fbpx
News

ಬ್ಯಾಂಕ್‍ನಲ್ಲಿ ಹಣ ಜಮೆಯ ವಿವರಣೆ ಕೊಡಿ: 13 ಲಕ್ಷ ಜನರಿಗೆ ಎಸ್‍ಎಂಎಸ್‍, ಇ—ಮೇಲ್‍ ಸಂದೇಶ

ನೋಟ್‍ ರದ್ದು ನಂತರ ಬ್ಯಾಂಕ್‍ ಖಾತೆಗಳಲ್ಲಿ 18 ಜನರು ಅನುಮಾನಕ್ಕೆಡೆ ಮಾಡಿಕೊಡುವಷ್ಟು ದೊಡ್ಡ ಮೊತ್ತವನ್ನು ಜಮೆ ಮಾಡಿರುವುದನ್ನು ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ. ಈ ಬಗ್ಗೆ ವಿವರಣೆ ನೀಡುವಂತೆ ಕೋರಿ ಸುಮಾರು 13 ಲಕ್ಷ ಜನರಿಗೆ ಎಸ್‍ಎಂಎಸ್‍ ಮತ್ತು ಇ-ಮೇಲ್‍ ಮೂಲಕ ಸಂದಶ ರವಾನಿಸಿದೆ.

ನವೆಂಬರ 8ರಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದರು. ನಂತರದ ದಿನಗಳಲ್ಲಿ ಬ್ಯಾಂಕ್‍ಗಳಲ್ಲಿ ಭಾರೀ ಪ್ರಮಾಣದ ಜಮೆಯಾಗಿದ್ದು, 18 ಲಕ್ಷ ಖಾತೆಗಳಲ್ಲಿ ಲೆಕ್ಕ ಮೀರಿದ 4.7 ಲಕ್ಷ ಕೋಟಿ ರೂ. ಜಮೆಯಾಗಿರುವುದನ್ನು ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.

ಖಾತೆದಾರರ ಆದಾಯಕ್ಕೂ ಹಾಗೂ ಬ್ಯಾಂಕ್‍ನಲ್ಲಿ ಜಮೆಯಾದ ಮೊತ್ತಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಅಂತಹವರ ಮೊಬೈಲ್‍ಗಳಿಗೆ `ಪ್ಲೀಸ್‍ ಎಕ್ಸ್ ಪ್ಲೇಯಿನ್‍’ ಎಂದು ಎಸ್‍ಎಂಸ್‍ ಹಾಗೂ ಇ-ಮೇಲ್‍ಗಳಿಗೆ ಸಂದೇಶ ಕಳುಹಿಸಲಾಗುತ್ತಿದೆ.

`ಆಪರೇಷನ್‍ ಕ್ಲೀನ್ ಮನಿ’ ಕಾರ್ಯಾಚರಣೆಯನ್ನು ಫೆಬ್ರವರಿ ಮೊದಲ ವಾರ ಆರಂಭಿಸಲಿದ್ದು, ಮುಂಚಿತವಾಗಿ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ. 10 ದಿನದೊಳಗಾಗಿ ಉತ್ತರ ನೀಡದೇ ಇದ್ದರೆ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಚಂದ್ರ ತಿಳಿಸಿದ್ದಾರೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top