fbpx
cinema

ಮಾಸ್ತಿಗುಡಿ ಚಿತ್ರದ ಟ್ರೇಲರ್‍ ಬಿಡುಗಡೆ: ಅಗಲಿದ ಗೆಳೆಯರ ನೆನಕೆ

ಉದಯ್ ಮತ್ತು ಅನಿಲ್ ದುರಂತ ಸಾವಿಗೀಡಾಗಿದ್ದಿದು ವಿಪರ್ಯಾಸ. ಅದರ ಕಾರಣದಿಂದ ಜೈಲು ಪಾಲಾಗಿದ್ದ ನಿರ್ದೇಶಕ, ಸಾಹಸ ನಿರ್ದೇಶಕ, ಮತ್ತು ನಿರ್ಮಾಪಕರು ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಸ್ತಿ ಗುಡಿ ಚಿತ್ರದ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಚಿತ್ರವನ್ನು ದುರಂತ ಸಾವಿಗೀಡಾಗಿದ್ದ ಉದಯ್ ಮತ್ತು ಅನಿಲ್ ರವರಿಗೆ ಅರ್ಪಿಸಲಾಗಿದೆ.

ಮೊನ್ನೆ ಚಿತ್ರದ ಟ್ರೇಲರ್ ನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಮೂರೇ ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್, ಅಮುಲ್ಯ, ಕೃತಿಕರಬಂದ, ಅನಿಲ್, ಉದಯ್ ನಟಿಸಿದ್ದಾರೆ. ಸಂಗೀತ ಸಾಧುಕೋಕಿಲ, ನಿರ್ದೇಶಕ ನಾಗಶೇಖರ್. ಟ್ರೇಲರ್ ನ್ನು ಇಲ್ಲಿ ನೋಡಿ.

ನಟ ವಿಜಯ್ ಅಭಿನಯದ “ಮಾಸ್ತಿಗುಡಿ” ಸಿನಿಮದ ಕೊನೆಯ ಹಂತದ ಚಿತ್ರೀಕರಣದ ವೇಳೆ ನಡೆದಂತಹ ದುರಂತದಿಂದ ಚಿತ್ರ ನಿಶಬ್ದವಾಗಿತ್ತು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರೀಕರಣ ಮುಂದುವರೆಸಿ ಬಿಡುಗಡೆಗೆ ಈಗ ಸಮ್ಮತಿ ನೀಡಿರುವುದರಿಂದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಈ ಚಿತ್ರವು ನೈಜಕಥೆಯನ್ನಾಧರಿಸಿದ್ದು ವಿಜಯ್ ಮೂರು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಯುವಕ ಮಧ್ಯ ವಯಸ್ಕ ಮತ್ತು ಮುದುಕ ಈ ಮೂರು ಪಾತ್ರಗಳಲ್ಲಿ ವಿಜಯ್ ಅಭಿನಯವಿದ್ದು ಅಮೂಲ್ಯ ಮತ್ತು ಕೃತಿಕರಬಂಧ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top