fbpx
Awareness

“ಮಾಸ್ತಿಗುಡಿ” ತಂಡದಿಂದ ಮೊತ್ತೊಂದು ಕರ್ಮಕಾಂಡ (with proof)

“aralikatte.com” ನಿಂದ ಮಾಸ್ತಿಗುಡಿ ಸಿನಿಮಾ ತಂಡದ ಕರ್ಮಕಾಂಡ ಬಯಲು . ಮಾಸ್ತಿಗುಡಿ ಒಂದು ಕೋರಿಯನ್ ಫಿಲಿಮ್ ನಿಂದ ಕದ್ದ ಕಥೆ . ಬರಿ ಕತೆ ಮಾತ್ರ ಅಲ್ಲ ಅದರ ವಿಡಿಯೋ ಸಹ ಕದ್ದಿದೆ !! (with proof)

“ಮಾಸ್ತಿಗುಡಿ” ಸಿನಿಮಾ ಶೂಟಿಂಗ್ ಸಮಯದಲ್ಲೇ ೨ ಕನ್ನಡ ಜೀವಗಳಾದ ಉದಯ್ ಮತ್ತು ಅನಿಲ್ ರವರನ್ನು ಬಳಿ ತೆಗೆದುಕೊಂಡಿತ್ತು. ಅದರ ಕಾರಣದಿಂದ ಜೈಲು ಪಾಲಾಗಿದ್ದ ನಿರ್ದೇಶಕ, ಸಾಹಸ ನಿರ್ದೇಶಕ, ಮತ್ತು ನಿರ್ಮಾಪಕರು ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಸ್ತಿ ಗುಡಿ ಚಿತ್ರದ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಚಿತ್ರವನ್ನು ದುರಂತ ಸಾವಿಗೀಡಾಗಿದ್ದ ಉದಯ್ ಮತ್ತು ಅನಿಲ್ ರವರಿಗೆ ಅರ್ಪಿಸಲಾಗಿದೆ ಎಂದು ಸುಳ್ಳು ಹೇಳಿ ಸಿಂಪತಿ ಗಿಟ್ಟಿಸಲು ಪ್ರಯತ್ನ ಪಡುತ್ತಿದ್ದೆ. ಇವರು ಉದಯ್ ಮತ್ತು ಅನಿಲ್ ಮಾಡಿದ್ದು ಸಾಹಸವೇ ಅಲ್ಲ ಅದು ಒಂದು ಬರಿ “accident” ಅಂತ ಕೋರ್ಟ್ ಗೆ ಮುಚ್ಚಲಿಕ್ಕೆ ಬರೆದು ಕೊಟ್ಟ ಸಾಹಸ ನಿರ್ದೇಶಕ ರವಿ ವರ್ಮಾ ನನ್ನ ಕನ್ನಡಿಗರು ಕ್ಷಮಿಸಲು ಸಾಧ್ಯವೇ !!

ಈಗ “aralikatte.com” ಮಾಸ್ತಿಗುಡಿಯ ಇನ್ನೊಂದು ಕರ್ಮಕಾಂಡ ಬೆಳಕಿಗೆ ತರುತಿದೆ . ಈ ಫಿಲಿಮ್ ನಲ್ಲಿ ನಾವು ಸಕತ್ ದುಡ್ಡು ಖರ್ಚು ಮಾಡಿ VFX ಮತ್ತೆ ಆಕ್ಷನ್ ಗೆ ಮಾಡಿದೀವಿ ಅಂತ ಸುಳ್ಳು ಹೇಳುತಿದೆ . ಇದು ಒಂದು ನೈಜ ಕಥೆ ಅನೋದು ಮತ್ತೊಂದು ಸುಳ್ಳು.

ನಿಜ ಹೇಳಬೇಕೆಂದರೆ ಇದು ಒಂದು ಕೋರಿಯನ್ ಸಿನಿಮಾ . ಈ ಸೀನಿಮಾ ತಂಡ ಬರಿ ಕಥೆ ಕದ್ದಿಲ್ಲ , ಆ ಸಿನೆಮಾ ವಿಡಿಯೋ ಸಹ ಕದ್ದಿದಾರೆ .. ಪ್ರೂಫ್ ಬೇಕೇ ಕೆಳಗೆ ಇರುವ ವಿಡಿಯೋ ನೋಡಿ

ಮಾಸ್ತಿಗುಡಿ ಟ್ರೈಲರ್ ನ ಒಂದು ದೃಶ್ಯ (video):

ಕೋರಿಯನ್ ಮೂವಿಯಾ ಒಂದು ದೃಶ್ಯ (video) :

2015 ರಲ್ಲಿ ಬಿಡುಗಡೆಯಾದ  “The Tiger An Old Hunter’s Tale” ಸಿನಿಮಾ ದಿಂದ ಕದ್ದ ಸರಕು ಈ ಮಾಸ್ತಿಗುಡಿ .

ಮಾಸ್ತಿಗುಡಿ ಟ್ರೈಲರ್ ನ ಚಿತ್ರ :

“The Tiger An Old Hunter’s Tale” ಸಿನಿಮಾದ ಚಿತ್ರ :

ನೋಡಿ ಒಬ್ಬ ಕೊರಿಯನ್ ಮಾನುಷ ಮಾಸ್ತಿಗುಡಿ ಟ್ರೈಲರ್ ನಲ್ಲಿ ಕಾಣಿಸುತ್ತಾನೆ !!!!

 

ಈ ತರ ಸಿನೆಮಾದಿಂದ ಕನ್ನಡಿಗ ಹೆಸರನ್ನು ಹಾಳು ಮಾಡುತ್ತಿರುವ ನಿರ್ದೇಶಕ, ಸಾಹಸ ನಿರ್ದೇಶಕ, ಮತ್ತು ನಿರ್ಮಾಪಕರಿಗೆ ನಮ್ಮ ಒಂದು ಧಿಕ್ಕಾರವಿರಲಿ. ಇನ್ನಾದರೂ ಕನ್ನಡ ಫಿಲಿಮ್ ಚೇಂಬರ್ ಈ ಚಿತ್ರ ತಂಡದ ವಿರುದ್ಧ ಕ್ರಮ ತಗೋಳಲಿಲ್ಲ ಅಂದರೆ ಸಾಮಾನ್ಯ ಜನರು ನಿಮಗೆ ಪಾಠ ಕಲಿಸಬೇಕಾಗುತ್ತದೆ !!!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top