fbpx
Achivers

ಮನೆಯ ಕೆಲಸಕ್ಕು ಸೈ , ಮನೆಗಾಗಿ ದುಡಿಯಲು ಸೈ ! ಇಲ್ಲಿದೆ ನೋಡಿ ಅಮ್ಮಂದಿರ ಮಾರ್ಕೆಟ್!!!

 ಮಾರ್ಕೆಟ್ ಗೆ ಒಬ್ಬರೇ ಸ್ತ್ರೀ ಹೋಗಲು ಅಂಜುವ ಈ ಕಾಲದಲ್ಲಿ , ಮಣಿಪುರದ ರಾಜಧಾನಿ ಇಂಫಾಲ್ ನಲ್ಲಿ ಇದೆ ‘ ಮದರ್ಸ್ ಮಾರ್ಕೆಟ್ ‘. ಇದನ್ನು ಅವರ ಭಾಷೆಯಲ್ಲಿ ಇಮಾ ಕೇಈಥಲ್ ಎನ್ನುತಾರೆ . ಇಡೀ ಏಷ್ಯಾ ಖಂಡ ದಲ್ಲಿ ಇರುವ ಅತಿ ದೊಡ್ಡ , ಸ್ತ್ರೀಯರೇ ವ್ಯಾಪಾರಿ ಆಗಿರುವ ಮಾರ್ಕೆಟ್ ಇದು . ಇಲ್ಲಿ ಪುರುಷ ವ್ಯಾಪಾರಿಗಳಿಗೆ ಅನುಮತಿ ಇಲ್ಲ. ಇಲ್ಲಿ ೪೦೦೦ ಮಹಿಳೆಯರು ದಿನ ನಿತ್ಯದ ವ್ಯಾಪಾರದಲ್ಲಿ ತೊಡಗಿರುತ್ತಾರೆ .

Image result for women market imphal

Source: North-East Today

ಇದು ಇಂದು ನೆನ್ನೆಯದ್ದಲ್ಲ ಈ ಮಾರ್ಕೆಟ್ ಗೆ ೫೦೦ ವರ್ಷದ ಇತಿಹಾಸವಿದೆ. ಇದು ಶುರುವಾಗಿದ್ಧು ೧೬ನೆ ಶತಮಾನದಲ್ಲಿ . ಆ ಸಮಯದಲ್ಲಿ ಮನೆಯ ಗಂಡಸರು ಮನೆ ಬಿಟ್ಟು ಯುದ್ಧಕ್ಕೆಂದು ಹೋದಾಗ , ಮನೆ ತೂಗಿಸುವ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲೆ ಬಿತ್ತು. ಅವಾಗ ಶುರು ಆಗಿದ್ದೆ ಈ ಅಮ್ಮಂದಿರ ಮಾರ್ಕೆಟ್ .

ಈ ಮಾರ್ಕೆಟ್ ನಲ್ಲಿ ದಿನ ನಿತ್ಯದ ಎಲ್ಲ ಸಾಮಗ್ರಿಗಳು ದೊರೆಯುತದೆ . ಹಣ್ಣು , ತರಕಾರಿ , ಮಾಂಸ ದಿಂದ ಹಿಡಿದು ಬಟ್ಟೆ , ಮಣಿಪುರದ ಸಾಂಸ್ಕೃತಿಕ ವಸ್ತುಗಳು ಸಹ ಸಿಗುತ್ತದೆ . ಇಲ್ಲಿನ ಎಲ್ಲ ಹೆಂಗಸರು , ಅಕ್ಕ ತಂಗಿ , ಅಮ್ಮ ಮಗಳಾಗಿ ಬಿಟ್ಟಿದ್ದಾರೆ . ಇವರೆಲ್ಲ ಅನ್ಯೂನ್ಯವಾಗಿದ್ದರೆ.

Image result for women market imphal

ಇವರಲ್ಲಿ ಜಗಳವಿಲ್ಲ , ಮನಸ್ತಾಪವಿಲ್ಲ ಅಥವಾ ಈರ್ಷೆ ಇಲ್ಲ . ಇಲ್ಲಿ ದುಃಖ ಹಂಚಿಕೊಳ್ಳುತಾರೆ , ನಗುತಾರೆ , ಆಟವಾಡುತಾರೆ. ಅವರಿಗೆ ಇದು ನೆಮ್ಮದಿ ಕೊಡುವ ಸ್ಥಳ . ಅಂದಹಾಗೆ ಈ ಹೆಂಗಸರು ಅದ್ಬುತ ವ್ಯಾಪಾರಿಗಳು ಹೌದು . ಇಲ್ಲಿನ ವರ್ಷದ ಆಯವ್ಯಯ ( ಟರ್ನ್ ಓವರ್ ) 40 – 50 ಕೋಟಿ. ಅವರುಗಳ ಮಾತಿನಲ್ಲೇ ಹೇಳುವುದಾದರೆ ಅವರು ಅವರ ಮನೆ ಮಂದಿಗಾಗಿ ಹಾಗು ರಾಜ್ಯದ ಆರ್ಥಿಕತೆ ಗಾಗಿ ದುಡಿಯುತಿದ್ದಾರೆ. ಈ ಸ್ತ್ರಿಯರು ನಮ್ಮ ಸಮಾಜದ ಎಲ್ಲರಿಗು ಸ್ಪೂರ್ತಿ . ನಮ್ಮ ಕಡೆ ಇಂದ ಇವರಿಗೊಂದು ಸಲಾಂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top