fbpx
ಉಪಯುಕ್ತ ಮಾಹಿತಿ

ಜಗತ್ತಿನ ಏಕೈಕ ಮಾನವ ಮುಖದ ಗಣಪತಿ ದೇವಾಲಯ

ಮುಕುಟೇಶ್ವರ ಸ್ವಾಮಿ ಸ್ವರ್ಣವಲ್ಲಿ ಸಮೇತನಾಗಿ
ಕುಂಭಕೋಣಂನ ಪೂತೋಟಮ್ ನ ಬಳಿಯ ಕೂತನೂರು ಸಮೀಪದ ತಿಲತರ್ಪಣಪುರಿಯಲ್ಲಿ ಈ ದೇವಾಲಯವಿದೆ.

ತಿಲತರ್ಪಣವೆಂದರೆ , ತಿಲ = ಎಳ್ಳು , ತರ್ಪಣ= ನೀರಿನ ಸಮರ್ಪಣೆ ಅಂದರೆ ಈ ಸ್ಥಳವು ಪಿತೃ ಕಾರ್ಯಗಳಿಗೆ ಹೆಸರುವಾಸಿಯಾದ ಸ್ಥಳ.

ಪಿತೃ ದೋಷ ಯಾವಾಗ ಉಂಟಾಗುತ್ತದೆ?

ತಂದೆ ತಾಯಿಯರ ಆಸೆಗಳು ಪೂರ್ಣವಾಗದೆ ಇರುವಾಗ.
ಬದುಕಿದ್ದಾಗ ಮಾಡಿದ ಕೆಟ್ಟ ಕಾರ್ಯಗಳು.
ಶ್ರದ್ಧಾ ಕಾರ್ಯಗಳು ಸರಿಯಾಗಿ ಮಾಡದೆ ಇರುವಾಗ.
ಮಕ್ಕಳು ಮಾಡುವ ಕೆಟ್ಟ ಕಾರ್ಯಗಳು.

ಪ್ರಪಂಚದಲ್ಲಿ 7 ಸ್ಥಳಗಳು ಪಿತೃಕಾರ್ಯಗಳಿಗೆ ಹೆಸರುವಾಸಿಯಾಗಿದೆ ಕಾಶಿ ,ರಾಮೇಶ್ವರ ,ಶ್ರೀವಂಚಿಯಂ, ತಿರುವೆನಕಾಡು,ಗಯಾ,ತ್ರಿವೇಣಿ ಸಂಗಮ ಹಾಗೂ ತಿಲತರ್ಪಣಪುರಿ.

ಇನ್ನೊಂದು ಗುಡಿಯಲ್ಲಿ ನರ ಮುಖ ವಿನಾಯಕನ ಮೂರ್ತಿಯಿದೆ.


ಈ ಆದಿ ವಿನಾಯಕನ ದೇವಾಲಯಕ್ಕೆ ಭೇಟಿ ಕೊಟ್ಟರೆ ಪಿತೃ ದೋಷಗಳು ಹಾಗೂ ಪಿತೃ ಶಾಪಗಳಿಂದ ಮುಕ್ತಿ ಹೊಂದಬಹುದು.


ಅನೇಕ ಶ್ರಾದ್ಧ ಹಾಗೂ ಪಿಂಡ ಪ್ರಧಾನ ಕಾರ್ಯಗಳು ಈ ಸ್ಥಳದಲ್ಲಿ ನಡೆಯುತ್ತವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top