fbpx
god

ಕಲ್ಲುಗಣಪತಿ ದೇವಸ್ಥಾನ ಮಹಾ ಮಹಾತ್ಮೆ!!!

ಉಡುಪಿ ಜಿಲ್ಲೆಯನ್ನು ದೇವನಗರಿ, ತೀರ್ಥ ಕ್ಷೇತ್ರಗಳ ನೆಲೆಬೀಡೆಂದು ಪ್ರವಾಸಿಗರು ಕರೆಯು ತ್ತಾರೆ. ಇಲ್ಲಿ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶಿಲಾಮಯ ದೇವಸ್ಥಾನಗಳಿವೆ. ನಾವು ಇಲ್ಲಿ ಶ್ರೀ ಗಣಪತಿ ದೇವಸ್ಥಾನಗಳ ಸಾಲಿಗೆ ಬಂದರೆ… ಆನೆಗುಡ್ಡೆ ಗಣಪತಿ, ಹಟ್ಟಿಯಂಗಡಿ ಗಣಪತಿ, ಉದ್ಯಾವರ ಗಣಪತಿ, ಬಾರಕೂರು ಬಟ್ಟೆ ಗಣಪತಿ, ಗುಡ್ಡಟ್ಟು ಗಣಪತಿ, ಪೆರ್ಣ ಂಕಿಲ ಗಣಪತಿ ಹೀಗೆ ಹತ್ತು ಹಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು ಉಡುಪಿ ಜಿಲ್ಲೆಯ ಸುತ್ತಮುತ್ತಲು ಕಂಡುಬರುತ್ತದೆ.

ಹೀಗೆಯೇ ಅವುಗಳ ಸಾಲಿನಲ್ಲಿ ಬರು ವುದು ಇತಿಹಾಸ ಪ್ರಸಿದ್ಧ ಶಿರಿಯಾರ ಕಲ್ಲು ಗಣಪತಿ ದೇವಸ್ಥಾನ. ಈ ಕಲ್ಲು ಗಣಪತಿ ದೇವಸ್ಥಾನವನ್ನು ೧೨ನೇ ಶತಮಾನದಲ್ಲಿ ತುಳುನಾಡನ್ನು ಆಳಿದ ಭೂತಾಳ ಪಾಂಡ್ಯ ರಾಜನು ಕಟ್ಟಿಸಿದನೆಂದು ಕ್ಷೇತ್ರದ ಅರ್ಚಕರಾದ ರಾಮಕೃಷ್ಣ ಅಡಿಗರು ಉಲ್ಲೇಖಿಸುತ್ತಾರೆ. ಪ್ರಕೃತಿ ನಿರ್ಮಿತ ಗುಹೆಯೊಳಗೆ ಶಿಲ್ಪಿ ಶಿಲಾಮಯ ಗುಡಿ ನಿರ್ಮಾಣ ಮಾಡಿದ್ದನ್ನು ಕಂಡಾಗ ಅದ್ಭುತ ಎನಿಸುತ್ತದೆ.

ಇಂತಹ ಕೌತುಕಮಯ ಕಲ್ಲು ಗಣಪತಿ ದೇವಸ್ಥಾನ ಉಡುಪಿ ನಗರದಿಂದ ೨೫ ಕಿ.ಮೀ. ದೂರದ ಶಿರಿಯಾರ ಗ್ರಾಮದ ಪಡುಮುಂಡದಲ್ಲಿ ಇರುವುದು. ಆದರೆ ಇದು ಹೊರಪ್ರಪಂಚಕ್ಕೆ ಅಷ್ಟೊಂದು ಪ್ರಚಲಿತವಾಗದೆ ಅಜ್ಞಾತವಾಗಿಯೇ ಇದೆ. ಒಂದು ಸಣ್ಣ ಬಂಡೆಯ ಮೇಲೆ ದೊಡ್ಡ ಬಂಡೆ, ಅದರ ಮೇಲೆ ಮತ್ತೊಂದು ಬಂಡೆ. ಹೀಗೆ ಮೂರು ಅಂತಸ್ತುಗಳಲ್ಲಿ ಪ್ರಕೃತಿಯೆ ವಿಸ್ಮಯವಾಗಿ ನಿರ್ಮಾಣ ಮಾಡಿದ ಪರ್ವತದಲ್ಲಿ  ದೃಶ್ಯ ಕಾಣಬಹುದು.

ಶಿಲೆಯ ಸಂದುಗಳಲ್ಲಿ ಇರುವ ಅಲ್ಪ ಸ್ವಲ್ಪ ಮಣ್ಣಿನಲ್ಲಿ  ಗಿಡ ಮರಗಳು ಬೇರು ಬಿಟ್ಟು- ಬೆಳೆದು ಶಿಲಾಪರ್ವತಕ್ಕೆ ಹಸಿರ ಸೊಬಗು ನೀಡಿದೆ. ಈ ಗೊಮ್ಮಟ ಆಕೃತಿಯ ಶಿಲಾ ಪರ್ವತವು ಕರಾವಳಿಯ  ಜೀವನದಿ ವಾರಾಹಿ ನದಿಯಿಂದ ಕವಲೊಡೆದ ನದಿಯ ದಂಡೆಯ ಮೇಲಿದೆ.  ಪರ್ವತದ ಸುತ್ತಲು ಭತ್ತದ ಗದ್ದೆಗಳು ಆವರಿಸಿಕೊಂಡಿವೆ. ಅಲ್ಲಲ್ಲಿ ನಾಡ ಹಂಚಿನ ಮನೆಗಳು ಎದ್ದು  ಕಾಣುತ್ತವೆ. ಇಂತಹ ಪ್ರಕೃತಿ  ರಮಣೀಯವಾದ ಸ್ಥಳದಲ್ಲಿ ಕಲ್ಲಿನ ಪರ್ತತದೊಳಗೊಂದು ’ಗುಹೆ’ಯನ್ನು ಪ್ರಕೃತಿಯೇ ನಿರ್ಮಾಣ ಮಾಡಿದೆ. ಅದರೊಳಗೊಂದು ಶಿಲಾಮಯ ದೇವಸ್ಥಾನ ನಿರ್ಮಾಣವಾಗಿದೆ. ದೇವಸ್ಥಾನದ ಗರ್ಭಗುಡಿಯೊಳಗೆ ಶಿವ, ಪಾರ್ವತಿ ಗಣಪತಿ ದೇವರ ವಿಗ್ರಹಗಳಿವೆ. ದೇವಸ್ಥಾನದ ಅರ್ಚಕರು ನಿತ್ಯವೂ ಪೂಜಿಸಿಕೊಂಡು ಬಂದಿದ್ದಾರೆ. ಗಣೇಶ ಚತುರ್ಥಿ, ಸಂಕಷ್ಠಿಯ ದಿನಗಳಂದು ಇಲ್ಲಿ ಭಕ್ತರ ಸಂಖ್ಯೆ ತುಂಬ ಹೆಚ್ಚು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top