fbpx
god

ಶಿವನ ಮೂರನೆ ಕಣ್ಣಿನ ಹಿಂದೆ ಅಡಗಿರುವ ರಹಸ್ಯ ಬಯಲು?

ಹಿಂದೂ ಧರ್ಮದ ಅನುಸಾರ, ಜೀವ ಸೃಷ್ಟಿ ೩ ಶಕ್ತಿಯನ್ನು ಒಳಗೊಂಡಿದೆ . ಬ್ರಹ್ಮ – ಎಲ್ಲದನ್ನು ಸೃಷ್ಟಿ ಮಾಡುವ ಶಕ್ತಿ ಇರುವಾತ . ವಿಷ್ಣು – ಸೃಷ್ಟಿಯಲ್ಲಿರುವ ಸಕಲ ಜೀವಿಗಳ ದಿನ ನಿತ್ಯದ ಹಣೆ ಬರಹ ಬರೆಯುವಾತ . ಶಿವ – ಎಲ್ಲವನ್ನು ನಾಶ ಮಾಡುವ ಶಕ್ತಿ ಇರುವಾತ.

Image result for shiva

ಬ್ರಹ್ಮ, ವಿಷ್ಣು ಎಷ್ಟು ಮುಖ್ಯವೊ ಶಿವನ ಶಕ್ತಿ ಕೂಡ ಅಷ್ಟೇ ಮುಖ್ಯ. ಈ ಶಿವನ ಸುತ್ತ ಸಾವಿರಾರು ನಿಗೂಢಗಳು, ರಹಸ್ಯಗಳು , ಒಗಟುಗಳೇ ಇವೆ. ಇದಕ್ಕೆ ಉತ್ತರಗಳಿಲ್ಲ , ಬದಲಾಗಿ ಊಹೆಗಳಿವೆ. ಅಂತ ನಿಗೂಢತೆಗಳಲೊಂದು ಈ ಶಿವನ ಮೂರನೇ ಕಣ್ಣು. ಈ ಮೂರನೇ ಕಣ್ಣಿನ ಬಗ್ಗೆ ಸಾವಿರಾರು ಕಥೆಗಳಿವೆ ಹಾಗು ನಂಬಿಕೆಗಳಿವೆ. ಶಿವ ತನ್ನ ಮೂರನೇ ಕಣ್ಣನ್ನ ತೆರೆಯುವುದು ಅವನಿಗೆ ಬಹಳ ಕೋಪ ಬಂದಾಗ ಎನ್ನುವುದು ಬಹಳ ಜನರು ನಂಬಿರುವ ಸಂಗತಿ.

ಆದರೆ ಈ ಮೂರನೇ ಕಣ್ಣು ಎನನ್ನು ಸೂಚಿಸುತ್ತದೆ ? ಶಿವನು ಅತ್ಯಂತ ಶಕ್ತಿಶಾಲಿ ದೇವರು ಎಂದ ? ಅಥವಾ ಇದು ಜೀವಿಗಳ ಮೆದುಳಿನ ಒಂದು ಅಂಗದ ಪ್ರತಿರೂಪ ಎಂದ ? ಶಿವನ ಈ ಮೂರನೇ ಕಣ್ಣಿನ ಬಗ್ಗೆ ಹಲಾವಾರು ಸಿದ್ದಂಥಗಳಿವೆ , ಅದರಲ್ಲಿ ಅತ್ಹ್ಯಂತ ಆಸಾಕ್ತಿ ತರುವ ಸಿದ್ಧಾನ್ತವೇ ಆ ಮೂರನೇ ಕಣ್ಣು ಜೇವಿಯ ಮೆದುಳಿನ ಮದ್ಯದಲ್ಲಿ ಇರುವ ಪೀನಲ್ ಗ್ರಂಥಿ ಯನ್ನು ಪ್ರತಿರೂಪಿಸುತ್ತದೆ ಎನ್ನುವುದು.

Image result for pineal gland third eye

ಈ ಪೀನಲ್ ಗ್ರಂಥಿ ಎಡ ಮೆದುಳು ಹಾಗು ಬಲ ಮೆದುಳಿನ ಮಧ್ಯದಲ್ಲಿ ಇರುತ್ತದೆ. ಈ ಗ್ರಂಥಿಯದು ಅಕ್ಕಿ ಕಾಳಿನ ಗಾತ್ರ . ಅದು ಬೆಳಕು ಸೂಕ್ಷ್ಮ ಅಂಗ . ಈ ಗ್ರಂಥಿಯು ಮೆದುಳಿನ ಮಧ್ಯ ಬಾಗದಲ್ಲಿ ಇದ್ದರು ಸಹ , ನಮ್ಮ ಕಣ್ಣಿಗಿರುವ ಹಲವಾರು ವಿಶೇಷಣಗಳು , ಗುಣ ಲಕ್ಷಣಗಳು ಈ ಗ್ರಂಥಿಗಿದೆ. ಈ ಗ್ರಂಥಿ ಬೆಳಕು ಸೂಕ್ಷ್ಮ , ಆದ್ದರಿಂದ ಇದನ್ನು ಮೂರನೇ ಕಣ್ಣು ಎಂದು ಹಲವಾರು ಬಾರಿ ಸಂಭೋದಿಸುವುದು ಉಂಟು. ಹಾಗಿದ್ದರೆ ನಮ್ಮ ಪೂರ್ವಜರಿಗೆ ಈ ಪೀನಲ್ ಗ್ರಂಥಿ ಯಾ ಬಗ್ಗೆ ತಿಳಿದಿತ್ತೇ ? ಇದರ ವಿಶೇಷಣಗಳ ಬಗ್ಗೆ ತಿಳಿದಿತ್ತೇ ? ಅನಾದಿಕಾಲದಿಂದ ಹಣೆಯ ಮದ್ಯ ಬಾಗವನ್ನು ಜ್ಞಾನೋದಯದ ಕೇಂದ್ರವೆಂದೇ ಪ್ರತಿಪಾದಿಸಲಾಗುತಿರುವುದು ಈ ಕಾರಣದಿಂದಲೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top