fbpx
Awareness

ಏನಾಗ್ತಿದೆ ನಮ್ಮ ಬೆಂಗಳೂರು? ಏನಾಗ್ತಿದೆ ನಮ್ಮ ಕನ್ನಡ?

20 ವರ್ಷಗಳ ಮುಂಚೆ, ಯಾರ ಬಾಯಲ್ಲಿ ನೋಡಿದರು ಕನ್ನಡ ನಲಿದಾಡುತ್ತಿತ್ತು, ಯಾವ ಥಿಯೇಟರ್ನಲ್ಲಿ ನೋಡಿದ್ರು ಕನ್ನಡ ಚಿತ್ರಗಳು!! ಮೆಜೆಸ್‌ಟಿಕ್ ನಿಂದ ಕೋರಮಂಗಲಕ್ಕೆ 10 ನಿಮಿಷದಲ್ಲಿ ತಲುಪಬಹುದಿತ್ತು. ಬೇಸಿಗೆಯಲ್ಲೂ ತಾಪಮಾನ 30 ಡಿಗ್ರೀ ದಾಟುತಿರಲಿಲ್ಲ. ಎಲ್ಲಿ ನೋಡಿದರು ಮರಗಳು, ಗುಬ್ಬಚ್ಚಿಗಳು…
ಈಗ, ಕನ್ನಡ ಮಾತಾಡುವವರನ್ನು ದುರ್ಬೀನಲ್ಲಿ ಹುಡುಕಬೇಕು. ಮೊನ್ನೆ ಲಾಲ್‌ಬಾಗ್ನಲ್ಲಿ ಒಬ್ಬ್ರು ಬಾಯಲ್ಲೂ ಕನ್ನಡ ಕೇಳಿಸಲಿಲ್ಲ. ಕೆಲವು ಕನ್ನಡ ಸ್ನೇಹಿತರೇ ಒಳ್ಳೆ ಕನ್ನಡ ಚಿತ್ರಗಳನ್ನು ನೋಡುತಿಲ್ಲ. ಇವತ್ತಿನ ತಾಪಮಾನ 41 ಡಿಗ್ರೀ. ವಲಸಿಗರು ನಮ್ಮ ಮೇಲೇ ದಬ್ಬಾಳಿಕೆ ಮಾಡ್ತಿದ್ದಾರೆ ಅಂದ್ರೆ ನಾಚ್ಕೆ ಆಗ್ಬೇಕು ನಮಗೆ.
ಬನ್ರಪ್ಪ ನಮ್ಮ ಕನ್ನಡ ಮತ್ತು ಬೆಂಗಳೂರನ್ನು ಉಳಿಸಲು ಫೇಸ್ಬುಕ್ ನಲ್ಲಿ ಕ್ರಾಂತಿ ನಡೆಸೋಣ, ಪ್ರತಿಭಟನೆ ಮಾಡೋಣ, ಧರಣಿ ಕೂತ್ಕೋಳೋಣ ಅಂತ ನಾನು ಹೇಳ್ತಿಲ್ಲ…
ಇಷ್ಟು ಮಾಡಿದ್ರೆ ಸಾಕು:

1.ನಿಮ್ಮ ಕಂಪೆನಿಗಳಲ್ಲಿ ಕನ್ನಡಿಗರನ್ನ ರೆಫರ್ ಮಾಡಿ .
2. ಪರಭಾಷಾ ವ್ಯಾಮೋಹ ಬಿಟ್ಟು, ಎಲ್ಲಾ ಕಡೆ ಕನ್ನಡದಲ್ಲಿ ವ್ಯವಹರಿಸಿ. “ಕನ್ನಡದಲ್ಲಿ ಮಾತಾಡಿದರೆ ನನ್ನ ಲೋ ಕ್ಲಾಸ್ ಅನ್ಕೋತಾರೆ” ಅನ್ನೋ ಹುಚ್ಚು ಕೀಳರಿಮೆ ಬಿಡಿ. ನನ್ನ ಭಾಷೆ, ನನ್ನ ಹೆಮ್ಮೆ.
3. ವಲಸಿಗರಿಗೆ ನಾವು ತೋರಿದ ವಿಶಾಲ ಮನೋಭಾವ ಸಾಕು. ಅವರ ಜೊತೆ ಕನ್ನಡದಲ್ಲೇ ವ್ಯವಹರಿಸಿ. ಅವರು ಇಲ್ಲಿ ಬದುಕಬೇಕಾದರೆ ಕನ್ನಡ ಕಲಿಯಲೇಬೇಕು.
4. ಯಾವುದೇ ಕಂಪನೀಗಳಲ್ಲಿ, ಕಸ್ಟಮರ್ ಕೇರ್, KFC, McD, Pizzahut, ಮುಂತಾದವುಕಡೆ ಕನ್ನಡದಲ್ಲಿ ವ್ಯವಹರಿಸಿ, ಅಥವ ಕನ್ನಡದಲ್ಲಿ ಸೇವೆ ಕೇಳಿ. ಅದು ನಿಮ್ಮ ಹಕ್ಕು ಕೂಡ.
5. ಒಳ್ಳೆಯ ಕನ್ನಡ ಚಿತ್ರ ತೆರೆಕಂಡಾಗ, ಮೊದಲು ಕನ್ನಡ ಚಿತ್ರಕ್ಕೆ ಆದ್ಯತೆ ಕೊಡಿ.
6. ಕಾರ್/ ಬೈಕ್ ಪೂಲಿಂಗ್, ಮೆಟ್ರೋ, BMTC ಸಾರಿಗೆಯನ್ನು ಆದಷ್ಟು ಬಳಸಿ, ಎಲ್ಲದರಲ್ಲಿ ಕನ್ನಡ FM ಕೇಳಿ.
7. ಒಬ್ಬೊಬ್ಬ್ರು ಒಂದ್ ಒಂದು ಮರ ಬೆಳೆಸಿದರೂ ಸಾಕು, ತಾಪಮಾನ ಎಷ್ಟೋ ಕಡಿಮೆ ಆಗುತ್ತೆ.
8. ನಿಮ್ಮ ಮನೆಯ ಟೆರೇಸ್ ಮೇಲೆ ಪಕ್ಷಿಗಳಿಗೆ ಸ್ವಲ್ಪ ನೀರು ಮತ್ತೆ ಕಾಳುಗಳನ್ನು ಇಡಿ. ಇರೋ ಪಕ್ಷಿಗಳನ್ನಾದ್ರೂ ಉಳಿಸೋಣ.
ಈ ಎಲ್ಲಾ ವಿಷಯಗಳು ಎಲ್ಲರಿಗೂ ಗೊತ್ತಿರೋದೇ. ಬರೀ ಫೇಸ್ಬುಕ್ ಸ್ಟೇಟಸ್ ಹಾಕೋದ್ರಿಂದ, ಮಾತಾಡುವುದರಿಂದ ಏನ್ನನ್ನೂ ಬದಲಿಸಲು ಸಾಧ್ಯವಿಲ್ಲ. ಬದಲಾವಣೆ ನಮ್ಮಿಂದ ಮಾತ್ರ ಸಾಧ್ಯ. ಇದು ಎಲ್ಲರಲ್ಲೂ ಅಡಗಿರುವ ಕನ್ನಡಾಭಿಮಾನವನ್ನು ಬಡಿದೆಬ್ಬಿಸುವ ನನ್ನ ಒಂದು ಪ್ರಯತ್ನ. ನನ್ನ ಕನ್ನಡ, ನನ್ನ ಬೆಂಗಳೂರು, ನನ್ನ ಹೆಮ್ಮೆ.
ನಿಮಗೂ ಹೀಗೆ ಅನಿಸಿದ್ದಲ್ಲಿ, ಇದನ್ನು ಆದಷ್ಟು ಶೇರ್ ಮಾಡಿ, ಈ ಮೇಲಿನ ಬದಲಾವಣೆಗಳನ್ನು ಎಷ್ಟು ಜನರು ಪಾಲಿಸುತ್ತಾರೋ, ಅಷ್ಟು ಬೇಗ ನಶಿಸುತಿರುವ ನಮ್ಮ ಭಾಷೆ ಮತ್ತು ನಗರವನ್ನು ಉಳಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top