ ಕೆಂಪೇಗೌಡ ಅಂತರರಾಷ್ಟ್ರೀಯಾ ವಿಮಾನ ನಿಲ್ದಾಣ 2016 ಸಂಚಾರ ದಟ್ಟಣೆ ವರದಿ ಬಿಡುಗಡೆಯಾಗಿದ್ದು, ಆ ಮೂಲಕ ನಗರದ ನಿಲ್ದಾಣ ದೇಶದ ಮೂರನೇ ದೊಡ್ಡ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ನಿಮಾನ ನಿಲ್ದಾಣ 2016 ರ ಕಳೆದ ವರ್ಷ ಪ್ರಯಾಣಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ನವೆಂಬರ್ ತಿಂಗಳಲ್ಲಿ 20ಲಕ್ಷ ಪ್ರಯಾಣಿಕರಿದ್ದರೆ. ಅವರ ಸಂಖ್ಯೆ ಡಿಸೆಂಬರ್ ತಿಂಗಳಲ್ಲಿ 22.5 ಲಕ್ಷವಾಗಿದೆ. 2017ಕ್ಕೆ ಹೋಲಿಸಿದರೆ ಶೇ 22.5 ರಷ್ಟು ಹೆಚ್ಚಳವಾಗಿದೆ.

ವಿಮಾನಗಳಲ್ಲಿ ಸಂಚಾರ ದಟ್ಟಣೆಯು ನಿಲ್ದಾಣ ಪ್ರತಿ ದಿನ ಅಂದಾಜು 60 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ. 1.8 ಕೋಟಿ ಮಂದಿ ದೇಶೀಯ ಹಾಗೂ 3.5 ಕೋಟಿ ಮಂದಿ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಸಂಚರಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ದಟ್ಟಣೆಯ ನಿಲ್ದಾಣ ಇದಾಗಿದೆ. 2008ರಲ್ಲಿ ಸ್ಥಾಪನೆಯಾದ ಈ ನಿಲ್ದಾಣದ ಒಟ್ಟು ಪ್ರಯಾಣಿಕರ ಸಂಖ್ಯೆ 10 ಕೋಟಿ ಗಡಿ ದಾಟಿದಂತಾಗಿದೆ.

2016ರಲ್ಲಿ 3,14,060 ಮೆಟ್ರಿಕ್ ಸರಕು ಸಾಗಣೆ ಮಾಡುವ ಮೂಲಕ ಮೂಲಕ ಶೇ 9.4ರಷ್ಡು ಹೆಚ್ಚಳ ಕಂಡುಬಂದಿದೆ. ಸರಕು ಸಾಗಣಿಕೆಯಲ್ಲಿ ಇದು ದಕ್ಷಿಣ ಭಾರತದಲ್ಲಿ ಮೊದಲ ನಿಲ್ದಾಣ ಎನಿಸಿಕೊಂಡಿದೆ.

ಏರ್ ಇಂಡಿಯಾ ಎಸ್.ಎ.ಟಿ.ಎಸ್ ಏರ್ ಪೋರ್ಟ್ ಸರ್ವೀಸ್ ಪ್ರೈ.ಲಿ. ಸಹಭಾಗಿತ್ವದಲ್ಲಿ ಈ ಸೇವೆ ನೀಡುತ್ತಿದ್ದೇವೆ. ವಿಮಾನ ನಿಲ್ದಾಣವನ್ನು ಹಸಿರು ಗಿಡಗಳಿಂದ ಕೂಡಿರುವಂತೆ ಮಾಡಲುನ 2.5 ಮೆಗಾವಾಟ್, 500 ಮಡಗವಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್ ಇವೆ ಎಂದು ಹೇಳಿದರು. ಹಾಗೂ ಕೆಲವೇ ವರ್ಷದಲ್ಲಿ ದೇಶದ ನಂ.1 ನಿಲ್ದಾಣ ಮಾಡಲು ಪ್ರಯತ್ನಿಸುತ್ತೇವೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಸಂಜಯ್ ರೆಡ್ಡಿ ಅವರು ಮಾದ್ಯಮಕ್ಕೆ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top