ಕ್ರಿಕೆಟ್ನಲ್ಲಿ ೨ ವಿಶ್ವ ಕಪ್ ಗಳನ್ನೂ ಗೆದ್ದಿರುವ ನಾಯಕ ಯಾರು ? ಎಂದರೆ , ನಮಗೆ ತಟ್ಟನೆ ಹೊಳೆಯುವುದು ಮಹೇಂದ್ರ ಸಿಂಗ್ ಧೋನಿ . ಆದರೆ ಬಹಳ ಜನಕ್ಕೆ ತಿಳಿದಿರದ ವಿಚಾರ ಏನೆಂದರೆ , ಆ ಪ್ರಶ್ನೆಗೆ ಮತ್ತೊಂದು ಉತ್ತರವಿದೆ . ಅದು ಹೇಗೆ ಎನ್ನುತೀರಾ ? ಭಾರತದ ಕುರುಡು ಕ್ರಿಕೆಟ್ ತಂಡದ ನಾಯಕ , ೨೦೧೭ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶೇಖರ್ ನಾಯಕ್ ಕೂಡ ಭಾರತಕ್ಕೆ 2 ವಿಶ್ವ ಕಪ್ ಗೆದ್ದಿದ್ದಾರೆ.
ಇವರು ಹುಟ್ಟು ಕುರಡರು , ಇವರಿಗೆ ಕುರುಡುತನ ಅನುವಂಶೀಯ. ೧೯೮೬ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದ ಇವರು , ಕ್ರಿಕೆಟ್ ನ ಅಪರಿಮಿತ ಪ್ರೇಮಿ. ಅವರ ಬಾಲ್ಯಾವಸ್ಥೆಯ ಮೊದಲ ೬ ವರ್ಷ ಪೂರ್ಣ ಕುರುಡರಾಗಿ ಇರುತ್ತಾರೆ. ಒಂದು ದಿನ ಬಿದ್ದಿದ್ದೆ ನೆಪವಾಗಿ ಆಸ್ಪತ್ರೆಗೆ ಹೋದಾಗ , ಅಲ್ಲಿನ ಕಣ್ಣಿನ ಡಾಕ್ಟರ್ , ಇವರಿಗೆ ಆಪರೇಷನ್ ಮಾಡಿದರೆ ಕಣ್ಣು ಬರುವ ಸಾಧ್ಯತೆ ಇದೆ ಎಂದು ಹೇಳುತಾರೆ. ಇದೆ ಇವರ ಬದುಕಿನ ಮಹತ್ವದ ತಿರುವು.
ಆ ತಜ್ಞರ ಸಲಹೆಯ ಮೇರೆಗೆ ಇವರಿಗೆ ಆಪರೇಷನ್ ಮಾಡಲಾಗುತ್ತದೆ , ಆ ಆಪರೇಷನ್ ಭಾಗಶಃ ಯಶಸ್ಸಾಗುತ್ತದೆ. ಅವರಿಗೆ ಬಲಗಣ್ಣಿಗೆ ಶೇಕಡಾ 60 ರಷ್ಟು ದೃಷ್ಟಿ ಬರುತ್ತದಾದರೂ , ಎಡ ಕಣ್ಣು ಹಾಗೆಯೆ ಉಳಿಯುತ್ತದೆ.
೧೯೯೪ ರಲ್ಲಿ ಅವನ ತಂದೆ ತೀರಿಕೊಳ್ಳುತಾರೆ. ಆದರೂ ಅವನು ಧ್ರುತಿಗೆಡುವುದಿಲ್ಲ. ಅವನನ್ನು ಶಿವಮೊಗ್ಗದ ಶ್ರೀ ಶಾರದಾ ದೇವಿ ಕುರುಡರ ಶಾಲೆಗೇ ಸೇರಿಸಲಾಗುತ್ತದೆ . ಅವರ ತಾಯಿಗೆ ಮಗನಿಗೆ ಓದಿನ ಕಡೆ ಏಕಾಗ್ರತೆ ಇರಲಿ ಎಂದು ಆಸೆ ಇದ್ದರು ಸಹ ಶೇಖರಿಗಿದ್ದ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಗಮನಿಸಿ ಅದೇ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಹಿಸುತ್ತಾರೆ. ಶೇಖರ್ ಅವರಿಗೆ ತಾಯಿಯೇ ಆಧಾರ ಸ್ಥಂಭವಾಗುತ್ತಾರೆ .
ಆದರೆ ದುರದೃಷ್ಟವಶಾತ್ ೧೯೯೮ ರಲ್ಲಿ ಅವರ ತಾಯಿ ತೀರಿಕೊಳ್ಳುತಾರೆ. ಶೇಖರ್ ಅವರಿಗೆ ದಿಕ್ಕೇ ತೋಚದಂತಾಗುತ್ತದೆ. ಹೊಲದಲ್ಲಿ ಕೆಲಸ ಮಾಡಿ 1000 – 1500 ರೂಪಾಯಿಗಳು ದುಡಿಯಲು ಶುರು ಮಾಡುತಾರೆ. ಎಷ್ಟೇ ಆದರೂ ಪ್ರೀತಿ , ಕಾಳಜಿ ಎನ್ನುವುದು ಅವರ ಪಾಲಿಗೆ ಮರೀಚಿಕೆಯಾಗೇ ಉಳಿಯುತ್ತದೆ. ೨೦೦೦ ಇಸವಿಯಲ್ಲಿ ಮಂಡ್ಯದಲ್ಲಿ ನಡೆದ ಒಂದು ಕ್ರಿಕೆಟ್ ಕ್ರೀಡಾಕೂಟದಲ್ಲಿ ಅವರು ೪೬ ಬಾಲಿಗೆ ೧೩೬ ರನ್ ಹೊಡಿಯುತ್ತಾರೆ.
ನಂತರ ಅವರು ಕರ್ನಾಟಕದ ತಂಡಕ್ಕೆ ಆಯ್ಕೆಯಾಗುತ್ತಾರೆ . ಹೀಗೆ ಒಂದೊಂದೇ ಮೆಟ್ಟಿಲುಗಳು, ಸವಾಲುಗಳನ್ನ ದಾಟಿ ಕಡೆಗೆ ೨೦೧೦ ರಲ್ಲಿ ಅವರು ಭಾರತ ತಂಡದ ನಾಯಕನಾಗುತ್ತಾರೆ. ೨೦೧೨ ರಲ್ಲಿ ಇವರ ನಾಯಕತ್ವದ ತಂಡ ಚೊಚ್ಚಲ T20 ವಿಶ್ವ ಕಪ್ ಗೆಲ್ಲುತ್ತದೆ ತದನಂತರ 2014 ರ ಏಕದಿನ ವಿಶ್ವ ಕಪ್ ಕೂಡ ತನ್ನ ಮಡಿಗೇರಿಸಿಕೊಳ್ಳುತದೆ. ಅವರಿಗೆ ಇಷ್ಟೆಲ್ಲಾ ಸಾದಿಸಿದ ನಂತರವೂ ಅಭಿಮಾನಿಗಳ ಬಳಗವಿಲ್ಲ , ಬೆಂಬಲಿಸಲು ಬಿಸಿಸಿಐ ನಂತ ಸಂಸ್ಥೆಗಳಿಲ್ಲ . ಧನಸಹಾಯಕ್ಕೂ ಮುಂದೆಬರಲು ಹೆಚ್ಚು ಜನರಿಲ್ಲ . ಇವರಿಗೆ ಪ್ರಯೋಜಕರು ಕೂಡ ಇತ್ತೀಚಿಗೆ ಬರಲು ಆರಂಭಿಸಿದ್ದಾರೆ. ಇವರ ಈ ಸಾಧನೆಯನ್ನು ಕೇಂದ್ರ ಸರ್ಕಾರ ಗುರುತಿಸಿ , 2017 ರ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ , ಇವರನ್ನು ಅಭಿನಂದಿಸಿದೆ.
ಈ ಮಾಹಾನುಭಾವನ ಕಥೆ ಎಲ್ಲರಿಗು ಒಂದು ಸ್ಪೂರ್ತಿ , ಇಂಥವರ ಸಂತತಿ ಇನ್ನು ಹೆಚ್ಚಾಗಲಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
