fbpx
god

ಧರ್ಮ ಸಂಸ್ಥಾಪನೆಗಾಗಿ ವಿಷ್ಣುವಿನ ಹತ್ತು ಅವತಾರಗಳು

ದಶಾವತಾರ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.

“ಯದ ಯದ ಹೀ ಧರ್ಮಸ್ಯ
ಗ್ಲಾನಿರ್ ಭವತಿ ಭಾರತ
ಅಭ್ಯುತ್ತಾನಂ ಅಧರ್ಮಸ್ಯ
ತದಾತ್ಮಾನಂ ಸೃಜಮ್ ಯಹಂ”
– ಭಗತವದ್ಗೀತೆ ಶ್ಲೋಕ

ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದುಬರುತ್ತೇನೆ ಎಂದು ಶ್ರೀಕೃಷ್ಣಭಗವದ್ಗೀತೆಯಲ್ಲಿ ಹೇಳಿದ್ದಾರೆ.

ವಿಷ್ಣುವಿನ ಹತ್ತು ಅವತಾರಗಳು

ಮೀನು

ಸತ್ಯ ಯುಗ ದಲ್ಲಿ ಮನುವನ್ನು ಮಹಾ ಪ್ರಳಯದಿಂದ ರಕ್ಷಿಸಲು ಎತ್ತಿದ ಅವತಾರ.

ಕೂರ್ಮ

ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು.

ವರಾಹ

ಹಿರಣ್ಯಾಕ್ಷ ಎಂಬ ರಾಕ್ಷಸನು ಭೂಮಿಯನ್ನು ಹೊತ್ತೊಯ್ದು ಸಮುದ್ರದೊಳಗೆ ಅಡಗಿಸಿಟ್ಟಿರುತ್ತಾನೆ. ಹಿರಣ್ಯಾಕ್ಷನಿಂದ ಭೂಮಿಯನ್ನು ಕಾಪಾಡಲು ಶ್ರೀಮಾನ್ ಮಹಾವಿಷ್ಣುವು ವರಾಹ ಅವತಾರ ತಾಳುತ್ತಾನೆ. ಹಿರನ್ಯಾಕ್ಷನೊಡನೆ ಸಾವಿರ ವರ್ಷಗಳ ಕಾಲ ಯುದ್ಧವನ್ನು ಮಾಡಿ, ಕೊನೆಗೆ ಹಿರಣ್ಯಾಕ್ಷನನ್ನು ಸಂಹರಿಸಿ, ಭೂಮಿಯನ್ನು ತನ್ನ ಕೋರೆಗಳ ಮೇಲೆ ಇಟ್ಟುಕೊಂಡು ಸಮುದ್ರದಿಂದ ಹೊರಗೆ ತರುತ್ತಾನೆ.

 

ನರಸಿಂಹ

ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ.

 

 

ವಾಮನ

ವಾಮನ ಅವತಾರದಲ್ಲಿ ಶ್ರೀಮಾನ್ ಮಹಾವಿಷ್ಣುವು ಕುಬ್ಜ ಬಾಲಕನಾಗಿ ಅವತರಿಸುತ್ತಾನೆ. ಈ ಅವತಾರವು ತ್ರೇತಾಯುಗದಲ್ಲಿ ಆಯಿತು ಎಂದು ಹೇಳಲಾಗುತ್ತದೆ.

ಪರಶುರಾಮ

ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗು ಶಿವನ ಶಿಷ್ಯ. ಅವನು ರೇಣುಕಾ ಹಾಗು ಸಪ್ತರ್ಷಿ ಜಮದಗ್ನಿಯ ಪುತ್ರ. ಅವನು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನು ಮತ್ತು ಅವನು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬನು.

ರಾಮ

ದಶರಥನ ಮಗ ರಾಮ ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ.

ಕೃಷ್ಣ

ವಸುದೇವನ ಮಗ ಕೃಷ್ಣ

ಮಹಾಭಾರತದಲ್ಲಿ ಶ್ರೀಕೃಷ್ಣನಿಗೆ ಪ್ರಮುಖ ಪಾತ್ರವಿದೆ

 

ಬುದ್ಧ 

ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ. ಈ ಅವತಾರವು ಕಲಿಯುಗದಲ್ಲಿ ಆಯಿತು ಎಂದು ಹೇಳಲಾಗುತ್ತದೆ.

ಕಲ್ಕಿ

ಕಲಿಯುಗದ ಅಂತ್ಯದಲ್ಲಿ ಅವತರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top